Categories: ಮೈಸೂರು

ಮೈಸೂರಿನ ಶಂಕರ ಮಠದಲ್ಲಿ ಅತಿರುದ್ರ ಮಹಾಯಾಗ

ಮೈಸೂರು: ಏಳುದಶಕಗಳ ನಂತರ ಮೈಸೂರಿನ ಶಂಕರ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಅತಿರುದ್ರ ಮಹಾಯಾಗ ಅತ್ಯಂತ ವೈಭವದಿಂದ ನಡೆಯಿತು.

ಶೃಂಗೇರಿಯ ಶಾರದ ಪೀಠದ 34 ನೇ ಆಚಾರ್ಯರಾಗಿದ್ದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ಮೈಸೂರಿನ ಖಿಲ್ಲೆ ಮೊಹಲ್ಲದಲ್ಲಿರುವ ಶ್ರೀ ಶಂಕರ ಮಠದಲ್ಲಿ 70 ವರ್ಷಗಳ ಹಿಂದೆ ಅತಿರುದ್ರ ಮಹಾಯಾಗ ನಡೆಸಿದ್ದರು.   ಇದೀಗ ಮೈಸೂರಿನ ವಿಷ್ಣು ಪಾರಾಯಣ ಟ್ರಸ್ಟ್ ಮತ್ತು ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕಳೆದ ಐದು ದಿನಗಳಿಂದ ನಡೆದ ಅತಿರುದ್ರ ಮಹಾಯಾಗವು ಶುಕ್ರವಾರ 11 ಹೋಮಗಳು ಮತ್ತು ಪೂರ್ಣಾಹುತಿಯೊಂದಿಗೆ ಇದೆ ಶಂಕರ ಮಠದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥ ಶ್ರೀ ಪಾದಂಗಳವರು ಮತ್ತು ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿಗಳ ಆಶೀರ್ವಾದ ಮತ್ತು ಶ್ರೀ ಅರ್ಜುನ ಅವಧೂತರ ಸಾನ್ನಿಧ್ಯದಲ್ಲಿ ಪ್ರತಿನಿತ್ಯ ಗಣಪತಿ ಹೋಮ, ಪುಣ್ಯಾಹ ವಚನ , ಸುಹಾಸಿನಿ ಪೂಜೆ , ಲಲಿತಾ ಸಹಸ್ರನಾಮದೊಂದಿಗೆ 125 ಋತ್ವಿಕರು ಪ್ರಧನ ಅರ್ಚಕರರಾದ ವೇ.ಬ್ರ.ಶ್ರೀ ಶ್ರೀನಿವಾಸನ್ ಅವರ ನೇತೃತ್ವದಲ್ಲಿ  ಮಹಾಯಾಗ ನಡೆಸಿಕೊಟ್ಟರು.

ಕೊನೆ ದಿನದ ಕಾರ್ಯಕ್ರಮದಲ್ಲಿ ಬೆಲಗೂರು ಮಠದ ಶ್ರೀ ವಿಜಯ ಮಾರುತಿ ಸ್ವಾಮಿಗಳು , ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ , ನಿರ್ಮಾಪಕ ಉಮಾಪತಿ ಗೌಡ , ಶಾಸಕ ಎಲ್.ನಾಗೇಂದ್ರ, ಮೈಲಾಕ್ ಅಧ್ಯಕ್ಷ ಎನ್.ವಿ.ಫನೀಸ್, ವಸ್ತು ಪ್ರರ್ದಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಕಾಂಗ್ರೆಸ್ ಮುಖಂಡರಾದ ಬಿ.ಎಲ್. ಶಂಕರ್, ಹರೀಶ್ ಗೌಡ, ಮಾಜಿ ಸಂಸದ ವಿಜಯ ಶಂಕರ್, ಬಾಡಿ ಬಿಲ್ಡರ್ ಪಾನಿಪುರಿ ಕಿಟ್ಟಿ , ಮುಕ್ತ ವಿವಿ ಕುಲಪತಿ ವಿದ್ಯಾಶಂಕರ್,ಕಾಡ ಅಧ್ಯಕ್ಷ ಶಿವಲಿಂಗಯ್ಯ ಅವರುಗಳು ಸೇರಿದಂತೆ ಗಣ್ಯಾತೀತರು ಪಾಲ್ಗೊಂಡು ಸಾವಿರಾರೂ ಗುರು ಭಕ್ತರ ಸಮ್ಮುಖದಲ್ಲಿ  ಗುರುಗಳ ಜೊತೆ ತಮ್ಮ ಬಾಂಧವ್ಯ ಮತ್ತು ಅನುಭವವನ್ನು ಹಂಚಿಕೊಂಡರು.

ಶ್ರೀ ವಿಜಯ ಮಾರುತಿ ಸ್ವಾಮಿಗಳು ಮತ್ತು ಪರಮಪೂಜ್ಯ  ಶ್ರೀ ಅರ್ಜುನ ಅವಧೂತ ಗುರು ಮಹಾರಾಜರು ಆಶೀರ್ವಷನ ನೀಡಿದರು. ನಂತರ ಪೂಜ್ಯ ಗುರುಗಳು ಕಳೆದ ಐದು ದಿನಗಳಿಂದ ಸ್ವಚ್ಚತಾ ಕಾರ್ಯ ನಡೆಸಿದ ಮಹಿಳೆಯರ ಪಾದ ಪೂಜೆ ನೆರವೇರಿಸಿದರು.  ಪ್ರತಿ ದಿನ ಸಂಜೆ ಭಜನೆ ಭರತನಾಟ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಪ್ರತಿ ದಿನ ಎಲ್ಲಾ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

Ashika S

Recent Posts

ಆನ್‌ಲೈನ್ ಟ್ರೇಡಿಂಗ್: 17.35 ಲಕ್ಷ ರೂ. ವಂಚನೆ

ಆನ್‌ಲೈನ್ ಪಾರ್ಟ್‌ಟೈಮ್ ಕೆಲಸ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೇಸೆಜ್ ನ‌ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 17.35 ಲಕ್ಷ ರೂ.…

7 mins ago

ಬಿಸಿಲಿನ ತಾಪ, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ ಸಾಕುಪ್ರಾಣಿಗಳು

ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.

28 mins ago

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

42 mins ago

ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನ: ಮೋಹನ್‌ ಯಾದವ್‌

ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.

59 mins ago

ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.

1 hour ago

ಕಲಬುರಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿದ್ದಕ್ಕೆ  ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.

2 hours ago