Categories: ಮೈಸೂರು

ಕಲಾಮಂದಿರದಲ್ಲಿ ದಸರಾ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ-2021ರ ಪ್ರಯುಕ್ತ ಅರಮನೆ ಆವರಣದಲ್ಲಿ ಅಕ್ಟೋಬರ್ 11 ಮತ್ತು 12 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಕಲಾಮಂದಿರದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಅಕ್ಟೋಬರ್ 11 ರಂದು 9.15 ಗಂಟೆಗೆ ಮೈಸೂರಿನ ಎ.ವಿ ನಾರಾಯಣ ಮತ್ತು ತಂಡ ನಾದಸ್ವರ, ಬೆಳಗ್ಗೆ 10 ಗಂಟೆಗೆ ಪಿರಿಯಾಪಟ್ಟಣದ ಮಾತೃಭೂಮಿ ಕಂಸಾಳೆ ತಂಡದಿಂದ ಕಂಸಾಳೆ, ಬೆಳಗ್ಗೆ 10.45 ಗಂಟೆಗೆ ಮೈಸೂರಿನ ಎಂ.ಎಸ್.ಜಾನಕಿ ರಾಂ ಮತ್ತು ತಂಡದಿಂದ ಮ್ಯಾಂಡೋಲಿನ್, ಬೆಳಗ್ಗೆ 11.30 ಗಂಟೆಗೆ ಬೆಂಗಳೂರಿನ ಸುಕೃತ ಸಂಗೀತ ನೃತ್ಯ ಶಾಲೆಯ ವತಿಯಿಂದ ನೃತ್ಯರೂಪಕ, ಮಧ್ಯಾಹ್ನ 12.15 ಗಂಟೆಗೆ ಮೈಸೂರಿನ ಸುಮಂತ್ ಮಂಜುನಾಥ್ ಮತ್ತು ತಂಡದಿಂದ ವಯೋಲಿನ್, ಮಧ್ಯಾಹ್ನ 1ಗಂಟೆಗೆ ಬೆಂಗಳೂರಿನ ನಾಗಭೂಷಣ್ ಮತ್ತು ತಂಡದಿಂದ ಸಾಮೂಹಿಕ ಭರತನಾಟ್ಯ.

ಮಧ್ಯಾಹ್ನ 1.45 ಗಂಟೆಗೆ ಮಂಗಳೂರಿನ ಎ.ಕೆ. ಉಮಾನಾಥ್ ಮತ್ತು ತಂಡದಿಂದ ನಾದಸ್ವರ, ಮಧ್ಯಾಹ್ನ 2.30 ಗಂಟೆಗೆ ಮೈಸೂರು ಜಿಲ್ಲಾ ಗಾಯಕಿಯರ ತಂಡದಿಂದ ವೈವಿಧ್ಯಮಯ ಗೀತೆಗಳು, ಮಧ್ಯಾಹ್ನ 3:15 ಗಂಟೆಗೆ ಚಾಮರಾಜನಗರ ಜಿಲ್ಲಾ ಸೋಬಾನೆ ಕಲಾವಿದರ ತಂಡದಿಂದ ಸೋಬಾನೆ ಪದ, ಸಂಜೆ 4 ಗಂಟೆಗೆ ಬೆಂಗಳೂರು ತಿಬ್ಬಾದೇವಿ ಕಲಾ ಸಂಘದಿಂದ ಭರತನಾಟ್ಯ, ಸಂಜೆ 4.45 ಗಂಟೆಗೆ ಲಕ್ಷ್ಮೀ ವಿಠ್ಠಲ ಹೆಗಡೆ ಮತ್ತು ತಂಡ, ಶಿರಸಿ, ಶಾಸ್ತ್ರೀಯ ಸಂಗೀತ ಸಂಜೆ 5:30 ಗಂಟೆಗೆ ಬೆಂಗಳೂರು ಮ್ಯಾಜಿಕ್ ಅಕಾಡೆಮಿ ಕೊರೊನಾ ಜಾಗೃತಿ ಮ್ಯಾಜಿಕ್ ಶೋ, ಸಂಜೆ 6.15 ಗಂಟೆಗೆ ಚೆನ್ನಪಟ್ಟಣದ ಹೆಚ್. ಅನನ್ಯ ಮತ್ತು ತಂಡದಿಂದ ನೃತ್ಯರೂಪಕ, ಸಂಜೆ 6.15 ಗಂಟೆಗೆ ಮೈಸೂರು ನಗರ ಜಿಲ್ಲಾ ಕಲಾವಿದರ ಕೇಂದ್ರ ಸಮಿತಿಯಿಂದ “ಒಡಹುಟ್ಟಿದವರು”-ನಾಟಕ ಪ್ರದರ್ಶನಗೊಳ್ಳಲಿದೆ.

ಅಕ್ಟೋಬರ್ 12 ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಸೌಮ್ಯ ಮತ್ತು ತಂಡದಿಂದ ನೃತ್ಯರೂಪಕ, ಬೆ. 10.45 ಗಂಟೆಗೆ ಶಿರಸಿ ನಿರ್ಮಲಾ ಹೆಗಡೆ ಯಕ್ಷಗೆಜ್ಜೆ, ಬೆಳಗ್ಗೆ 11.30 ಗಂಟೆಗೆ ಮೈಸೂರು ಗಾನಗಂಧರ್ವ ಕಲಾ ಬಳಗ ಟ್ರಸ್ಟ್ ವತಿಯಿಂದ ಸುಗಮ ಸಂಗೀತ, ಮಧ್ಯಾಹ್ನ 12.15 ಗಂಟೆಗೆ ನಂಜನಗೂಡಿನ ಗಂಗಾಧರ್ ಹೊಸಹಳ್ಳಿ ಮತ್ತು ತಂಡದಿಂದ ಜನಪದ ಸಂಗೀತ, ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ನಿಶ್ಚಿತ ಪ್ರಸಾದ್ ಮತ್ತು ತಂಡದಿಂದ ದೇವರನಾಮ, ಮಧ್ಯಾಹ್ನ 1.45 ಗಂಟೆಗೆ ಮೈಸೂರ ಜಿಲ್ಲೆ ಸೋಬಾನೆ ಕಲಾವಿದರ ತಂಡ (10 ಜನ) ಸೋಬಾನೆ ಪದಗಳು, ಮಧ್ಯಾಹ್ನ 02.30 ಗಂಟೆಗೆ ಹುಬ್ಬಳಿ ಸುಜಯ್ ಶಾನ್ ಭಾಗ್ ಮತ್ತು ತಂಡದಿಂದ ನೃತ್ಯರೂಪಕ, ಮಧ್ಯಾಹ್ನ 3.15 ಗಂಟೆಗೆ ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಂಘ ವೈವಿಧ್ಯಮಯಗೀತೆ, ಸಂಜೆ.

4 ಗಂಟೆಗೆ ಮೈಸೂರು ಜಿಲ್ಲಾ ಜಾನಪದ ನೃತ್ಯ ಕಲಾವಿದರ ತಂಡ ಜಾನಪದ ನೃತ್ಯ, ಸಂಜೆ 4.45 ಗಂಟೆಗೆ ಚಾಮರಾಜನಗರ ಮಲ್ಲಣ್ಣ ಮತ್ತು ತಂಡ, ಕಾಳಿಂಗರಾವ್ ಗೀತೆಗಳು, ಸಂಜೆ 5:30 ಗಂಟೆಗೆ ಬೆಂಗಳೂರಿನ ಎಂ.ಎಸ್.ನಾಟ್ಯ ಕ್ಷೇತ್ರದಿಂದ ನೃತ್ಯರೂಪಕ, ಸಂಜೆ 6.15 ಗಂಟೆಗೆ ಬೆಂಗಳೂರಿನ ಜೆ. ಅಕ್ಷಯ್ ಮತ್ತು ತಂಡದಿಂದ ಮ್ಯಾಂಡೋಲಿನ್, ಸಂಜೆ 7 ಬೆಂಗಳೂರಿನ ಅಭಿನಯ ರಂಗ ಕೇಂದ್ರ (ಕೆ.ಪಿ. ಅಶ್ವಥ ನಾರಾಯಣ) ಅವರಿಂದ “ಮಾಚಿದೇವ” ನಾಟಕ ಪ್ರದರ್ಶನಗೊಳ್ಳಲಿದೆ.

Sneha Gowda

Recent Posts

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

29 mins ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

52 mins ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

1 hour ago

ಲೋಕಸಭೆ ಚುನಾವಣೆ: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…

2 hours ago

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು

ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…

2 hours ago

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

2 hours ago