Categories: ಮೈಸೂರು

ಕಂಬಳಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ: ಸಂಸದ ಪ್ರತಾಪ್ ಸಿಂಹ

ಮೈಸೂರು: ಸಮಾಜಿಕ ಜಾಲಾತಾಣಗಳಲ್ಲಿ ಸ್ಪೇಟಸ್, ಫೋಟೋ, ಕಮೆಂಟ್ಸ್ ಹಾಕಿ ಮನೆಯಲ್ಲಿ ಕುಳಿತುಕೊಂಡರೆ ಆಗುವುದಿಲ್ಲ, ತಮಿಳರಂತೆ ಬೀದಿಗಳಿದು ಹೋರಾಟ ನಡೆಸಬೇಕು, ನಾನು ಸಹ ಕಂಬಳಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಕರವಾಳಿಯ ಜನಪದ ಕ್ರೀಡೆ ಕಂಬಳಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಬಿಜೆಪಿಯ ರಾಜ್ಯಧ್ಯಾಕ್ಷ ಬಿ.ಎಸ್ ಯಡಿಯೂರಪ್ಪ ಕಂಬಳಕ್ಕೆ ತಮ್ಮ ಸಹಮತ ಸೂಚಿಸಿದ್ದು ನಾವು ಕಂಬಳಕ್ಕೆ ಒಪ್ಪಿಗೆ ಪಡೆಯಬೇಕಾದರೆ, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು, ಜೊತೆಗೆ ತಮಿಳರಂತೆ ಲಕ್ಷಾಂತರ ಮಂದಿ ಬೀದಿಗಳಿದು ಹೋರಾಟ ನೆಡಸಬೇಕು, ಅದನ್ನ ಬಿಟ್ಟು ಸಮಾಜಿಕ ಜಾಲಾತಾಣಗಳಾದ ಫೇಸ್ ಬುಕ್, ಟ್ವೀಟರ್, ವಾಟ್ಸ್ ಅಫ್ ಗಳಲ್ಲಿ ಫೋಟೋಸ್, ಕಮೆಂಟ್ಸ್ ಹಾಕಿ ಐ ಸಪೋರ್ಟ್ ಕಂಬಳ ಎಂದು ಹಾಕುವುದಲ್ಲ. ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕಂಬಳಕ್ಕೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲಾತಾಣಗಳಲ್ಲಿ ಪೋಸ್ಟರ್ ಹಾಕುವರಿಗೆ ಬಗ್ಗೆ ತಮ್ಮ ಅಕ್ರೋಶ ವ್ಯಕ್ತ ಪಡಿಸಿದ ಸಂಸದರು, ಕಂಬಳದ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದರು.

ಇನ್ನೂ ಈಶ್ವರಪ್ಪ ಅವರ ಬ್ರಿಗೇಡ್ ಗಲಾಟೆಯ ಬಗ್ಗೆ, ನಾನು ಅಭಿಪ್ರಾಯ ಹೇಳುವಷ್ಟು ದೊಡ್ಡವನಲ್ಲ, ಆಹರ್ತೆಯೂ ನನಗೆ ಇಲ್ಲ, ಹಿರಿಯರು ಕುಳಿತುಕೊಂಡು ಸಮಸ್ಯೆಯನ್ನ ಪಕ್ಷದ ವೇದಿಕೆಯಲ್ಲಿ ಸರಿಪಡಿಸಿಕೊಳ್ಳುತ್ತಾರೆ ಎಂದರು.

25ಕ್ಕೆ ಮೈಸೂರಿನಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆ: ಮೈಸೂರಿನ ಜನತೆಯ ಬಹುದಿನದ ಬೇಡಿಕೆಯಾದ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನ ಇದೇ ತಿಂಗಳ 25 ರಂದು ಕೇಂದ್ರ ಸಚಿವ ಅನಂತ್ ಕುಮಾರ್ ಚಾಲನೆ ನೀಡಲಿದ್ದು, ಪ್ರಾರಂಭಿಕವಾಗಿ ಮೇಟಗಳ್ಳಿಯಲ್ಲಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಅಂಚೇ ಕಛೇರಿಯ ಒಂದು ಭಾಗದಲ್ಲಿ ಈ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನ ಕೇಂದ್ರ ಸಚಿವರು ಉದ್ಘಾಟನೆ ಮಾಡಲಿದ್ದು, ಪ್ರಾಯೋಗಿಕವಾಗಿ ಮೈಸೂರು ಹಾಗೂ ಚಾಮಾರಾಜ ಜಿಲ್ಲೆಗಳಿಗೆ ಸೀಮಿತವಾಗಿದೆ ಕಾರ್ಯನಿರ್ವಹಿಸಲಿದ್ದು, ನಂತರ ಇತರೆ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ಹಾಕಲಿದೆ ಎಂದು ಸಂಸದರು ತಿಳಿಸಿದರು.

ಮೈಸೂರು ಬೆಂಗಳೂರು ಜೋಡಿ ರೈಲು ಮಾರ್ಗ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಲಿದ್ದು, ಶ್ರೀರಂಗಪಟ್ಟಣದ ಬಳಿ ಇರುವ ಟಿಪ್ಪು ಸುಲ್ತಾನ್ ಸ್ಮಾರಕ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಮುಗಿದ ನಂತರ ಏಪ್ರಿಲ್ ನಲ್ಲಿ ಬೆಂಗಳೂರು-ಮೈಸೂರು ನಡುವೆ ಜೋಡಿ ರೈಲು ಮಾರ್ಗ ಕಾರ್ಯರಂಭ ಮಾಡಲಿದ್ದು, ಹೆಚ್ಚುವರಿ ರೈಲುಗಳನ್ನ ಹಾಗೂ ವೇಗದ ರೈಲುಗಳನ್ನ ಓಡಿಸಲು ಕೇಂದ್ರ ರೈಲ್ವೆ ಸಚಿವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ ಎಂದು ಇದೇ ಸಂಧರ್ಭದಲ್ಲಿ ಸಂಸದರು ಸ್ಪಷ್ಟ ಪಡಿಸಿದರು.

ಸ್ಮಾರ್ಟ್ ಸಿಟಿ ಮೈಸೂರಿಗೆ ತಪ್ಪಲು ರಾಜ್ಯ ಸರ್ಕಾರ ಹಾಗೂ ಮೈಸೂರು ಮಹಾನಗರ ಪಾಲಿಕೆ ನೇರ ಕಾರಣವಾಗಿದ್ದು, 2011ರಿಂದ ಮೈಸೂರು ಮಹಾನಗರ ಪಾಲಿಕೆಯ ಆಡಿಟ್ ರಿಪೋರ್ಟ್ ಸರಿಯಾಗಿ ಆಗಿಲ್ಲ. ಜೊತೆಗೆ ನರ್ಮ್ ಯೋಜನೆಯಿಂದ ಬಿಡುಗಡೆಯಾದ ಕೋಟ್ಯಾಂತರ ರೂಪಾಯಿ ಹಣ ಶೇಕಡ 80 ರಷ್ಟು ಹಣ ಸರಿಯಾಗಿ ಬಳಕೆಯಾಗಿಲ್ಲ. ಬಳಕೆಯಾಗಿರುವ ಹಣವೂ ಸಹ ಸರಿಯಾದ ಲೆಕ್ಕ ಇಲ್ಲ. ಜೊತೆಗೆ ರಾಜ್ಯ ಸರ್ಕಾರ ಕೇಂದ್ರ ನಗರಾಭಿವೃದ್ದಿ ಇಲಾಖೆಗೆ ಮೈಸೂರನ್ನ ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿಸುವಂತೆ ಪ್ರಸ್ತಾವನೆಯನ್ನೂ ಸಹ ಕಳುಹಿಸಿಲ್ಲ ಎಂದು ಮೈಸೂರಿಗೆ ಸ್ಮಾರ್ಟ್ ಸಿಟಿ ತಪ್ಪಲು ಕಾರಣವೇನು ಎಂಬುದಕ್ಕೆ ಕಾರಣ ತಿಳಿಸಿದರು.

Desk

Recent Posts

ʻಮಹಾನಟಿ’ ತಂಡದ ವಿರುದ್ಧ ದೂರು ದಾಖಲು..!

ಕಿರುತೆರೆಯ ಖ್ಯಾತ ನಿರೂಪಕಿ,ತುಳುನಾಡ ಕುವರಿ ಅನುಶ್ರೀ, ರಮೇಶ್​ ಅರವಿಂದ್, ಪ್ರೇಮಾ ಅವರುಗಳ ವಿರುದ್ದ ಪ್ರಕರಣ ದಾಖಲಾಗಿದೆ.

5 mins ago

ಪ್ರಜ್ವಲ್‌ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ವರ್ಗಕ್ಕೆ ಅವಮಾನ ಮಾಡಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ…

19 mins ago

ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜಿನಲ್ಲಿ ಮೂಳೆ ಚಿಕಿತ್ಸೆಯಲ್ಲಿನ ಆಧುನಿಕ ತಂತ್ರಜ್ಞಾನ ಪ್ರದರ್ಶನ

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮೂಳೆ ಚಿಕಿತ್ಸಾ ವಿಭಾಗವು ಒಂದು ದಿನದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಿ ಆರ್ತ್ರೋಸ್ಕೊಪಿ ಬಗೆಗಿನ…

27 mins ago

ಪ್ರಗತಿ ಮೈದಾನದ ಸುರಂಗದಲ್ಲಿ ಅಪಘಾತ : ದೆಹಲಿ ಪೊಲೀಸ್ ಸಿಬ್ಬಂದಿ ಸಾವು

ನಗರದ ಪ್ರಗತಿ ಮೈದಾನದ ಸುಂರಗ ಮಾರ್ಗದಲ್ಲಿ ಅಪಘಾತ ಸಂಭವಿಸಿದ್ದು ದೆಹಲಿ ಪೊಲೀಸ್ ಸಿಬ್ಬಂದಿ ಸಾವನಪ್ಪಿದ್ದಾರೆ. ಅಪಘಾತದ ದೃಶ್ಯ ಕ್ಯಾಮೆರದಲ್ಲಿ ಸೆರೆಯಾಗಿದೆ.…

40 mins ago

ಬೈಂದೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಪುತ್ತೂರು ಶಾಸಕ ಅಶೋಕ್ ರೈ ನೇಮಕ

ಕರ್ನಾಟಕದಲ್ಲಿ ೨ನೇ ಹಂತದ ಚುನಾವಣಾ ಪ್ರಚಾರಕ್ಕೆ ಉಸ್ತುವಾರಿಗಳ ನೇಮಕವನ್ನು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಮಾಡಿದ್ದಾರೆ. ಅದರಂತೆ ಚುನಾವಣೆಗೆ ಉಸ್ತುವಾರಿಗಳ…

59 mins ago

ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳ ದಾರುಣ ಸಾವು

ಪ್ರವಾಸಕ್ಕೆಂದು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲದ ದಾರುಣ ಘಟನೆ ಕನಕಪುರ ತಾಲೂಕಿನ ಮೇಕೆದಾಟು ಬಳಿಯ ಸಂಗಮದ ಕಾವೇರಿ ನದಿಯಲ್ಲಿ ನಡೆದಿದೆ.…

1 hour ago