News Karnataka Kannada
Wednesday, April 17 2024
Cricket
ಮೈಸೂರು

ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿನ ಜಲಾಶಯಗಳು ಭರ್ತಿ

Photo Credit :

ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿನ ಜಲಾಶಯಗಳು ಭರ್ತಿ

ಮೈಸೂರು: ಕೇರಳ ಮತ್ತು ತಾಲೂಕಿನಾದ್ಯಂತ ಉತ್ತಮ ಮಳೆ ಯಾಗುತ್ತಿರುವುದರಿಂದ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ, ತಾರಕ ಮತ್ತು ನುಗು ಮಾತ್ರವಲ್ಲದೆ ಹೆಬ್ಬಾಳ ಜಲಾಶಯವು ಭರ್ತಿಯಾಗಿರುವುದು ರೈತರಲ್ಲಿ ಹರ್ಷವನ್ನುಂಟು ಮಾಡಿದೆ.

 

ಕಪಿಲ ನದಿತಟದಲ್ಲಿ ಪ್ರವಾಹ ಕೇರಳದ ವೈನಾಡಿನಲ್ಲಿ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ಜಲಾಶಯ ಭರ್ತಿಯಾಗಿದೆ.

 

ಹಿಂದಿನಿಂದಲೂ ಕಬಿನಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ನುಗು ಮತ್ತು ತಾರಕ ಜಲಾಶಯ ಭರ್ತಿಯಾಗುತ್ತಿರಲಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ತುಂಬುತ್ತಿರುವ ತಾರಕ ಹಾಗೂ ನಗು ಜಲಾಶಯವೂ ಭರ್ತಿಯಾಗುತ್ತಿವೆ. ಕಳೆದ ಎರಡು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹಲವು ವರ್ಷಗಳಿಂದ ಭರ್ತಿಯಾಗದೆ ಇದ್ದ ಜಲಾಶಯಗಳು ಭರ್ತಿಯಾಗುತ್ತಿರುವುದು ರೈತರಲ್ಲಿ ಹರ್ಷ ತಂದಿದೆ.

 

ಹಾಗೆನೋಡಿದರೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಮೂರು ಜಲಾಶಯವಿದ್ದರೂ ಕಬಿನಿ ಜಲಾಶಯ ಮಾತ್ರ ಸಾಮಾನ್ಯವಾಗಿ ಭರ್ತಿಯಾಗುತ್ತಿತ್ತು. ಉಳಿದಂತೆ ನುಗು ಮತ್ತು ತಾರಕ ಜಲಾಶಯಗಳು ಭರ್ತಿಯಾಗಿರುವುದು ಅಪರೂಪ. ನುಗು ಜಲಾಶಯ 2009 ಮತ್ತು 2013ರಲ್ಲಿ ಭರ್ತಿಯಾಗಿತ್ತು. ಆದಾದ ಬಳಿಕ 2018ರ ನಂತರ ಪ್ರತಿವರ್ಷವೂ ಭರ್ತಿಯಾಗುತ್ತಿದೆ. 110 ಅಡಿ ಸಾಮರ್ಥ್ಯದ ಈ ಜಲಾಶಯವನ್ನು 1956ರಲ್ಲಿ ನಿರ್ಮಿಸಲು ಆರಂಭಿಸಿ 1959ರಲ್ಲಿ ಪೂರ್ಣಗೊಳಿಸಲಾಗಿದೆ. ಕೃಷಿ ಉದ್ದೇಶಕ್ಕೆ ನಿರ್ಮಾಣವಾಗಿರುವ ಈ ಜಲಾಶಯ ರೈತರಿಗೆ ವರದಾನವಾಗಿದೆ.

 

ಮತ್ತೊಂದು ತಾರಕ ಜಲಾಶಯದಲ್ಲಿಯೂ 2013ರ ಬಳಿಕ 2018ರಲ್ಲಿ ಭರ್ತಿಯಾಗಿತ್ತು. ಎರಡು ವರ್ಷಗಳಿಂದ ಭರ್ತಿಯಾಗುತ್ತಿದೆ. 1998ರಲ್ಲಿ ಕೃಷಿ ಉದ್ದೇಶದಿಂದ ನಿರ್ಮಾಣವಾದ ತಾರಕ ಜಲಾಶಯ ರೈತರ ಕೃಷಿ ಭೂಮಿಗೆ ನೀರೊದಗಿಸುತ್ತಿದೆ. 2425 ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ 2013ರಲ್ಲಿ ದಾಖಲೆಯ ಪ್ರಮಾಣದ ನೀರು ಸಂಗ್ರಹವಾಗಿದ್ದನ್ನು ಬಿಟ್ಟರೆ 2018ರಲ್ಲಿ ನೀರು ಸಂಗ್ರಹವಾಗಿತ್ತು. 3.80 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ಕ್ರಸ್ಟ್ ಗೇಟ್ 2006ರಲ್ಲಿ ಒಡೆದು ಜಲಾಶಯದ ನೀರು ಮನೆ, ಜಮೀನಿಗೆ ನುಗ್ಗಿ ಹಾನಿಯಾಗಿತ್ತು.

 

ಇದಲ್ಲದೆ ತಾಲೂಕಿನಲ್ಲಿ ಹೆಬ್ಬಾಳ ಎಂಬ ಪುಟ್ಟ ಜಲಾಶಯವಿದ್ದು ಧಾರಾಕಾರ ಮಳೆಯಿಂದ ಇದೀಗ ಭರ್ತಿಯಾಗಿದ್ದು, ಜಲಾಶಯ ತುಂಬಿ ನೀರು ಧುಮ್ಮಿಕ್ಕುತ್ತಿರುವ ಸುಂದರ ದೃಶ್ಯ ನೋಡುಗರ ಮನಸೆಳೆಯುತ್ತಿದೆ. ಹೆಬ್ಬಾಳ ಜಲಾಶಯ ಭರ್ತಿಯಾಗಿರುವುದು ರೈತರಿಗೆ ಸಂತಸ ತಂದಿಯಲ್ಲದೆ, ಈಗಿನ ಪರಿಸ್ಥಿತಿಯಲ್ಲಿ ಜಲಾಶಯಕ್ಕೆ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆ ಹೆಚ್ಚಾಗಿದ್ದು, ಜಲಾಶಯದ ತಗ್ಗುಪ್ರದೇಶದಲ್ಲಿ ವಾಸಿಸುವ ಜನರು ತಮ್ಮ ಜಾನುವಾರು ಮತ್ತು ಆಸ್ತಿ ಪಾಸ್ತಿಗಳನ್ನು ರಕ್ಷಿಸಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು