News Karnataka Kannada
Tuesday, April 23 2024
Cricket
ಮೈಸೂರು

ಹಾಪ್ಕಾಮ್ಸ್ ವತಿಯಿಂದ ಮನೆಬಾಗಿಲಿಗೆ ಹಣ್ಣು, ತರಕಾರಿ

Photo Credit :

ಹಾಪ್ಕಾಮ್ಸ್ ವತಿಯಿಂದ ಮನೆಬಾಗಿಲಿಗೆ ಹಣ್ಣು, ತರಕಾರಿ

ಮೈಸೂರು: ಜಿಲ್ಲಾ ಹಾಪ್ಕಾಮ್ಸ್ ವತಿಯಿಂದ ಆನ್ಲೈನ್ ಮೂಲಕ ಮನೆಬಾಗಿಲಿಗೆ ರೈತರಿಂದ ಖರೀದಿಸಿದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ನಿಗದಿತ ದರ ಹಾಗೂ ನಿಖರವಾದ ತೂಕದಲ್ಲಿ ಸರಬರಾಜು ಮಾಡಲಾಗುತ್ತಿದ್ದು, ಈ ಸೇವೆ ಪಡೆಯಲು ಸಾರ್ವಜನಿಕರು ಮುಂಗಡವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ.

ಹಣ್ಣು ಹಾಗೂ ತರಕಾರಿ, ಸೊಪ್ಪು ಹಾಗೂ ಇತರೆ ಸಾಮಾಗ್ರಿಗಳಿಗೆ ದರವನ್ನು ಆನ್ಲೈನ್ ನಲ್ಲಿ ವೀಕ್ಷಿಸಿ ಶುಲ್ಕ ಪಾವತಿಸಬಹುದು ಅಥವಾ ಹಣ್ಣು, ತರಕಾರಿ ಪಡೆದ ನಂತರ ಪಾವತಿಸಬಹುದಾಗಿರುತ್ತದೆ.

ಗ್ರಾಹಕರು ‘Hopcoms online’ ಮೊಬೈಲ್ ಆ್ಯಪ್ ಮೂಲಕ ಈ ಸೇವೆ ಪಡೆಯಬಹುದಾಗಿದೆ. ಈವರೆಗೂ ನಗರದಲ್ಲಿ 1,000 ಕ್ಕೂ ಅಧಿಕ ಮಂದಿ ಆನ್ಲೈನ್ನಲ್ಲಿ ನೋಂದಾಯಿಸಿಕೊಂಡಿರುತ್ತಾರೆ.

ಗ್ರಾಹಕರ ಬೇಡಿಕೆ ಮೇರೆಗೆ ವಿವಿಧ ಬಗೆಯ ಸೊಪ್ಪು ಮತ್ತು ಡ್ರೈ ಫ್ರೂಟ್ಸ್, ತೆಂಗಿನಕಾಯಿ, ಮೊಟ್ಟೆ, ಸಾವಯಾವ ಬೆಲ್ಲ, ಬೆಲ್ಲದ ಪುಡಿ, ಜೇನುತುಪ್ಪ, ವಿವಿಧ ಬಗೆಯ ಹಣ್ಣಿನ ಸಸಿಗಳು, ಹೂಗಳನ್ನು ತಲುಪಿಸಲಾಗುತ್ತಿದೆ. ಈ ವಿನೂತನ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂ. 8277814143 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಹಾಪ್ಕಾಮ್ಸ್ನ ಪದನಿಮಿತ್ತ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು