News Karnataka Kannada
Tuesday, April 23 2024
Cricket
ಮೈಸೂರು

ಸ್ವಚ್ಛನಗರಗಳಲ್ಲಿ ಸ್ಥಾನಪಡೆದ ಸಾಂಸ್ಕೃತಿಕ ನಗರಿ ಮೈಸೂರು

Photo Credit :

ಸ್ವಚ್ಛನಗರಗಳಲ್ಲಿ ಸ್ಥಾನಪಡೆದ ಸಾಂಸ್ಕೃತಿಕ ನಗರಿ ಮೈಸೂರು

ಮೈಸೂರು: ಮತ್ತೊಮ್ಮೆ ದೇಶದ ಸ್ವಚ್ಛನಗರಗಳಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸ್ಥಾನ ಪಡೆದುಕೊಂಡಿದ್ದು, ಈ ಬಾರಿಯೂ 3 ರಿಂದ 10 ಲಕ್ಷ ಜನಸಂಖ್ಯೆಯ ನಗರಗಳಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ.

ಸ್ವಚ್ಛತೆಯಲ್ಲಿ ಪ್ರತಿ ವರ್ಷ ಒಂದಿಲ್ಲೊಂದು ಪ್ರಶಸ್ತಿ ಬಾಚಿಕೊಳ್ಳುತ್ತಿರುವ ಮೈಸೂರು ನಗರ ಪಾಲಿಕೆ ಈ ಬಾರಿಯೂ ಪ್ರಶಸ್ತಿ ಬಾಚಿದೆ. ಈ ಹಿಂದೆಯೂ ಸಮಗ್ರ ಪ್ರಶಸ್ತಿ ವಿಭಾಗದಲ್ಲಿ ಎರಡು ಬಾರಿ ದೇಶದ ಸ್ವಚ್ಛನಗರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು, ನಂತರ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ಪೈಕಿ ಒಮ್ಮೆ ಪ್ರಥಮ ಸ್ಥಾನ ಪಡೆದಿತ್ತು. ಸಮಗ್ರ ವಿಭಾಗದಲ್ಲಿ ಕಳೆದ ವರ್ಷ 3ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ 3ರಿಂದ 10 ಲಕ್ಷ ಜನಸಂಖ್ಯೆಯ ನಗರಗಳ ಪೈಕಿ ಅಗ್ರಸ್ಥಾನವನ್ನು ಮೈಸೂರು ಮಹಾನಗರ ಪಾಲಿಕೆ ಪಡೆದಿದೆ. ಸಮಗ್ರ ಪ್ರಶಸ್ತಿ ವಿಭಾಗದಲ್ಲಿ ಐದನೇ ಸ್ಥಾನ ಕಾಯ್ದುಕೊಂಡಿದೆ. ಕಳೆದ ವರ್ಷ ಈ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿತ್ತು.

ನಗರದ ಅರಮನೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣೆ-2020ರ ಅಭಿಯಾನದಡಿ ವರ್ಚುವಲ್ ಕಾರ್ಯಕ್ರಮದ ನೇರ ಪ್ರಸಾರ ಮತ್ತು ಸಂವಾದದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಹರ್ದಿಪ್ ಸಿಂಗ್ ಪುರಿ ಪ್ರಶಸ್ತಿ ಘೋಷಣೆ ಮಾಡಿದರು. 3 ರಿಂದ 10 ಲಕ್ಷ ಜನಸಂಖ್ಯೆ ವಿಭಾಗದಲ್ಲಿ 2018ರಲ್ಲಿ ಪ್ರಥಮ ಸ್ಥಾನ ಪಡೆದಿದ್ದಂತೆಯೇ ಈ ಬಾರಿಯೂ ಪ್ರಥಮ ಸ್ಥಾನ ಪಡೆಯಿತು. 2019ರಲ್ಲಿ ಈ ವಿಭಾಗದಲ್ಲಿ ಪ್ರಶಸ್ತಿ ನೀಡಲಿಲ್ಲ. ಸಮಗ್ರ ವಿಭಾಗದಲ್ಲಿ ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿದೆ.

ಪ್ರಶಸ್ತಿ ಘೋಷಣೆಯಾದ ಬಳಿಕ ಕೇಂದ್ರದ ನಗರಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ಹರ್ದೀಪ್ ಕುಲ್ ಸಿಂಗ್ ಪೌರಕಾರ್ಮಿಕನಿಗೆ ಚಪ್ಪಾಳೆ ಮೂಲಕ ಅಭಿನಂದಿಸಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ನಿಮ್ಮ ಕೆಲಸದ ಅನುಭವ ಹಂಚಿಕೊಳ್ಳುವಂತೆ ಸೂಚಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಂಜುಂಡಸ್ವಾಮಿ, ಆರಂಭದಲ್ಲಿ ಎಲ್ಲರೂ ಭಯದಿಂದ ಕೆಲಸ ಮಾಡಿದೆವು. ಬಳಿಕ ಪಾಲಿಕೆ ಸುರಕ್ಷತೆಗಾಗಿ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ನೀಡುವುದರೊಂದಿಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರಿಂದ ಧೈರ್ಯವಾಗಿ ಕಾರ್ಯ ನಿರ್ವಹಿದೆವು. ಕೆಲಸದ ನಡುವೆ ಕಳೆದ ಜು.12 ರಂದು ನನಗೆ ಕೊರೊನಾ ಸೋಂಕು ಇರುವುದು ಪತ್ತೆಯಾಯಿತು. ಅಧಿಕಾರಿಗಳ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಧೈರ್ಯವಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾದೆ ಎಂದು ಹೇಳಿದರು. ಈ ವೇಳೆ ಕೂಡ ಸಚಿವರು ಚಪ್ಪಾಳೆ ತಟ್ಟಿ, ಕೋವಿಡ್ ಗೆದ್ದು ಬಂದು ಮತ್ತೆ ಕೆಲಸಕ್ಕೆ ಹಾಜರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಮತ್ತೋರ್ವ ಪೌರ ಕಾರ್ಮಿಕ ಮಹಿಳೆ ಮಂಜುಳಾ ಅವರೊಂದಿಗೆ ಮಾತನಾಡಿದ ಸಚಿವರು, ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ದೊರಕುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಂಜುಳಾ, ನಾನು ಕಳೆದ 22 ವರ್ಷದಿಂದ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸರ್ಕಾರ ಎಲ್ಲಾ ಸೌಲಭ್ಯ ಮತ್ತು ಸವಲತ್ತು ನೀಡಿದೆ. ಈ ಬಗ್ಗೆ ತೃಪ್ತಿ ಇದ್ದು, ಪೌರ ಕಾರ್ಮಿಕರಿಗೆ ಅಗತ್ಯವಾಗಿ ಶೌಚಾಲಯ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕ ಎಸ್.ಎ.ರಾಮದಾಸ್, ಮೇಯರ್ ತಸ್ನಿಂ, ಉಪ ಮೇಯರ್ ಸಿ. ಶ್ರೀಧರ್, ನಗರ ಪಾಲಿಕೆ ಸದಸ್ಯರಾದ ಸುಬ್ಬಯ್ಯ, ಪೈ. ಶ್ರೀನಿವಾಸ್, ಪ್ರೇಮಾ ಶಂಕರೇಗೌಡ, ಕೆ.ವಿ. ಶ್ರೀಧರ್, ಉಪ ಆಯುಕ್ತ ಶಶಿಕುಮಾರ್, ನಗರಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ಜಯಂತ್, ಆರೋಗ್ಯಾಧಿಗಾರಿ ಡಾ.  ನಾಗರಾಜು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು