News Karnataka Kannada
Monday, April 22 2024
Cricket
ಮೈಸೂರು

ಸ್ಕೂಟರ್ ನಲ್ಲಿ ತಾಯಿಗೆ ತೀರ್ಥಯಾತ್ರೆ ಮಾಡಿಸಿದ ಸುಪುತ್ರ

Photo Credit :

ಸ್ಕೂಟರ್ ನಲ್ಲಿ ತಾಯಿಗೆ ತೀರ್ಥಯಾತ್ರೆ ಮಾಡಿಸಿದ ಸುಪುತ್ರ

ತೇತ್ರಾಯುಗದ ಶ್ರವಣಕುಮಾರ ತನ್ನ ತಂದೆ-ತಾಯಿಯನ್ನು ಹೊತ್ತು ತೀರ್ಥಯಾತ್ರೆ ಕೈಗೊಂಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿಯನ್ನು ಬಜಾಜ್ ಸ್ಕೂಟರ್ ಮೇಲೆ ಕೂರಿಸಿಕೊಂಡು ಬರೋಬ್ಬರಿ 56,522 ಕಿ.ಮೀ. ಸುತ್ತಾಡಿಸಿ ತೀರ್ಥಯಾತ್ರೆ ಮಾಡಿಸಿಕೊಂಡು ಬರುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಇವರ ಹೆಸರು ಡಿ.ಕೃಷ್ಣ ಕುಮಾರ್. ಮೂಲತಃ ಮೈಸೂರಿನವರಾದ ಇವರು ತನ್ನ ತಾಯಿ ಚೂಡಾರತ್ನ ಅವರ ಬಯಕೆಯನ್ನು ತೀರಿಸಿದ ಪರಿ ಎಲ್ಲರೂ ಅಚ್ಚರಿ ಪಡುವಂತಹದ್ದೇ ಆಗಿದೆ. ಇನ್ನು ಡಿ.ಕೃಷ್ಣ ಕುಮಾರ್ ಅವರು ಇಂತಹದೊಂದು ಕಾರ್ಯ ಮಾಡುವ ಕುರಿತಂತೆ ಆಲೋಚನೆ ಮಾಡಿದ್ದೇ ಆಕಸ್ಮಿಕ ಅದಕ್ಕೂ ಒಂದು ಕಾರಣವಿದೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಕೃಷ್ಣಕುಮಾರ್  ತಂದೆ ದಕ್ಷಿಣಮೂರ್ತಿ ಸಾವನ್ನಪ್ಪಿ ಆರು ವರ್ಷವಾಗಿದೆ. ಈ ಹಿಂದೆ ಅವರ ತಾಯಿ   ಮೈಸೂರಿನಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಒಂದು ಬಾರಿ ಮೈಸೂರಿಗೆ ಹೋಗಿದ್ದ  ಕೃಷ್ಣಕುಮಾರ್ ಬಳಿ  ತಾಯಿ ಹಂಪಿ, ಹಳೇಬಿಡು ನೋಡಬೇಕು ಎಂಬ ತಮ್ಮ ಆಸೆಯನ್ನು  ಹೊರಗಡವಿದ್ದರು.  ಆಗಲೇ ಅವರು ತನ್ನ ತಾಯಿಯನ್ನು ಹಳೇಬಿಡು ಮಾತ್ರವಲ್ಲ, ದೇಶಾದ್ಯಂತ ಸುತ್ತಾಡಿಸಬೇಕು ಎಂದು ನಿರ್ಧಾರಕ್ಕೆ ಬಂದು ಬಿಟ್ಟರು. ಅಲ್ಲದೆ ಅದಕ್ಕೆ ಬಳಸಿಕೊಂಡಿದ್ದು ಅವರು ತಮ್ಮ ತಂದೆಯ ಕಾಲದ ಎರಡು ದಶಕದ ಹಿಂದಿನ ಹಳೆಯ  ಬಜಾಜ್ ಚೇತಕ್  ಸ್ಕೂಟರ್ ನಲ್ಲಿ.

ಈ ಸ್ಕೂಟರ್ ನ್ನು ಅವರು ಬಳಸಿಕೊಳ್ಳಲು ಕಾರಣವೂ ಇದೆ. ಇದು ತಂದೆಯವರು ಇಷ್ಟಪಟ್ಟು ತೆಗೆದ ವಾಹನವಾಗಿದ್ದು ಅದರಲ್ಲೇ ತೀರ್ಥಯಾತ್ರೆ ಮಾಡಿದರೆ ತಾಯಿ ಮಾತ್ರವಲ್ಲ ತಂದೆಯ ಆತ್ಮಕ್ಕೂ ಸಂತೋಷ ಸಿಗುತ್ತದೆ ಎಂಬುವುದು ಅವರ ಆಲೋಚನೆಯಾಗಿತ್ತು.

ಕೃಷ್ಣಕುಮಾರ್ ಅವರು 70 ವರ್ಷ ಪ್ರಾಯದ  ತಾಯಿ ಚೂಡಾರತ್ನ ಅವರನ್ನು ಮೊದಲಿಗೆ ಅಂದರೆ ಎರಡು ವರ್ಷದ ಹಿಂದೆ ಏಳು ತಿಂಗಳು, ಒಂದು ವಾರದ ಕಾಲ ದಕ್ಷಿಣ ವಿಂದ್ಯ ಭಾಗದಲ್ಲಿನ  ಬಹುತೇಕ ಎಲ್ಲಾ ರಾಜ್ಯಗಳ ಪುಣ್ಯ ಕ್ಷೇತ್ರಗಳಿಗೆ  ಕರೆದೊಯ್ದು ತೋರಿಸಿದ್ದಾರೆ. ಈ ವೇಳೆ ಆಶ್ರಯಕ್ಕಾಗಿ ಯಾವುದೇ ಹೋಟೆಲ್, ಅಥವಾ ವಸತಿ ಗೃಹಗಳಲ್ಲಿ ಉಳಿಯದೆ ಮಠಗಳು, ದೇವಸ್ಥಾನಗಳಲ್ಲಿ ಉಳಿದು ಕೊಳ್ಳುವ ಮೂಲಕ ತೀರ್ಥಯಾತ್ರೆ ಪೂರ್ಣಗೊಳಿಸಿದ್ದರು.

ಮಾತೃ ಸೇವಾ ಸಂಕಲ್ಪ ಯಾತ್ರೆ ಹೆಸರಿನಲ್ಲಿ 2018ರ ಜನವರಿ 16 ರಿಂದ ಯಾತ್ರೆ ಆರಂಭಿಸಿದ ಈ ಇವರು  ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮತ್ತು ಮಹಾರಾಷ್ಟ್ರಗಳ  ಎಲ್ಲಾ ದೇವಾಲಯಗಳನ್ನು  ದರ್ಶನ ಮಾಡಿ ಬಂದಿದ್ದರು. ಬೆಂಗಳೂರಿಗೆ ವಾಪಾಸ್ಸಾಗುವಾಗ  ಎಲ್ಲಿಯೂ ಸ್ಕೂಟರ್ ತೊಂದರೆ ಕೊಡಲಿಲ್ಲ. ಆದರೆ 16 ಸಾವಿರ ಕಿಲೋ ಮೀಟರ್ ನಂತರ  ಸ್ವಲ್ಪ ಪಂಚರ್ ಆಗಿತ್ತು. ಪ್ರವಾಸದ ಸಂದರ್ಭ ತಾಯಿ ಆಯಾಸಗೊಳ್ಳದಿರಲಿ ಎಂಬ ಕಾರಣದಿಂದ ಸೀಟ್ ಮೇಲೆ ದಿಂಬನ್ನು ಹಾಕಿ ವ್ಯವಸ್ಥೆ ಮಾಡಿದ್ದರು.

ಮೂರು ವರ್ಷದ ಹಿಂದೆ ತಾಯಿ, ಮಗ  ಬೆಂಗಳೂರಿನಿಂದ ಕಾಶ್ಮೀರದವರೆಗೂ ಪ್ರವಾಸ ಕೈಗೊಂಡಿದ್ದರು. ಆಗ ಕಾಶ್ಮೀರಿಪುರ ನಿವಾಸ ದೇವಾಲಯ  ಮತ್ತಿತರ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ್ದರು.  ಸ್ಕೂಟರ್ ಹಳೆಯದಾದರೂ ಅದರಲ್ಲಿ ಹಣ್ಣು, ಅಕ್ಕಿ, ಚಾಕು, ರೈನ್ ಕೋಟ್, ಮತ್ತಿತರ ವಸ್ತುಗಳನ್ನು ಇಟ್ಟುಕೊಳ್ಳಬಹುದು. ದೇವಾಲಯ ನೋಡುತ್ತಿದ್ದರೆ ಹೊಟ್ಟೆ   ಹಸಿವು ಗೊತ್ತಾಗುತ್ತಿರಲಿಲ್ಲ.  ಅವರ ಬಗ್ಗೆ ತಿಳಿದವರು ಮನೆಗೆ ಆಹ್ವಾನಿಸುತ್ತಿದ್ದರಿಂದ ತೊಂದರೆಯಾಗಿರಲಿಲ್ಲ.

2018ರಲ್ಲಿ ಮತ್ತೆ ಉತ್ತರ ಭಾರತ ಯಾತ್ರೆ ಹೊರಟ ಅವರು ಭಾರತ ಮಾತ್ರವಲ್ಲದೆ, ನೇಪಾಳ, ಭೂತಾನ್, ಮ್ಯಾನ್ಮಾರ್ ಸೇರಿದಂತೆ ಉತ್ತರ ಭಾರತದ ಹಲವು ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ಮರಳಿ ಮೈಸೂರಿಗೆ ಬಂದಿರುವುದು ನಿಜಕ್ಕೂ ಸಾಧನೆಯೇ ಸರಿ. ಈ ಯಾತ್ರೆಗಾಗಿ ಇವರು ಸುಮಾರು ಆರೇಳು ಲಕ್ಷ ವನ್ನು ವ್ಯಯಿಸಿದ್ದಾರೆ. ಹಲವು ಬಾರಿ ಸ್ಕೂಟರ್ ಕೈಕೊಟ್ಟರೂ ರಿಪೇರಿ ಮಾಡಿಸಿಕೊಂಡು ಧೈರ್ಯ ಗುಂದದೆ ಮುಂದೆ ಸಾಗಿ ತನ್ನ ತಾಯಿಯ ಆಸೆಯನ್ನು ನೆರವೇರಿಸಿದ್ದಾರೆ.

ಅದೇನೇ ಇರಲಿ 45 ದಾಟುತ್ತಿದ್ದಂತೆ ಸಣ್ಣ ರೋಗಗಳಿಗೂ ದೊಡ್ಡ ಚಿಕಿತ್ಸೆ  ಪಡಯುವ  ಇಂದಿನ ಜನಾಂಗಕ್ಕೆ  70ರ ಹರೆಯದಲ್ಲೂ ನೆರಳಿನ ಆಶ್ರಯವಿಲ್ಲದೆ, ಕೊರೊನಾದಂತಹ ರೋಗದ ನಡುವೆಯೂ  ದ್ವಿಚಕ್ರವಾಹನದಲ್ಲೇ ತೀರ್ಥ ಯಾತ್ರ ಮಾಡಿದ  ಚೂಡಾರತ್ನರವರ ಮನೋಸ್ಥೈರ್ಯ ಮತ್ತು ಅವರ ಮನೋಅಭಿಲಾಷೆಯನ್ನು ಅರಿತು ಮಗ ಕೃಷ್ಣಕುಮಾರ್ ಅದನ್ನು ಪೂರೈಸಿದ್ದು ನಿಜಕ್ಕೂ ಪ್ರಶಂಸನೀಯ ಸಂಗತಿಯೇ……..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು