News Karnataka Kannada
Sunday, April 14 2024
Cricket
ಮೈಸೂರು

ಸಿಎಫ್‌ಟಿಆರ್‌ಐ ನೂತನ ತಂತ್ರಜ್ಞಾನ ಆವಿಷ್ಕಾರ

Untitled 1
Photo Credit : News Kannada

ಮೈಸೂರು : ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನೂತನ ಜ್ಞಾನ ಬಳಸಿ ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಅವಶ್ಯಕವಾಗುವಂತಹ ತಂತ್ರಜ್ಞಾನಗಳ ಅಭಿವೃದ್ಧಿ, ಹೊಸ ಕೃಷಿ ಸಂಪನ್ಮೂಲಗಳ ಬಳಕೆ, ಆಹಾರ ಸುಭದ್ರತೆ, ಮೌಲ್ಯವರ್ಧನೆ ಹಾಗೂ ಸುರಕ್ಷಿತವಾದ ಆಹಾರ ಈ ಅಂಶಗಳಿಗೆ ಒತ್ತು ನೀಡಿ ನವೀನ,ಆಹಾರ ಸಂಸ್ಕರಣಾ ತಂತ್ರಜ್ಞಾನಗಳನ್ನು ರೂಪಿಸುತ್ತಿದೆ.

ಜತೆಗೆ ಸಿಎಫ್‌ಟಿಆರ್‌ಐ ರೈತರಿಗೆ ನೆರವಾಗುವ ತಂತ್ರಜ್ಞಾನಗಳನ್ನೂ ಆವಿಷ್ಕರಿಸಿದೆ. ಕೃಷಿಕರಿಗೆ, ಬೆಳೆಗಾರರಿಗೆ, ಅದರ ಮೂಲಕವಾಗಿ ಇಡೀ ಸಮುದಾಯ, ಸಮಾಜಕ್ಕೆ ಲಾಭದಾಯಕವಾಗುವಂತಹ ಹತ್ತು ಹಲವು ಸಮಗ್ರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಮತ್ತು ನಗರಪ್ರದೇಶದ ವಿಸ್ತೃತ ಮಾರುಕಟ್ಟೆಗಳಲ್ಲಿ ಸಂಸ್ಕರಿತ ಆಹಾರ ಪದಾರ್ಥಗಳಿಗೆ ಬಹಳ ವೇಗವಾಗಿ ಹೆಚ್ಚುತ್ತಿರುವ ಬೇಡಿಕೆಗನುಗುಣವಾಗಿ ತಂತ್ರಜ್ಞಾನಗಳನ್ನು ಆವಿಷ್ಕರಿಸಿದೆ,.

ಗೋದಿ, ಮೈದಾ ಪದಾರ್ಥಗಳ ಬದಲಿಗೆ ಹಿಮಾಲಯದ ತಪ್ಪಲಿನಲ್ಲಿ ಬೆಳೆಯುವ, ಅತಿ ಹೆಚ್ಚು ಪ್ರೋಟೀನ್ ಅಂಶವುಳ್ಳ ದ್ವಿದಳ ದಾನ್ಯಗಳನ್ನು ಬಳಿಸಿ ಮಾಡುವ ಬಕ್‌ವೀಟ್ ನ್ಯೂಡಲ್ಸ್ ಪರಿಚಯಿಸಿದೆ, ಜತೆಗೆ ಗ್ಲುಟೆನ್ ಫ್ರೀ ಬಿಸ್ಕಟ್, ಕುಕ್ಕೀ ಕೇಕ್ ಅನ್ನೂ ಆವಿಷ್ಕರಿಸಿದೆ, ಮಲ್ಟಿಗ್ರೇನ್ ಕುಕ್ಕೀಸ್  ನೂತನ ಆವಿಷ್ಕಾರವಾಗಿದೆ. ಇಷ್ಟೇ ಅಲ್ಲದೆ  ನುಗ್ಗೇಸೊಪ್ಪಿನಿಂದ ಚಿಕ್ಕಿ ತಯಾರಿಸಿದೆ. ನುಗ್ಗೇಸೊಪ್ಪಿನಲ್ಲಿ ಔಷಧೀಯ ಗುಣಗಳೊಂದಿಗೆ, ಪೋಷಕಾಂಶಗಳು ಹೆಚ್ಚಿರುವುದರಿಂದ ಅದನ್ನು ಬಳಸಿ ಚಿಕ್ಕಿ ತಯಾರಿಸಲಾಗುತ್ತಿದೆ. ಜತೆಗೆ ಕೈಗಾರಿಕೆಗಳ ಆಶುದ್ಧ ನೀರನ್ನು ಶುದ್ಧೀಕರಿಸುವ ತಂತ್ರಜ್ಞಾನವನ್ನೂ ಆವಿಷ್ಕರಿಸಿದೆ.

ಕಾಫಿ ಎಲೆಗಳನ್ನು ಬಳಸಿಕೊಂಡು ಕಾಫಿ ಡಿಪ್ ಬ್ಯಾಗ್‌ಗಳನ್ನು ಪರಿಚಯಿಸಿರುವುದು ವಿಶೇಷವಾಗಿದೆ. ಇದು ಹೆಚ್ಚು ಸ್ವಾದಿಷ್ಟವಾಗಿರುವುದು ಮಾತ್ರವಲ್ಲದೆ ಆರೋಗ್ಯಕರವೂ ಆಗಿದೆ. ಈಗಾಗಲೇ ಈ ತಂತ್ರಜಾನವನ್ನು ಲೆವಿಸ್ತಾದವರು ಖರೀದಿಸಿದ್ದಾರೆ. ಇದರ ಜತೆಗೆ ಕೈಗಾರಿಕೆಗಳ ವಾಟರ್ ಟ್ರೀಟ್‌ಮೆಂಟ್, ನುಗ್ಗೇಸೊಪ್ಪಿನ ಚಿಕ್ಕಿ ತಯಾರಿಸುವ ತಂತ್ರಜ್ಞಾನವನ್ನೂ ವಿವಿಧ ಕಂಪನಿಗಳು ಖರೀದಿಸಿವೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು