News Karnataka Kannada
Saturday, April 13 2024
Cricket
ಮೈಸೂರು

ಸಾ.ರಾ.ಮಹೇಶ್ ರೀತಿಯಲ್ಲಿ ಉತ್ತರಿಸಲು ಆಗಲ್ಲ: ಶಾಸಕ ನಾಗೇಂದ್ರ

Photo Credit :

ಸಾ.ರಾ.ಮಹೇಶ್ ರೀತಿಯಲ್ಲಿ ಉತ್ತರಿಸಲು ಆಗಲ್ಲ: ಶಾಸಕ ನಾಗೇಂದ್ರ

ಮೈಸೂರು: ಸಾ.ರಾ. ಮಹೇಶ್ ಅಧಿಕಾರದಲ್ಲಿದ್ದಾಗ ಯಾರನ್ನೆಲ್ಲ ಹಾಕಿಸಿದ್ದರು ಅನ್ನೋದು ಗೊತ್ತು. ಅವರ ಮಾತುಗಳಿಗೆಲ್ಲ ಉತ್ತರ ನೀಡೋಕೆ ಆಗಲ್ಲ ಎಂದು ಶಾಸಕ ನಾಗೇಂದ್ರ ಹೇಳಿದರು.

ಮೈಸೂರಿನಲ್ಲಿಂದು ಜಿಲ್ಲಾಧಿಕಾರಿಗಳ ವರ್ಗಾವಣೆ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ವರ್ಗಾವಣೆ ಮಾಡೋದೆಲ್ಲ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಬೇರೆಯವರ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಲು ಆಗೋದಿಲ್ಲ. ಸಾ.ರಾ. ಮಹೇಶ್ ಹೇಳುವ ರೀತಿಯಲ್ಲಿ ಯಾವುದೇ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.

ದಸರಾ ಉದ್ಘಾಟಕರ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಕಮಿಟಿಗೆ ಯಾವ ಉದ್ಘಾಟಕರ ಹೆಸರನ್ನೂ ಸೂಚಿಸಿಲ್ಲ. ಉದ್ಘಾಟಕರಾಗಿ ಡಾ.ಮಂಜುನಾಥ್ ಮತ್ತು ಡಾ. ರವಿ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಫೈನಲ್ ಆಗಲಿದೆ. ಈಗಾಗಲೇ ಕಮಿಟಿಗಳು ಉದ್ಘಾಟಕರ ಹೆಸರನ್ನು ಆಯಾಯ ಇಲಾಖೆಗಳ ಆಯ್ಕೆಗೆ ಬಿಟ್ಟಿವೆ. ಆಯ್ಕೆ ನಂತರ ತೀರ್ಮಾನವಾಗಲಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು