News Karnataka Kannada
Monday, April 22 2024
Cricket
ಮೈಸೂರು

ಸರಳ ದಸರಾಗೆ ಇಷ್ಟೊಂದು ವೆಚ್ಚವೇಕೆ?

Photo Credit :

ಸರಳ ದಸರಾಗೆ ಇಷ್ಟೊಂದು ವೆಚ್ಚವೇಕೆ?

ಮೈಸೂರು: ಪ್ರಸ್ತುತ ವರ್ಷ ರಾಜ್ಯ ಸರ್ಕಾರ ಸಾಂಸ್ಕೃತಿಕ ನಗರಿಯಲ್ಲಿ ಈ ಬಾರಿ ಸರಳವಾಗಿ ದಸರಾ ಆಚರಿಸಬೇಕೆಂದು ಆದೇಶ ಹೊರಡಿಸಿದೆ. ಈ ಬಾರಿ ಕೇವಲ ಎರಡು ಸಾವಿರ ಮಂದಿಗೆ ಮಾತ್ರ ಪ್ರವೇಶ ಎಂದು ತಿಳಿಸಿದೆ. ಆದರೆ ಸರಳ ದಸರಾ ಆಚರಣೆಗಾಗಿ 10 ಕೋಟಿ ಬಿಡುಗಡೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿದ ಸಮಾಜ ಸೇವಕ ಜಿ ಪಿ ಹರೀಶ್‌ ಅವರು ಆ ಹಣ ಜನಸಾಮಾನ್ಯರ ತೆರಿಗೆ ಹಣದಿಂದ ವೆಚ್ಚ ಮಾಡಲಾಗುತಿದ್ದು ಜನತೆಗೆ ಭಾರೀ ಹೊರೆಯಾಗಲಿದೆ ಆ ಎರಡು ಸಾವಿರ ಜನರ ಹೆಸರನ್ನು ಪಟ್ಟಿ ಮಾಡಿ ಅವರ ಹತ್ತಿರ ಈ ಹಣ ವಸೂಲಿ ಮಾಡಿ ದಸರಾ ಆಚರಿಸಲಿ ಎಂದರು.

ಅಲ್ಲದೆ ಇಡೀ ದೇಶ ಇಂದು ಕೊರೋನ ದಿಂದ ಸಂಕಷ್ಟಕ್ಕೀಡಾಗಿದ್ದು ಜನರ ಸಾವಿನ ಪ್ರಮಾಣವೂ ಹೆಚ್ಚಿದೆ, ಅದೇ 10 ಕೋಟಿ ರೂ. ಹಣವನ್ನು ಕೊರೋನಾದಿಂದ ನರಳುತ್ತಿರುವವರಿಗೆ ವಿನಿಯೋಗಿಸಿದ್ದರೆ, ಸಂಕಷ್ಟದಲ್ಲಿರುವವರಿಗೆ ತುಂಬಾ ಸಹಾಯವಾದರೂ ಆಗುತ್ತಿತ್ತು ಎಂದರು. ಈಗಾಗಲೇ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ದೀಪಾಲಂಕಾರದ ಕಾರ್ಯಾ ಭರದಿಂದ ಸಾಗುತಿದೆ. ದಸರಾ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ದೀಪಾಲಂಕಾರ. ಹೀಗೆ ವಿಜೃಂಭಣೆಯಿಂದ ದೀಪಾಲಂಕಾರ ಮಾಡಿದರೆ ಸಾಮಾನ್ಯವಾಗಿ ಜನರು ಅಲಂಕಾರವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದರಿಂದ ಕೊರೋನಾ ನಿಯಂತ್ರಿಸಲು ಸಾಧ್ಯವೇ? ಈಗಾಗಲೇ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಸರಾಸರಿ ಸಾವಿರಗಟ್ಟಲೆ ಕೊರೋನಾ ಸೋಂಕು ಹರಡುತ್ತಿದೆ. ಮಕ್ಕಳಿಗೆ ಶಾಲಾ, ಕಾಲೇಜು ರಜೆ ಇರುವುದರಿಂದ ಪ್ರವಾಸಿಗರು ಕೊರೋನಾವನ್ನು ನಿರ್ಲಕ್ಷಿಸಿ, ನಗರದತ್ತ ಧಾವಿಸಿ ಬರುತ್ತಿದ್ದಾರೆ. ಜನದಟ್ಟಣೆಯಾಗಿ ಮತ್ತಷ್ಟು ಸೋಂಕು ತಗುಲಿದರೆ ಮುಂದೆ ಬೆಂಗಳೂರನ್ನೂ ಸಹ ಮೀರಿಸುವ ದಿನ ದೂರವಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ಮಾಡಲಾಗುತ್ತಿದೆ.

ಈ ಮಧ್ಯೆ ದಸರಾ ಆಚರಣೆಯಿಂದ ಅನಾಹುತ ಉಂಟಾದರೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಸರ್ಕಾರಕ್ಕೆ ಮೈಸೂರು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮುಖ್ಯ ಮಂತ್ರಿಗೆ ಪತ್ರ ಬರೆದಿರುವ ಭಾನುಮೋಹನ್, ನಾಡಹಬ್ಬ ದಸರಾ ಅರಮನೆಯವರಿಗೆ ಸೀಮಿತವಾಗಿರಲಿ. ಇದರಲ್ಲಿ ಸರ್ಕಾರ ಮೂಗು ತೂರಿಸುವುದು ಸರಿಯಲ್ಲ. ದಸರಾ ಆಚರಣೆಯಿಂದ ಅನಾಹುತ ಉಂಟಾದರೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ರಣಕೇಕೆ ಹಾಕುತ್ತಿದೆ. ನಾಡಹಬ್ಬ ದಸರಾವನ್ನು ಅರಮನೆಯವರೇ ಸಾಂಪ್ರದಾಯಿಕವಾಗಿ ಆಚರಿಸಿಕೊಳ್ಳಲಿ. ಸದ್ಯ ಈ ಆಚರಣೆಗೆ ಯಾವ ಸಚಿವರು ಹಾಗೂ ಸಾರ್ವಜನಿಕರು ಆಗಮಿಸುವುದು ಬೇಡ. ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನ ಸೇರಿಸಿ ದಸರಾ ಆಚರಣೆ ಮಾಡುವುದು ಸೂಕ್ತವಲ್ಲ ಎಂದು ಭಾನುಮೋಹನ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಹಾಗೆಯೇ ಒಂದು ವೇಳೆ ಸರ್ಕಾರ ತಮ್ಮ ನಿಲುವಿಗೆ ಬದ್ಧವಾಗಿ ಜನರನ್ನು ಸೇರಿಸಿ ಆಚರಣೆ ಮಾಡಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಜವಾಬ್ದಾರರಾಗಬೇಕಾಗುತ್ತದೆ. ದಸರಾ ಆಚರಣೆ ವೇಳೆ ತೊಂದರೆ ಉಂಟಾದರೇ ಈ ಬಗ್ಗೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಿ ಭಾನುಮೋಹನ್ ಎಚ್ಚರಿಕೆ ನೀಡಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು