News Karnataka Kannada
Wednesday, April 17 2024
Cricket
ಮೈಸೂರು

ಸರಳವಾಗಿ ನಡೆದ ಇಟ್ಟಿಗೆಗೂಡಿನ ಕರಗ ಮಹೋತ್ಸವ

Photo Credit :

ಸರಳವಾಗಿ ನಡೆದ ಇಟ್ಟಿಗೆಗೂಡಿನ ಕರಗ ಮಹೋತ್ಸವ

ಮೈಸೂರು: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜಂಭಣೆಯಿಂದ ನಡೆಯಬೇಕಿದ್ದ ಮೈಸೂರು ಇಟ್ಟಿಗೆಗೂಡಿನಲ್ಲಿ ನಡೆಯುವ 96ನೇ ಕರಗ ಮಹೋತ್ಸವ ಕೊರೋನಾ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ದೇವಸ್ಥಾನಕ್ಕಷ್ಟೇ ಸೀಮಿತವಾಗಿ ಇಂದು ಬೆಳಿಗ್ಗೆ ನಡೆಯಿತು.

ಇಟ್ಟಿಗೆಗೂಡು ಶ್ರೀರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್, ಶ್ರೀ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ 96ನೇ ವರ್ಷದ ಕರಗಮಹೋತ್ಸವ ಇಂದು ಬೆಳಿಗ್ಗೆ ನಡೆಯಿತು. ಐದು ದಿನಗಳ ಕಾಲ ನಡೆಯಲಿದ್ದ ಈ ಕರಗ ಉತ್ಸವ ಕೊರೋನಾ ಹಿನ್ನೆಲೆಯಲ್ಲಿ ಕೇವಲ ಒಂದೇ ದಿನಕ್ಕೆ ಸೀಮಿತವಾಗಿತ್ತು. ಪ್ರಥಮ ಅಭಿಷೇಕದೊಂದಿಗೆ ಕರಗ ಮಹೋತ್ಸವ ನಡೆಯಿತು.

ಪ್ರತಿವರ್ಷ ಪ್ರಥಮ ಅಭಿಷೇಕದೊಂದಿಗೆ ಆರಂಭವಾಗುವ ಕರಗ ಮಹೋತ್ಸವಕ್ಕೆ ಕಂಕಣ ಕಟ್ಟಲಾಗುತ್ತಿತ್ತು. ಇಟ್ಟಿಗೆಗೂಡಿನ ಶ್ರೀ ನಾಗಲಕ್ಷ್ಮೀ ದೇವಸ್ಥಾನದಿಂದ ಹಾಲಿನ ಕೊಡದ ಮೆರವಣಿಗೆ ನಡೆಯುತ್ತಿತ್ತು. ದೇವರಿಗೆ ಅಭಿಷೇಕ ನೆರವೇರಿಸಲಾಗುತ್ತಿತ್ತು. ನಂತರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವರ ಕರಗ, ಕೋಟೆ ಮಾರಮ್ಮ ದೇವಸ್ಥಾನದ ಶ್ರೀ ಶಕ್ತಿ ಹಾಗೂ ಮಾರಿಯಮ್ಮ ಕರಗವನ್ನು ತರಲಾಗುತ್ತಿತ್ತು. ಅಲ್ಲದೇ 5 ದಿನಗಳ ಕಾಲ ಪ್ರತಿದಿನ ರಾತ್ರಿ ಇಟ್ಟಿಗೆಗೂಡಿನ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯುತ್ತಿತ್ತು.

ಕರಗದ ಮೆರವಣಿಗೆ ದೇವಸ್ಥಾನದಿಂದ ಹೊರಟು ನೆಹರೂ ವೃತ್ತ, ನೂರಡಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಶಿವರಾಂ ಪೇಟೆ, ಮಿಷನ್ ಆಸ್ಪತ್ರೆ ರಸ್ತೆ, ಕೆ.ಟಿ.ರಸ್ತೆ, ಕುಂಬಾರ ಗಿರಿ, ಅಶೋಕ ರಸ್ತೆ, ನಜರ್ ಬಾದ್, ಮೃಗಾಲಯ ರಸ್ತೆ ಮೂಲಕ ಮರಳಿ ದೇವಸ್ಥಾನ ತಲುಪುತ್ತಿಯತ್ತು ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಇರುವುದರಿಂದ ದೇವಸ್ಥಾನಕ್ಕಷ್ಟೇ ಸೀಮಿತ ಮಾಡಿ ಆಚರಣೆ ಮಾಡಲಾಗಿದೆ ಎಂದು ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ ನ ಸಂಘಟಕರು ತಿಳಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು