News Karnataka Kannada
Saturday, April 13 2024
Cricket
ಮೈಸೂರು

ವೈದ್ಯ ನಾಗೇಂದ್ರ ಸಾವು ಪ್ರಕರಣ: ಮೂರು ದಿನದಲ್ಲಿ ಸಾವಿನ ವರದಿ ಸರ್ಕಾರಕ್ಕೆ ಸಲ್ಲಿಕೆ

Photo Credit :

ವೈದ್ಯ ನಾಗೇಂದ್ರ ಸಾವು ಪ್ರಕರಣ: ಮೂರು ದಿನದಲ್ಲಿ ಸಾವಿನ ವರದಿ ಸರ್ಕಾರಕ್ಕೆ ಸಲ್ಲಿಕೆ

ಮೈಸೂರು: ನಂಜನಗೂಡು ತಾಲ್ಲೂಕಿನ ವೈದ್ಯಾಧಿಕಾರಿಯಾಗಿದ್ದ ಡಾ.ಎಸ್.ಆರ್.ನಾಗೇಂದ್ರ ಅವರ ಸಾವಿನ ತನಿಖಾ ವರದಿ ಇನ್ನು ಮೂರು ದಿನಗಳಲ್ಲಿ ರಾಜ್ಯ ಸರ್ಕಾರದ ಕೈಸೇರಲಿದೆ ಎಂದು ಪ್ರಾದೇಶಿಕ ಅಯುಕ್ತ ಡಾ. ಜಿ ಸಿ ಪ್ರಕಾಶ್‌ ತಿಳಿಸಿದ್ದಾರೆ. 

ಡಾ.ಎಸ್.ಆರ್.ನಾಗೇಂದ್ರ ಅವರು ಆ.20ರಂದು ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇವರ ಮೇಲೆ ಕೆಲಸದ ಒತ್ತಡ ಹೇರಿ ಕಿರುಕುಳ ನೀಡಿದ್ದರಿಂಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಕಾರ್ಯಕರ್ತರು ಮತ್ತು ರಾಜ್ಯ ವೈದ್ಯಾದಿಕಾರಿಗಳ ಸಂಘದವರು ತೀವ್ರ ಪ್ರತಿಭಟನೆ ನಡೆಸಿದ್ದರು. ನಂತರ ಸರ್ಕಾರ ಜಿಪಂ ಮುಖ್ಯಾ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಅವರನ್ನು ವರ್ಗಾವಣೆ ಮಾಡಿ ನೀಡಿತ್ತು. ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ಹಾಗೂ ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್‌ ಅವರು . ‌ದಿವಂಗತ ಡಾ.ಎಸ್.ಆರ್.ನಾಗೇಂದ್ರ ಅವರ ನಿವಾಸಕ್ಕೆ ಆಗಸ್ಟ್ 28 ರಂದು ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ 50 ಲಕ್ಷ ರೂ.ಚೆಕ್ ನೀಡಿ, ನಾಗೇಂದ್ರ ಅವರ ಪತ್ನಿಗೆ ಉದ್ಯೋಗ ನೀಡುವ ಮತ್ತು ನಿಷ್ಪಕ್ಷಪಾತ್ ತನಿಖೆ ನಡೆಸುವ ಭರವಸೆಯನ್ನು ನೀಡಿದ್ದರು.

ತನಿಖೆ ನಡೆಸುತ್ತಿರುವ ಆಯುಕ್ತರು ಡಾ.ಎಸ್.ಆರ್.ನಾಗೇಂದ್ರ ಅವರು ಕೆಲಸ ಮಾಡಿದ‌ ನಂಜನಗೂಡು ತಾಲ್ಲೂಕು ಆರೋಗ್ಯ ಕೇಂದ್ರ, ಕೂಡ್ಲಪುರ ಪ್ರಾಥಮಿಕ ಆರೋಗ್ಯದ ಸಿಬ್ಬಂದಿ, ಕುಟುಂಬಸ್ಥರು ಹಾಗೂ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದು, ವರದಿ ಸಿದ್ದಪಡಿಸಿ ಮೂರು ದಿನದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ನಂತರ ಆತ್ಮಹತ್ಯೆ ಪ್ರಕರಣದ ನಿಖರ ಮಾಹಿತಿ ಜನರಿಗೆ ತಿಳಿಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು