News Karnataka Kannada
Monday, April 22 2024
Cricket
ಮೈಸೂರು

ವಿಶ್ವನಾಥ್ ಗೆ ಪೂರ್ವಾಶ್ರಮದ ಪ್ರಭಾವ ಕಡಿಮೆ ಆಗಿಲ್ಲ: ಪ್ರತಾಪ್ ಸಿಂಹ

Photo Credit :

ವಿಶ್ವನಾಥ್ ಗೆ ಪೂರ್ವಾಶ್ರಮದ ಪ್ರಭಾವ ಕಡಿಮೆ ಆಗಿಲ್ಲ: ಪ್ರತಾಪ್ ಸಿಂಹ

ಮೈಸೂರು: ವಿಶ್ವನಾಥ್ ಅವರು ಬಿಜೆಪಿಯಲ್ಲಿದ್ದರೂ ಅವರಿಗಿನ್ನು ಪೂರ್ವಾಶ್ರಮದ ಪ್ರಭಾವ ಇನ್ನೂ ಕಡಿಮೆಯಾದಂತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಟಿಪ್ಪು ಸುಲ್ತಾನ್ ಸ್ವತಂತ್ರ ಹೊರಾಟಗಾರ, ಈ ನೆಲದ ಮಗ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದರು.

ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಕಾಲಿರಿಸಿದ್ದಾರೆ. ಹೀಗಾಗಿ ಮೈಸೂರಿನ ಇತಿಹಾಸವನ್ನು ಸರಿಯಾಗಿ ತಿಳಿದು ಮಾತನಾಡಬೇಕು. ಮೈಸೂರಿನ ಯದುವಂಶವನ್ನು ನಿರ್ನಾಮ ಮಾಡಲು ಹೊರಟವರು ಯಾರು, ಕನ್ನಡ ಭಾಷೆ ಮೇಲೆ ಪ್ರಹಾರ ನಡೆಸಿದ್ದು ಟಿಪ್ಪು. ಆದ್ದರಿಂದ ಟಿಪ್ಪುವನ್ನು ವೀರ, ಶೂರ ಎಂದು ಹೇಳಲಾಗದು. ಟಿಪ್ಪು ಸತ್ತಾಗ ಸ್ವಾತಂತ್ರ್ಯ ಹೋರಾಟವೇ ಶುರುವಾಗಿರಲಿಲ್ಲ‌ ಎಂದು ತಿರುಗೇಟು ನೀಡಿದ ಅವರು, ವಿಶ್ವನಾಥ್ ಮುಂದಾದರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತನಾಡಲಿ ಎಂದು ಹೇಳಿದರು.

ಇದೇ ವೇಳೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿವಾದದ ಕುರಿತು ಮಾತನಾಡಿದ ಅವರು, ಶಿವಾಜಿ ಮಹಾರಾಜರು ಸ್ವಾಭಿಮಾನದ ಸಂಕೇತವಾಗಿದ್ದರೆ ರಾಯಣ್ಣ ಕನ್ನಡ ಆಸ್ಮಿತೆ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದಾರೆ. ಹೀಗಾಗಿ ಇಬ್ಬರ ಹೆಸರಿನಲ್ಲಿ ವಿವಾದ ಬೇಡ. ಪ್ರತಿಮೆ ಮತ್ತು ಹೆಸರಿನಲ್ಲಿ ಅನಗತ್ಯ ವಿವಾದ ಸೃಷ್ಟಿ ಮಾಡುತ್ತಿರುವುದರ ಹಿಂದೆ ರಾಜಕೀಯವಿದೆ. ಕಾಂಗ್ರೆಸ್ ಪಿತೂರಿಯಿಂದ ವಿವಾದ ಸೃಷ್ಟಿಯಾಗಿದೆ. ಬೆಂಗಳೂರಿನ ಡಿಜೆ ಹಳ್ಳಿ ಪ್ರಕರಣದಂತೆ ಇಲ್ಲೂ ಕೂಡ ಕಾಂಗ್ರೆಸ್ ನ ಪಿತೂರಿಯಿಂದ ವಿವಾದ ಉಂಟಾಗಿದೆ. ಕನಕ ಪೀಠ ಸ್ಥಾಪನೆ ಮಾಡಿದ್ದು ಯಡ್ಡಿಯೂರಪ್ಪ. ಆದರೆ ಕನಕ ಭಕ್ತರ ವೋಟಿನ ಬಗ್ಗೆ ಮಾತ್ರ ಸಿದ್ದರಾಮಯ್ಯ ಚಿಂತೆ ಮಾಡುತ್ತಾರೆ. ಇಂತಹ ಮನಃಸ್ಥಿತಿಯನ್ನು ಸಿದ್ದರಾಮಯ್ಯ ಮೊದಲು ಬದಲಾಯಿಸಿಕೊಳ್ಳಲ ಎಂದು ಟೀಕಿಸಿದರು.

ಕನ್ನಡ ಹೋರಾಟಗಾರ ಮೇಲೆ ವಿನಾಕಾರಣ ಕೇಸ್ ಹಾಕಿದ್ದರೆ, ಆ ಕೇಸ್ ಗಳನ್ನು ವಾಪಾಸ್ ತೆಗೆದು ಕೊಳ್ಳಲು ಸರಕಾರದಲ್ಲಿ ಅವಕಾಶವಿದೆ. ರಾತ್ರೋರಾತ್ರಿ ಹೋಗಿ ಪ್ರತಿಮೆ ಸ್ಥಾಪನೆಯ ಹಿಂದೆ ರಾಜಕೀಯ ಅಲ್ಲದೆ ಮತ್ತೇನಿದೆ. ಸಿದ್ದರಾಮಯ್ಯ ಅವರು ಸಿಎಂ ಗೆ ಒಂದು ಮನವಿ ಕೊಟ್ಟಿದ್ದರು ಪ್ರತಿಮೆ ಸ್ಥಾಪನೆ ಕೆಲಸ ಆಗುತ್ತಿತ್ತು. ಸಂಗೋಳಿ ರಾಯಣ್ಣನಿಗೆ ಯಾರು ವಿರೋಧ ಮಾಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಹುಟ್ಟಿದವರು ಯಾರು ಸಂಗೋಳ್ಳಿ ರಾಯಣ್ಣನನ್ನು ವಿರೋಧ ಮಾಡಲ್ಲ. ಈ ರೀತಿಯ ವಿವಾದಗಳ ಮೂಲಕ ಸರ್ಕಾರವನ್ನು ಅಲುಗಾಡಿಸುವ ಪ್ರಯತ್ನಗಳನ್ನು ಕಾಂಗ್ರೆಸ್ ಮೊದಲು ನಿಲ್ಲಿಸಲಿ ಎಂದು ತಿರುಗೇಟು ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು