News Karnataka Kannada
Tuesday, April 23 2024
Cricket
ಮೈಸೂರು

ವಾರ್ಡ್‍ಗಳಿಗೆ ತಲುಪದ ಅನುದಾನ: ಮೇಯರ್ ತಸ್ನೀಂ ಅಸಮಾಧಾನ

Photo Credit :

ವಾರ್ಡ್‍ಗಳಿಗೆ ತಲುಪದ ಅನುದಾನ: ಮೇಯರ್ ತಸ್ನೀಂ ಅಸಮಾಧಾನ

ಮೈಸೂರು: ಮಹಾನಗರಪಾಲಿಕೆಯ ಪ್ರತಿ ವಾರ್ಡ್‍ಗೆ ಅನುದಾನ ನೀಡಿ ಆದೇಶ ಮಾಡಿದರೂ  ಆಯುಕ್ತರು ಹಣ ಬಿಡುಗಡೆ ಮಾಡಿಲ್ಲ ಎಂದು ಮೇಯರ್ ತಸ್ನೀಂ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಡೆದಿದೆ.

ಕಳೆದ ಎರಡು ತಿಂಗಳ ನಂತರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೈಸೂರು ನಗರ ಪಾಲಿಕೆ ಕೌನ್ಸಿಲ್ ಸಭೆಯ ವೇಳೆ ಅನುದಾನ ವಿಚಾರವಾಗಿ ಆಯುಕ್ತರು ಮತ್ತು ಪಾಲಿಕೆ ಸದಸ್ಯರ ನಡುವೆ ಜಟಾಪಟಿ ನಡೆದಿದ್ದು ಈ ವೇಳೆ ಮೇಯರ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಸಭೆ ಆರಂಭಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಚಿವ ಸುರೇಶ್ ಅಂಗಡಿ, ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯ ಮತ್ತು ಕೊರೋನಾ ಮತ್ತು ಅನಾರೋಗ್ಯದಿಂದ ಅಗಲಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆ ನಂತರ ಸಭೆ ನಡೆಯಿತು. ಈ ಸಭೆ ಆಯುಕ್ತರು ಮತ್ತು ಪಾಲಿಕೆ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಈ ವೇಳೆ ಮಾತನಾಡಿದ ಮೇಯರ್ ತಸ್ನೀಂ, ಮೇಯರ್ ಸ್ಥಾನಕ್ಕೆ ತನ್ನದೇ ಆದ ಸ್ಥಾನ ಮಾನವಿದೆ. ನಾನು ಪ್ರತಿ ವಾರ್ಡ್‍ಗೆ 50ಲಕ್ಷ ಅನುದಾನವನ್ನು ಆದೇಶ ಮಾಡಿದ್ದೇನೆ. ಆದರೆ ಇನ್ನು ಹಣ ನೀಡಿಲ್ಲ. ಇದು ಮೇಯರ್ ಸ್ಥಾನಕ್ಕೆ ಆಗಿರುವ ಅವಮಾನ. ನನ್ನ ಮಾತಿಗೆ ನಗರ ಪಾಲಿಕೆ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದುವರಿದು ಕೌನ್ಸಿಲ್ ಸಭೆಯಲ್ಲಿ ಉತ್ತರ ಪ್ರದೇಶದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಕಿಚ್ವು ಪ್ರತಿಧ್ವನಿಸಿತು. ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಜೆ ಡಿ ಎಸ್  ಸದಸ್ಯರು ನೇರ ಆರೋಪ ಮಾಡಿದರು. ಸಭೆಯಲ್ಲಿ ಪಾಲಿಕೆ ಸದಸ್ಯೆ ಅರಿಫ್ ಹುಸೇನ್ ಚರ್ಚೆಗೆ ಅವಕಾಶ ಕೇಳಿದರು. ನಂತರ ಸಭೆಯಲ್ಲಿ ಹತ್ರಾಸ್ ಅತ್ಯಾಚಾರ ಪ್ರಕರಣ ಚರ್ಚೆಗೆ ಬಂದಿತು.

ಈ ವೇಳೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ಸದಸ್ಯರ ನಡುವೆ ನೇರ ವಾಗ್ವಾದ ನಡೆದಿದ್ದು ಇದು ಬೇಡದ ವಿಚಾರ. ಇದು ಕೌನ್ಸಿಲ್ ಸಭೆ ಆಗಬೇಕಾದ ಕೆಲಸ ಚರ್ಚೆ ಮಾಡೋಣ ಎಂದು ಹೇಳಿ ವಿಪಕ್ಷಗಳ ಅರೋಪಕ್ಕೆ ಬಿಜೆಪಿ ಸದಸ್ಯರು ಅಕ್ರೋಶ ಹೊರಹಾಕಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು