News Karnataka Kannada
Thursday, April 18 2024
Cricket
ಮೈಸೂರು

ರೈತರಿಂದ ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ

Untitled 162
Photo Credit : News Kannada

ನಂಜನಗೂಡು : ತಾಲೂಕಿನ ಸುತ್ತಮುತ್ತಲ  ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಡಾನೆಗಳು ತಿಂದು ತೇಗಿ, ತುಳಿದುಹಾಕುವ  ಕಾರಣ ರೈತರು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕಾಡಾನೆಗಳ ಉಪಟಳ ನಿಯಂತ್ರಣ ಮಾಡದಿದ್ದರೆ, ಅರಣ್ಯ ಇಲಾಖೆಯ ಮುಂದೆ ವಿಷ ಪ್ರಾಶಣ ಮಾಡಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ತಾಲೂಕು ಮಡುವಿನಹಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಯ ರೈತರು ಕಾಡಾನೆಗಳ ಉಪಟಳಕ್ಕೆ ಅಕ್ಷರಶಃ ಕುಗ್ಗಿ ಹೋಗಿದ್ದರೆ. ಹೊಲ ಗದ್ದೆಗಳಿಗೆ ಲಗ್ಗೆ ಇಡುವ ಕಾಡಾನೆಗಳ ಹಿಂಡು ಕಷ್ಟಪಟ್ಟು ಬೆಳೆದ ಬೆಳೆಯನ್ನು ತಿಂದು ತೇಗಿ,  ತುಳಿದು ಹಾಕುತ್ತಿವೆ.  ಕಾಡಾನೆಗಳು ಮಾತ್ರವಲ್ಲದೆ ಜಿಂಕೆ, ಹಂದಿ ಸೇರಿದಂತೆ ಇತರ ಪ್ರಾಣಿಗಳು ಕೂಡ ಬೆಳೆ ತಿಂದು ಹಾಕುತ್ತಿವೆ. ಇದರಿಂದ ಸಾಲ ಸೋಲ ಮಾಡಿ ಬೆಳೆದ ಬೆಳೆ ಕೈಗೂಡದೆ ರೈತರು ಲಕ್ಷಾಂತರ ರೂಪಾಯಿ ನಷ್ಟ ಹೊಂದಿದ್ದಾರೆ.

ಕಾಡಾನೆಗಳು ನಾಡಿನತ್ತ ಬಾರದಂತೆ ಕಾಡಿನ ಸುತ್ತ ರೈಲ್ವೆ  ಕಂಬಿಗಳನ್ನು ಅಳವಡಿಸಲಾಗಿದೆ. ಆದರೆ ಅರಣ್ಯ ಇಲಾಖೆಯವರೆ ರೈಲ್ವೆ ಕಂಬಿಗಳನ್ನು ತೆಗೆದಿದ್ದಾರೆ. ಇದರಿಂದ ಕಾಡಾನೆಗಳು ಸರಾಗವಾಗಿ ಕಾಡಿನಿಂದ ಹಳ್ಳಿಗಳತ್ತ ಧಾವಿಸುತ್ತಿವೆ. ಕಾಡಾನೆಗಳ ಬಂದಾಗ ಮಹಜರು ನಡೆಸುವ ಅಧಿಕಾರಿಗಳು ಎಕರೆಗೆ ಕೇವಲ ಒಂದೂವರೆ ಸಾವಿರ ರೂಪಾಯಿ ಬೆಳೆ ನಷ್ಟ ಪರಿಹಾರ ಕೊಡುತ್ತಾರೆ. ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕೊಡುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.  ಈ ಕೂಡಲೇ ಕಾಡಾನೆಗಳ ಉಪಟಳ ನಿಯಂತ್ರಿಸದಿದ್ದರೆ ಅರಣ್ಯ ಇಲಾಖೆ ಮುಂದೆ ವಿಷ ಪ್ರಾಶಣ ಮಾಡಿ ಸಾಮೂಹಿಕ ಆತ್ಮಹತ್ಯೆ  ಮಾಡಿಕೊಳ್ಳುವುದಾಗಿ ರೈತರು ಎಚ್ಚರಿಸಿದ್ದಾರೆ.

ಸಮೃದ್ಧ ಮಳೆ ಆಗದೆ ಬೆಳೆ ಕೈಗೆ ಬರಲ್ಲ. ಹಾಗೂ ಹೀಗೂ ಅಷ್ಟೊ ಇಷ್ಟೊ ಬೆಳೆದ ಬೆಳೆ ಕಾಡು ಪ್ರಾಣಿಗಳನ್ನು ತಿಂದು ತೇಗುತ್ವೆ. ರಾತ್ರಿಯೆಲ್ಲ ಪಟಾಕಿ ಸಿಡಿಸಿ ಕೂಗು ಹಾಕಿ ಒಂದು ವೇಳೆ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅಲ್ಲಿ ಬೆಳೆಗೆ ಸೂಕ್ತ ಬೆಲೆ ಸಿಗಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಇದನ್ನೆಲ್ಲಾ ನೋಡಿಯೂ ನೋಡದಂತಿರುವ ಸರ್ಕಾರ ತನಗೇನು ತಿಳಿದಿಲ್ಲ ಎಂಬಂತೆ ವರ್ತಿಸುತ್ತಿದೆ. ಎಂದು ರೈತರು ಆಕ್ರೋಶ ವ್ಯಕ್ತಪಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು