News Karnataka Kannada
Saturday, April 20 2024
Cricket
ಮೈಸೂರು

ಮೈಸೂರು: ಪೊಲೀಸ್‌ ಪೇದೆ ಮನೆಯಲ್ಲೇ ಚಿನ್ನ ಕಳ್ಳತನ

Photo Credit :

ಮೈಸೂರು: ಪೊಲೀಸ್‌ ಪೇದೆ ಮನೆಯಲ್ಲೇ ಚಿನ್ನ ಕಳ್ಳತನ

ಮೈಸೂರು: ಯಾವುದೇ ನಕಲಿ ಕೀ ಬಳಸದೆ ಮನೆಯ ಹಿಂಬಾಗಿಲು, ಮುಂಬಾಗಿಲು ಯಾವುದನ್ನೂ ಮೀಟಿ ತೆರೆಯದೆ ಮನೆಯಲ್ಲಿನ ಆಲ್ಮೇರಾ ದಲ್ಲಿ ಇಟ್ಟಿದ್ದ ಎರಡು ಕೆಜಿ ಚಿನ್ನ ಕಳ್ಳತನವಾಗಿರುವ ಕುರಿತು ವರದಿ ಆಗಿದೆ. ಈ ವಿಚಿತ್ರ ರೀತಿಯ ಕಳ್ಳತನ ಮೈಸೂರಿನ ಸರಸ್ವತಿಪುರಂನಲ್ಲಿರುವ ಮನೆಯೊಂದರಲ್ಲಿ ನಡೆದಿದ್ದು ಮನೆಯಲ್ಲಿದ್ದ ಚಿನ್ನ ಮಾಯವಾಗಿರುವುದು ಹಲವು ರೀತಿಯ ಸಂಶಯಗಳನ್ನು ಹುಟ್ಟು ಹಾಕಿದೆ.

ಸರಸ್ವತಿಪುರಂನಲ್ಲಿರುವ 5ನೇ ಮುಖ್ಯ ರಸ್ತೆಯಲ್ಲಿ ವಿಜಿ ಕುಮಾರ್ ಮತ್ತು ವನಜಾಕ್ಷಿ ಎಂಬವರ ಮನೆಯಲ್ಲಿಯೇ ಕಳ್ಳತನ ನಡೆದಿದೆ. ವಿಜಿಕುಮಾರ್ ಅವರು ವ್ಯಾಪಾರಿ ಆಗಿದ್ದು, ಅವರ ಪತ್ನಿ ವನಜಾಕ್ಷಿ ಮೈಸೂರು ನಗರ ಪೊಲೀಸ್ ವಿಭಾಗದಲ್ಲಿ ಹೆಡ್‌ ಕಾನ್ಸ್‌ ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಜಿ ಕುಮಾರ್ ಅವರಿಗೆ ಕಳೆದ ಆಗಸ್ಟ್‌ 17ರಂದು ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಅವರನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದೀಗ ಅವರ ತಾಯಿಯವರಲ್ಲಿಯೂ ಕೊರೋನಾ ಸೋಂಕು ದೃಢಪಟ್ಟಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ಮಧ್ಯೆ ನಿನ್ನೆ ಸೋಮವಾರ ಮಧ್ಯಾಹ್ನ ಅವರನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಮನೆಯಲ್ಲಿದ್ದ 2 ಕೆಜಿಯಷ್ಟು ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಒಂದೂವರೆ ಕೆಜಿಯಷ್ಟು ಚಿನ್ನಾಭರಣ ಇವರದ್ದಾಗಿದ್ದು, ಮತ್ತೆ ಅರ್ಧ ಕೆಜಿಯಷ್ಟು ಚಿನ್ನ ಇವರ ಸಂಬಂಧಿಕರು ತಮ್ಮ ಮನೆ ರಿಪೇರಿಯಲ್ಲಿದೆ ಎಂದು ಇವರ ಮನೆಯಲ್ಲಿಯೇ ಇರಿಸಿದ್ದರು ಎನ್ನಲಾಗಿದೆ. ಆದರೆ ಕಳ್ಳತನ ಮಾತ್ರ ವಿಚಿತ್ರ ರೀತಿಯಲ್ಲಿ ನಡೆದಿದೆ. ಮನೆಯ ನಕಲಿ ಕೀ ಬಳಕೆಯಾಗಿಲ್ಲ, ಬಾಗಿಲನ್ನು ಮೀಟಿಲ್ಲ, ಆದರೂ ಕಳ್ಳತನ ನಡೆದಿದೆ.

ಸರಸ್ವತಿಪುರಂ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಜಯ್ ಕುಮಾರ್ ಮತ್ತು ಭವ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ. ಯಾವ ಕುರುಹು ಕೂಡ ಕಂಡು ಬರುತ್ತಿಲ್ಲ ಎನ್ನಲಾಗಿದ್ದು, ಮನೆಯವರೇ ಯಾರೋ ತೆಗೆದಿರಬೇಕು. ಅಥವಾ ಅವರ ಪರಿಚಿತರು ಕೃತ್ಯ ನಡೆಸಿರಬೇಕೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸರಸ್ವತಿ ಪುರಂಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು