News Karnataka Kannada
Monday, April 22 2024
Cricket
ಮೈಸೂರು

ಮೈಸೂರು: ಅಂತರರಾಜ್ಯ ವಂಚಕನ ಬಂಧನ

Photo Credit :

ಮೈಸೂರು: ಅಂತರರಾಜ್ಯ ವಂಚಕನ ಬಂಧನ

ಮೈಸೂರು:  ಚಿನ್ನದ ವ್ಯಾಪಾರಿಯೊಬ್ಬರಿಗೆ ಮೋಸ ಮಾಡಿ 1 ಕೆ.ಜಿ ಚಿನ್ನವನ್ನು ಲಪಟಾಯಿಸಿದ್ದ ಅಂತರ ರಾಜ್ಯ ವಂಚಕನನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೇರಳ ರಾಜ್ಯದ ಕಾಸರಗೋಡು ಬಳಿಯ ಮುಟ್ಟತೋಡಿ ಗ್ರಾಮದ ಹಮೀದ್ ಆಲಿ (೪೬) ಎಂದು ಗುರುತಿಸಲಾಗಿದ್ದು ಈತನು ನಗರದ ಕೆ ಅರ್‌ ರಸ್ತೆಯ ಮಾತಾಜಿ ಬುಲಿಯನ್ಸ್‌ ಚಿನ್ನದ ಅಂಗಡಿಯ ಮಾಲೀಕ ಇಂದರ್ ಚಂದ್ ಎಂಬುವವರ ಬಳಿ ಸಣ್ಣ ಪ್ರಮಾಣದ ಚಿನ್ನ ಖರೀದಿಸಿ ನಂಬಿಕೆ ಗಳಿಸಿಕೊಂಡಿದ್ದ. ನಂತರ ೨೦೧೯ ರ ಅಕ್ಟೋಬರ್‌ ೩೧ ರಂದು ಆರೋಪಿಯು ಇಂದರ್ ಚಂದ್ ಬಳಿಗೆ ತೆರಳಿ, ತನಗೆ 1 ಕೆ.ಜಿ.ಚಿನ್ನದ ಅವಶ್ಯಕತೆ ಇದೆ ಅದನ್ನು ನೀಡುವಂತೆ ಕೇಳಿದ್ದಾನೆ.

ಅಲ್ಲದೆ ಎರಡು ದಿನದಲ್ಲಿ ಹಣವನ್ನು ನೀಡುವುದಾಗಿಯೂ ಹೇಳಿದ್ದಾನೆ. ಈತನ ಮಾತನ್ನು ಚಂದ್‌ ಅವರು 1 ಕೆ.ಜಿ. ಚಿನ್ನದ ಗಟ್ಟಿಯನ್ನು ನೀಡಿದ್ದು, ಇದಕ್ಕೆ ಸ್ವಲ್ಪ ಹಣವನ್ನು ಮಾತ್ರ ನೀಡಿದ್ದ .

ಆದರೆ ಇದಾದ ನಂತರ ಹಲವು ತಿಂಗಳ ಕಾಲ ಆರೋಪಿ ನಾಪತ್ತೆ ಅಗಿದ್ದ. ಅಲ್ಲದೇ, ಆರೋಪಿಯ ವಿಳಾಸಕ್ಕೆ ಸಂಬಂಧಪಟ್ಟ ಯಾವುದೇ ಗುರುತುಗಳು ಚಂದ್ ಬಳಿ ಇರಲಿಲ್ಲ ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಅರಂಬಿಸಿದ ಪೋಲೀಸರು ಪ್ರಯಅಸ ಪಟ್ಟು ಆರೋಪಿಯನ್ನು ಕೇರಳದಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಈತನನ್ನು ವಿಚಾರಣೆ ಮಾಡಿದಾಗ ಇಂದರ್ ಚಂದ್ ಅವರಿಂದ ಪಡೆದ ಚಿನ್ನದ ಗಟ್ಟಿಯಲ್ಲಿ ಅರ್ಧ ಕೆಜಿ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿ ಹಣವನ್ನು ಪಡೆದುಕೊಂಡು, ಉಳಿದ ಅರ್ಧ ಕೆಜಿ ಚಿನ್ನದ ಗಟ್ಟಿಯನ್ನು 2-3 ಭಾಗ ಮಾಡಿ ಇತರರಿಗೆ ಮಾರಾಟ ಮಾಡಿ ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯು ಬೆಂಗಳೂರಲ್ಲಿ ಮಾರಾಟ ಮಾಡಿದ್ದ 25 ಲಕ್ಷ ರೂ.ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಳಿದ ಚಿನ್ನ ಮಾರಾಟ ಮಾಡಿದ ಹಣದಲ್ಲಿ ಕಾರನ್ನು ಖರೀದಿ ಮಾಡಿದ್ದು, ಸದರಿ ಕಾರನ್ನು ವಶಪಡಿಸಿಕೊಂಡು ಇದರ ಬೆಲೆ 20 ಲಕ್ಷರೂ ಆಗಿದೆ. ಒಟ್ಟು 45 ಲಕ್ಷ ರೂ. ಮೌಲ್ಯದ ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು