News Karnataka Kannada
Friday, April 19 2024
Cricket
ಮೈಸೂರು

ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಕೃಷ್ಣ ಜನ್ಮಾಷ್ಟಮಿ

Photo Credit :

ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಕೃಷ್ಣ ಜನ್ಮಾಷ್ಟಮಿ

ಮೈಸೂರು: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಕೆ.ಆರ್. ಪೊಲೀಸ್ ಠಾಣೆ ಆವರಣದಲ್ಲಿರುವ ಅಪೂರ್ವ ಸ್ನೇಹ ಬಳಗ ಹಾಗೂ ಕೃಷ್ಣರಾಜ ಪೊಲೀಸ್ ಠಾಣೆ ಸಿಬ್ಬಂದಿ ಜತೆಗೂಡಿ  ಶ್ರೀ ಕೃಷ್ಣನಿಗೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಕೃಷ್ಣರಾಜ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶ್ರೀನಿವಾಸ್ ಮಾತನಾಡಿ ಪ್ರತಿ ವರ್ಷ ಠಾಣೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಾ  ಬಂದಿದ್ದೇವೆ. ಅದೇ ರೀತಿ ನಮ್ಮ ಅಪೂರ್ವ ಸ್ನೇಹ ಬಳಗ ಸಂಘಟನೆ ಜೊತೆ ಸೇರಿ ಸರಳವಾಗಿ ಠಾಣೆಯಲ್ಲಿ ಆಚರಿಸಿದ್ದೇವೆ ಶ್ರೀಕೃಷ್ಣ ಪರಮಾತ್ಮನಲ್ಲಿ ಬೇಡಿಕೊಳ್ಳುವುದು ಏನೆಂದರೆ ಈ ದೇಶದಿಂದ ಕೊರೋನಾ ದೇಶದಿಂದ ತೊಲಗಲಿ ಸಮಸ್ತ ನಾಗರಿಕರಿಗೂ ಒಳಿತು ಮಾಡಲಿ ಭಗವಂತ ಹಾಗೆಯೇ ಪೊಲೀಸ್ ಠಾಣೆಯ ಸಿಬ್ಬಂದಿಗೂ ಒಳಿತು ಮಾಡಲಿ ಎಂದು ಬೇಡಿಕೊಳ್ಳುತ್ತೇವೆ. ಜಾತಿ ಭೇದವಿಲ್ಲದೆ ಕೃಷ್ಣನ ಆರಾಧನೆ, ಯಾವುದೇ ಜಾತಿ ಭೇದವಿಲ್ಲದೇ ಜಗತ್ತಿನಾದ್ಯಂತ ಶ್ರೀಕೃಷ್ಣನನ್ನು ಆರಾಧಿಸಲಾಗುತ್ತಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ವಿಚಾರಗಳು ಪ್ರಸ್ತುತವಾಗಿವೆ. ಚತುರನಾಗಿದ್ದ ಕೃಷ್ಣನ ಮಾರ್ಗದರ್ಶನದಿಂದ ಮಹಾಭಾರತದಲ್ಲಿ ಪಾಂಡವರು ಗೆಲುವು ಸಾಧಿಸಲು ಸಾಧ್ಯವಾಯಿತು. ಯಾದವ ಕುಲದಲ್ಲಿ ಜನ್ಮ ತಾಳಿದ ಮಾನವ ದೈವ ಸ್ವರೂಪನಾಗಿರುವುದಕ್ಕೆ ಕೃಷ್ಣ ಉದಾಹರಣೆಯಾಗಿದ್ದಾನೆ. ಇದಕ್ಕೆ ಯಾದವ ಕುಲ ಬಾಂಧವರು ಹೆಮ್ಮೆ ಪಡಬೇಕು. ಕೃಷ್ಣನ ತತ್ವ ವಿಚಾರಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಕೃಷ್ಣನ ಜೀವನದ ಕಥೆಗಳು ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕು. ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಮಾನವ ಜನ್ಮ ಮಹತ್ವವಾಗಿದ್ದು, ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

 

ಮಾಜಿ ನಗರ ಪಾಲಿಕೆ ಸದಸ್ಯರಾದ ಜಯಶಂಕರ್ ಸ್ವಾಮಿ ಮಾತನಾಡಿ ಶ್ರೀಕೃಷ್ಣನ ಕೊಳಲು ಪ್ರೀತಿ ಸಹೋದರತ್ವದ ಸಂಕೇತವಾಗಿದೆ. ಈ ಒಳಾರ್ಥವನ್ನು ನಾವಿಂದು ಅರ್ಥಮಾಡಿಕೊಳ್ಳಬೇಕಿದೆ  ಪ್ರೀತಿ, ಸೋದರತ್ವದ ಸಂಕೇತವಾದ ಶ್ರೀಕೃಷ್ಣನ ಕೊಳಲನ್ನು ನಾವಿಂದು ಮರೆತು ಬಿಟ್ಟಿದ್ದೇವೆ. ಮಹಾಭಾರತ ಯುದ್ಧ ಮನುಷ್ಯನ ಜೀವನದಲ್ಲಿ ನಿತ್ಯ ನಡೆಯುವ ಘಟನೆಗಳೇ ಆಗಿವೆ. ಪ್ರೀತಿ, ವಿಶ್ವಾಸದಿಂದ ಬದುಕಿದರೆ ಎಲ್ಲರ ಮನಸ್ಸನ್ನು ಗೆಲ್ಲಬಹುದು ಎಂಬ ಸಂದೇಶ ಶ್ರೀಕೃಷ್ಣ ದೇವರು ನೀಡಿದ್ದಾರೆ.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಮಾತನಾಡಿ ಶ್ರೀಕೃಷ್ಣನ ದಿವ್ಯ ಸಂದೇಶ ಅನುಸರಿಸಿ ಶ್ರೀಕೃಷ್ಣ ಪರಮಾತ್ಮ ಲೋಕಪ್ರಿಯ ದೇವರು. ತುಳಸಿಯ ಒಂದು ಎಲೆ ಅರ್ಪಿಸಿದರೂ ನಮ್ಮೆಲ್ಲರನ್ನು ರಕ್ಷಿಸುತ್ತಾನೆ. ಶ್ರೀಕೃಷ್ಣನ ದಿವ್ಯ ಸಂದೇಶ ಬಾಳಿನಲ್ಲಿ ಅನುಸರಿಸಿದರೆ ವಿಶ್ವವೇ ನಂದನವನವಾಗಿ ಶಾಂತಿ ನೆಲೆಸಲಿದೆ ಎಂದರು.

ಇದೇ ಸಂದರ್ಭದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀನಿವಾಸ್, ಉಪ ವೃತ್ತ ನಿರೀಕ್ಷಕರಾದ ಸುನೀಲ್, ಮಾಜಿ ನಗರ ಪಾಲಿಕೆ ಸದಸ್ಯರಾದ ಜಯಶಂಕರ್ ಸ್ವಾಮಿ, ಕೃಷ್ಣರಾಜೇಂದ್ರ  ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮಹಿಳಾ ಮುಖಂಡರಾದ ಲಕ್ಷ್ಮೀದೇವಿ, ವಿಕ್ರಂ ಅಯ್ಯಂಗಾರ್, ಕಡಕೊಳ ಜಗದೀಶ್, ಶ್ರೀಕಾಂತ್ ಕಶ್ಯಪ್, ರಾಕೇಶ್ ಕುಂಚಿಟಿಗ, ಸುಚೀಂದ್ರ ಹಾಗೂ ಕೆ.ಆರ್.ಪೊಲೀಸ್ ಠಾಣೆಯ ಸಿಬ್ಬಂದಿ ವಿಶ್ವನಾಥ್, ಮಹೇಶ್ ಹಾಗೂ ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು