News Karnataka Kannada
Monday, April 22 2024
Cricket
ಮೈಸೂರು

ಮೈಸೂರಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್

Photo Credit :

 ಮೈಸೂರಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್

ಮೈಸೂರು: ೨೦೧೯-೨೦ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಐಡಿಯಲ್ ಜಾವ ರೋಟರಿ ಶಾಲೆಯ ವಿದ್ಯಾರ್ಥಿನಿ ಎನ್.ಆರ್.ಪ್ರೇಕ್ಷಾ ಹಾಗೂ ವಿಜಯವಿಠಲ ಶಾಲೆಯ ವಿದ್ಯಾರ್ಥಿ ಸಿ.ಮನು 625ಕ್ಕೆ 623 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ.

ರವಿಚಂದ್ರೇ ಗೌಡ, ರೂಪಾ ದಂಪತಿಯ ಪುತ್ರಿ ಪ್ರೇಕ್ಷಾ, ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 99, ಕನ್ನಡದಲ್ಲಿ 100, ಗಣಿತದಲ್ಲಿ 100, ವಿಜ್ಞಾನದಲ್ಲಿ 99, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ.

 

ವಿಜಯವಿಠಲ ಶಾಲೆಯ ವಿದ್ಯಾರ್ಥಿ ಸಿ.ಮನು, ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 100, ಕನ್ನಡದಲ್ಲಿ 100, ಗಣಿತದಲ್ಲಿ 99, ವಿಜ್ಞಾನದಲ್ಲಿ 99, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. ಮನು, ಸಿ.ಚಿಕ್ಕಣ್ಣ, ಎಂ.ಭಾಗ್ಯ ದಂಪತಿಯ ಪುತ್ರ. ಇವರನ್ನು ಶಾಲೆಯ ಆಡಳಿತ ಮಂಡಳಿ ಅಭಿನಂದಿಸಿದೆ.

ವಿಜಯವಿಠಲ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಎಸ್.ಸಂಜೀವ್ ಹೊಳ್ಳ 621 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿ.ಎನ್.ಸುಧೀಂದ್ರ, ವೀಣಾ ದಂಪತಿಯ ಪುತ್ರನಾಗಿರುವ ಸಂಜೀವ್ ಹೊಳ್ಳ, ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 98, ಕನ್ನಡದಲ್ಲಿ 99, ಗಣಿತದಲ್ಲಿ 99, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 100 ಅಂಕಗಳಿಸಿದ್ದಾರೆ.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು