News Karnataka Kannada
Friday, April 19 2024
Cricket
ಮೈಸೂರು

ಮೈಸೂರಿನಲ್ಲಿ ರಿಕ್ಷಾ ಚಾಲಕನ ಬರ್ಬರ ಹತ್ಯೆ 

Photo Credit :

ಮೈಸೂರಿನಲ್ಲಿ ರಿಕ್ಷಾ ಚಾಲಕನ ಬರ್ಬರ ಹತ್ಯೆ 

ಮೈಸೂರು: ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಕ್ಷಾ ಚಾಲಕನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಹೆಬ್ಬಾಳು ಸೂರ್ಯ ಬೇಕರಿ ಸರ್ಕಲ್ ನಲ್ಲಿ ನಡೆದಿದೆ.

ಮೃತನನ್ನು ಹೂಟಗಳ್ಳಿಯ ದರ್ಶನ್ (21)ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದಾರೆ. ನಿನ್ನೆ ಮಧ್ಯರಾತ್ರಿ ರಸ್ತೆ ಬದಿ ಬಿದ್ದಿದ್ದ ಈತನನ್ನು ಕಂಡ ಬಸ್ ಪ್ರಯಾಣಿಕರು ಕೂಡಲೇ ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸ್ ರು ರಿಕ್ಷಾಚಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆಂದು ವೈದ್ಯರು ಸ್ಪಷ್ಟಪಡಿಸಿದ್ದು, ಈ ಕುರಿತು ದರ್ಶನ್ ತಂದೆ ಹೆಬ್ಬಾಳು ಪೊಲೀಸರಿಗೆ ದೂರು ನೀಡಿದ್ದಾರೆ. ರಾತ್ರಿ ತಮ್ಮ ಮನೆಗೆ ಬಂದ ಮೂವರು ತಮ್ಮ ಮಗನನ್ನು ಕರೆದೊಯ್ದಿದ್ದು ಅವರೇ ಈತನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದ್ದು, ಪೊಲೀಸ್ ರು ಕೂಡ ಸ್ನೇಹಿತರಿಂದಲೇ ಕೊಲೆಯಾಗಿರಬೇಕೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಹೆಬ್ಬಾಳು ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು