News Karnataka Kannada
Sunday, April 21 2024
Cricket
ಮೈಸೂರು

ಮೈಸೂರಿನಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

Photo Credit :

ಮೈಸೂರಿನಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಮೈಸೂರು: ನಾಡಿನ ಜೀವನಾಡಿಯೇ ಕಾಡು. ಕಾಡು ಇಲ್ಲದೆ ನಾಡು ಇರಲು ಸಾಧ್ಯವೇ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿದರು. 

ಅವರಿಂದು ಮೈಸೂರು ಅರಣ್ಯ ವೃತ್ತದ ವತಿಯಿಂದ ಅರಣ್ಯ ಭವನದ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕವಿರುವ ದಿ.ವೆಂಕಟಸ್ವಾಮಿ ಉದ್ಯಾನವನದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಬಳಿಕ ಮಾತನಾಡಿದ ಅವರು ಹುತಾತ್ಮರ ದಿನಾಚರಣೆ ಈ ಸಂದರ್ಭದಲ್ಲಿ ಆತ್ಮೀಯ ಸ್ನೇಹಿತ, ಸಹೋದ್ಯೋಗಿ ಸಿಸಿಎಫ್‌ ಎಸ್.ಮಣಿಕಂದನ್ ಅವರನ್ನು ಅವರೊಂದಿಗಿನ ನನ್ನ ಒಡನಾಟವನ್ನು ನೆನಪಿಸಿಕೊಂಡಾಗ ಅವರ ಅಮೂಲ್ಯ ವ್ಯಕ್ತಿತ್ವ, ಧ್ಯೇಯಗಳು ಎಂದಿಗೂ ಕೂಡ ನಮಗೆ ಮಾರ್ಗದರ್ಶನವಾಗಿರಬೇಕು ಅಂತ ಅನಿಸತ್ತೆ.

ಬಳ್ಳಾರಿಯಲ್ಲಿ ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಿದ್ದೀವಿ. ಅಂದಿನಿಂದ ಅವರ ಧ್ಯೇಯಗಳನ್ನು ನಾವು ಪ್ರತಿ ಕ್ಷಣದಲ್ಲೂ ಕೂಡ ತ್ಯಾಗಕ್ಕಾಗಲಿ, ಕಠಿಣ ಮತ್ತು ಕಾಳಜಿಯುಳ್ಳ ನಿರ್ಧಾರ ತೆಗೆದುಕೊಳ್ಳಲಿಕ್ಕಾಗಲಿ ಅವರು ಬದ್ಧರಾಗಿರತಕ್ಕಂತದ್ದನ್ನು ನೆನೆದಾಗ ಅತ್ಯಂತ ಗೌರವ ಅನಿಸತ್ತೆ ಎಂದರು.

ಅದೇ ರೀತಿ ಈ ಸಂದರ್ಭದಲ್ಲಿ ತಮ್ಮ ಕರ್ತವ್ಯ ದ ಒಂದು ಕರೆಗೆ ಓಗೊಟ್ಟು ಅವರು ಅರಣ್ಯ ಉಳಿಸಲಿಕ್ಕೆ ಅಥವಾ ಅರಣ್ಯ ಕಾಪಾಡಲಿಕ್ಕೆ ಹುತಾತ್ಮರಾದರು ಅಂತ ಹೇಳಲು ಬಯಸುವುದಿಲ್ಲ. ಹಾಗೆ ಹೇಳಿದರೆ ಅವರ ಒಂದು ಹಿರಿಮೆಯನ್ನು ಕೊಂಚ ಕಡಿಮೆ ಮಾಡಿದಂತೆ ಆಗುತ್ತದೆ. ಅವರು ಮನುಕುಲ ಉಳಿಸಲಿಕ್ಕೆ , ಮಾನವ ಪೀಳಿಗೆಯನ್ನು ಉಳಿಸಲಿಕ್ಕೆ ಎಲ್ಲ ಜೀವ ವೈವಿಧ್ಯವನ್ನು ಉಳಿಸಲಿಕ್ಕೆ ಹುತಾತ್ಮರಾಗಿದ್ದಾರೆ ಅಂತ ಹೇಳುವುದು ಅತ್ಯಂತ ಸೂಕ್ತ. ಯಾಕೆಂದರೆ ಈ ಮನುಷ್ಯ ಕೂಡ ಒಮ್ಮೆ ಕಾಡಿನ ವಾಸಿಯಾಗಿದ್ದ, ‘ಕಾಡು’ ಮಾನವನ ಮೊದಲು ‘ತೊಟ್ಟಿಲು’ ಆದರೆ ಕ್ರಮೇಣ ಕಾಡಿನಿಂದ ಮನುಷ್ಯ ನಾಡಿಗೆ ಬಂದಾಗ ನಾಡೇ ಪ್ರಮುಖವೆನಿಸಿ ಕಾಡು ಅಳಿವಿನತ್ತ ಹೋಗುವುದನ್ನು ನಾವು ಕಂಡೆವು. ಆ ನಿಟ್ಟಿನಲ್ಲಿ ಕಾಡನ್ನು ಉಳಿಸಿ, ಅರಣ್ಯ ಉಳಿಸಿ ಅಭಿಯಾನ ಆರಂಭವಾಯಿತು. ನಾಡಿಗೆ ಜೀವವೇ ಕಾಡು, ನಾಡು ಇಲ್ಲದೆಯೂ ಕಾಡು ಇರತ್ತೆ, ಆದರೆ ಕಾಡು ಇಲ್ಲದೆ ನಾಡು ಇರಲು ಎಂದಿಗೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಅಂತಹ ಒಂದು ಪ್ರಾಮುಖ್ಯತೆಯನ್ನು ಅರಿತಾಗ ಪ್ರತಿ ಯೊಂದು ಜೀವಿ ಮರ ಗಿಡ, ಪ್ರಾಣಿ ಪಕ್ಷಿ ಎಲ್ಲವಕ್ಕೂ ಆಸರೆಯಾಗಿರತಕ್ಕಂತಹ ಅರಣ್ಯವನ್ನು ಉಳಿಸಿ ಬೆಳೆಸತಕ್ಕಂತದ್ದು ಎಷ್ಟು ಉನ್ನತವಾದ ಕೆಲಸ, ಪ್ರಾಮುಖ್ಯವಾದ ಕೆಲಸ ಎನ್ನುವುದರ ಅರಿವಾಗತ್ತೆ. ಮಗುವಾಗಿದ್ದಾಗಿನಿಂದ ದೊಡ್ಡವರಾಗಿ ಬೆಳೆಯುವವರೆಗೂ ಈ ಮೌಲ್ಯವನ್ನು ಬೆಳೆಸಿಕೊಳ್ಳಬೇಕು. ಇನ್ನೊಬ್ಬರಲ್ಲಿ ಈ ಕಾಳಜಿಯನ್ನು ಉಂಟು ಮಾಡುವ ರೀತಿಯಲ್ಲಿ ನಾವು ವರ್ತಿಸಬೇಕು. ಹಾಗಾದಾಗ ಮಾತ್ರ ಈ ಹುತಾತ್ಮರಾದವರ ಎಲ್ಲರ ಧ್ಯೇಯಗಳನ್ನು ಕಾಳಜಿಯನ್ನು ಗೌರವಿಸದಂತಾಗುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಮುಂದುವರಿಯೋಣ. ಅದು ಅವರನ್ನು ನೆನೆಯುವಷ್ಟಕ್ಕೆ ಮಾತ್ರ ಸೀಮಿತಗೊಳ್ಳದೆ ಅವರ ಧ್ಯೇಯಗಳನ್ನು ಒಗ್ಗೂಡಿಸಿಕೊಂಡು ಅವರ ದಾರಿ ದೀಪದಲ್ಲಿ ನಾವು ಮುಂದೆ ಸಾಗೋಣ ಎಂದು ಸ್ಮರಿಸಿ ಹುತಾತ್ಮರಿಗೆ ನಮನ ಸಲ್ಲಿಸಿದರು.

ಹುಲಿಯೋಜನೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್ ಹುತಾತ್ಮರಾದ 50 ಮಂದಿಯನ್ನು ಸ್ಮರಿಸಿದರು. ನಿಷ್ಠೆಯಿಂದ ಕೆಲಸ ಮಾಡುತ್ತಿರುವಾಗಲೇ ಇವರೆಲ್ಲ ಹುತಾತ್ಮರಾಗಿದ್ದಾರೆ. ಇವರ ನಿಷ್ಠೆ, ಕಾರ್ಯತತ್ಪರತೆ ನಮಗೆಲ್ಲ ಮಾರ್ಗದರ್ಶಕವಾಗಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು