News Karnataka Kannada
Tuesday, April 16 2024
Cricket
ಮೈಸೂರು

ಮೈಸೂರಿನಲ್ಲಿ ಮುಮ್ಮಡಿ ಕನ್ನಡದ ಹಿರಿಮೆ ಕಾರ್ಯಕ್ರಮ

Photo Credit :

ಮೈಸೂರಿನಲ್ಲಿ ಮುಮ್ಮಡಿ ಕನ್ನಡದ ಹಿರಿಮೆ ಕಾರ್ಯಕ್ರಮ

ಮೈಸೂರು: ಬೇರು ಫೌಂಡೇಶನ್ ವತಿಯಿಂದ ಮೈಸೂರು ಸಂಸ್ಥಾನದ 22ನೇ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 226ನೇ ಜನ್ಮದಿನೋತ್ಸವವನ್ನು ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಆಚರಿಸಲಾಯಿತಲ್ಲದೆ, ಈ ಸಂಬಂಧ ಮುಮ್ಮಡಿ ಕನ್ನಡದ ಹಿರಿಮೆ ಕಾರ್ಯಕ್ರಮವನ್ನು ನಡೆಸಲಾಯಿತು.

ಮುಮ್ಮಡಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈಡಿ ರಾಜಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾಡದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನವರ  ರವರ ವರ್ಧಂತಿ ಬೆಟ್ಟದಲ್ಲಿ ಪ್ರತಿವರ್ಷ ಜರುಗುವಂತೆ ಮಾಡಿದ್ದೇ ಮುಮ್ಮಡಿ ಕೃಷ್ಣರಾಜ ಒಡೆಯರ್.  ಮೈಸೂರು ರಾಜ್ಯದಲ್ಲಿ ಬ್ರಿಟಿಷ್ ಆಳ್ವಿಕೆಯಿದ್ದರೂ ಕೂಡ ಕನ್ನಡ ಭಾಷಾ ಸಾಹಿತ್ಯ ಕಲೆ ವಾಸ್ತುಶಿಲ್ಪ ಕೇಂದ್ರ ಸೇರಿದಂತೆ ಶೈಕ್ಷಣಿಕ ಕ್ರಾಂತಿಗೆ ಮುನ್ನಡಿ ಬರೆದು ಜನಪರ ಆಡಳಿತ ಪ್ರಾರಂಭಿಸಿದವರೇ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು,  ಶಿಕ್ಷಣಕ್ಕೆ ಸಂಸ್ಕೃತ ಪಾಠಶಾಲೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಕುಕ್ಕರಹಳ್ಳಿ ಕೆರೆಯನ್ನು 1864ನೆ ಇಸವಿಯಲ್ಲಿ ನಿರ್ಮಿಸಿದರು ಎಂದರು.

ಮುಮ್ಮಡಿ ಕನ್ನಡದ ಹಿರಿಮೆ ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್, ಮಾಜಿ ನಗರಪಾಲಿಕೆ ಸದಸ್ಯ ಎಂ.ಕೆ.ಅಶೋಕ್, ಅಜಯ್ ಶಾಸ್ತ್ರಿ, ಬೇರು ಸಂಸ್ಥೆಯ ಅಧ್ಯಕ್ಷರಾದ ಮಧು ಎನ್ ಪೂಜಾರ್, ಲಕ್ಷ್ಮಿ ದೇವಿ, ರಾಕೇಶ್ ಕುಂಚಿಟಿಗ, ಚಕ್ರಪಾಣಿ, ಸುಚೀಂದ್ರ, ಪ್ರಶಾಂತ್ ಭಾರದ್ವಾಜ್, ಜೈ ಅರ್ಜುನ್ ಇನ್ನಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು