News Karnataka Kannada
Saturday, April 13 2024
Cricket
ಮೈಸೂರು

ಮೈಸೂರಿನಲ್ಲಿ ಮಾಜಿ ಸಿಎಂ ಗುಂಡುರಾವ್‍ ಸ್ಮರಣೆ

Photo Credit :

ಮೈಸೂರಿನಲ್ಲಿ ಮಾಜಿ ಸಿಎಂ ಗುಂಡುರಾವ್‍ ಸ್ಮರಣೆ

ಮೈಸೂರು: ಗುಂಡುರಾವ್ ಅಭಿಮಾನಿಗಳ ಬಳಗದ ವತಿಯಿಂದ ಮಾಜಿ ಮುಖ್ಯಮಂತ್ರಿ ಆರ್. ಗುಂಡುರಾವ್ ರವರ ಜನ್ಮದಿನೋತ್ಸವದ ಅಂಗವಾಗಿ ನಗರದ ಕಲಾಮಂದಿರದ ಆವರಣದಲ್ಲಿ ಗುಂಡುರಾಯರ ನೆನೆಪಿನಂಗಳ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಮಾತನಾಡಿ, ಗುಂಡುರಾಯರ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಅಪಾರವಾಗಿದೆ. ಬಡವರ್ಗದ ಮನೆಗಳಲ್ಲಿ ಸರ್ಕಾರಿ ಕೆಲಸ ನೀಡುವ ಮೂಲಕ ಅವರ ಜೀವನದ ಆರ್ಥಿಕ ಪರಿಸ್ಥಿತಿ ನಂದಾದೀಪವಾಗಿ ಲಕ್ಷಾಂತರ ಮಂದಿ ಸ್ವಾಭಿಮಾನಿಯಾಗಿ ದುಡಿಯಲು ಪ್ರೇರೇಪಿಸಿದರು. ಪೇ ಕಮಿಷನ್ ಜಾರಿಗೆ ತಂದರು ಮತ್ತು ರಾಜಧಾನಿಯೆಂದರೆ ಕೇಂದ್ರ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಸ್ಥಾಪಿಸುವ ಸಾರಿಗೆ ಯೋಜನೆ ಏಷ್ಯಾದಲ್ಲೆ ಪ್ರಪ್ರಥಮ ಮಹತ್ವದ ಪಡೆಯಿತು, ಕುಗ್ರಾಮದಲ್ಲಿರುವ ಬಡವರಿಗೆ ಉಚಿತ ವಿದ್ಯುತ್ ಯೋಜನೆ, ಬೆಂಗಳೂರಿಗೆ ಕಾವೇರಿ ನೀರು ಸಮರ್ಪಕ ಪೂರೈಕೆ, ಸೇರಿದಂತೆ ಸಾಕಷ್ಟು ಜನಪರ ಯೋಜನೆ ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದರು.

ಹಿರಿಯ ಸಮಾಜಸೇವಕರಾದ ಕೆ.ರಘುರಾಂ ವಾಜಪೇಯಿ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ಯಶಸ್ವಿಯಾಗಿ ನೆರವೇರಲು ಗುಂಡುರಾಯರ ಚಿಂತನೆ ಮತ್ತು ತಾಂತ್ರಿಕ ಪರಿಕಲ್ಪನೆ ಬಹಳಷ್ಟಿದೆ. ಮೈಸೂರಿನಲ್ಲಿ ಬ್ರಿಟಿಷ್ ಆಳ್ವಿಕೆ ರಾಜಾಶ್ರಯವಿದ್ದಾಗ ಬಹಳಷ್ಟು ಕಟ್ಟಡಗಳು ನಿಮಾಣವಾದವು ಆದರೆ ಪ್ರಜಾಪ್ರಭುತ್ವ ಬಂದ ನಂತರ ಕಲಾಮಂದಿರವೇ ಮೊದಲ ಕಟ್ಟಡ ಕನ್ನಡಕ್ಕಾಗಿ ಸ್ಥಾಪನೆಯಾಗಿದ್ದು ಅದಕ್ಕೆ ಕೆಲವರು ಎಷ್ಟೇ ವಿರೋಧಿಸಿದರೂ ಸಹ ಸಾಂಸ್ಕೃತಿಕ ರಾಜಧಾನಿಯಲ್ಲಿ ಕನ್ನಡ ಭಾಷೆ ಕಲೆ ಸಾಹಿತ್ಯ ಜನಪದ ಶೈಲಿಯ ಅಸ್ಥಿತ್ವ ಉಳಿಯಲು ಗುಂಡುರಾಯರ ದಿಟ್ಟ ನಡೆ ಮುಖ್ಯಕಾರಣ ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ಮಾತನಾಡಿ ದೇವಸ್ಥಾನದಲ್ಲಿ ಕೆಲಸ ಮಾಡುವ ಅರ್ಚಕರಿಗೆ ಪುರೋಹಿತರಿಗೆ ತಸ್ಥಿಕ್ ಯೋಜನೆ ಜಾರಿಗೆ ತಂದದ್ದೆ ಗುಂಡುರಾಯರು, ಶಿಕ್ಷಣ ಸಾಂಸ್ಕತಿಕ ಧಾರ್ಮಿಕ ಸಾಮಜಿಕ ಕ್ಷೇತ್ರಗಳ ಸಂಘ ಸಂಸ್ಥೆಗಳಿಗೆ ಅತಿ ಹೆಚ್ಚು ನಿವೇಶನ ಮಂಜೂರು ಮಾಡಿದಲ್ಲದೇ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಾರಣರಾದರು. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಧಾರ್ಮಿಕ ಕ್ಷೇತ್ರವಾಗಿ ಪ್ರವಾಸಿತಾಣವಾಗಿ ಗುಂಡುರಾಯರ ಕಾಲದಲ್ಲಿ  ವಿಶ್ವವಿಖ್ಯಾತವಾಯಿತು, ವಿಧಾನಸೌದಧಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದ  70ಕ್ಕೂ ಹೆಚ್ಚು ಶಾಸಕರು ಗುಂಡರಾಯರ ಗರಡಿಯವರು ಎಂದು ಕರೆಯಲ್ಪಡುತ್ತಿದ್ದರು ಗುಂಡುರಾಯರ ಕನಸು  ಕರ್ನಾಟಕ ಕಲಾಮಂದಿರ ಇಂದಿಗೆ ಲಕ್ಷಾಂತರ ಕಲಾವಿದರ ಪಾಲಿಗೆ ಕಲಾ ಪ್ರದರ್ಶನ ಪರಿಚಯ ದುಡಿಮೆಯ ದಾರಿ ನೀಡಿದೆ ಎಂದರು..

ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡ ಹರೀಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಚನ್ನಪ್ಪ, ಶ್ರೀಕಾಂತ್ ಕುಮಾರ್, ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷರಾದ ವಿನಯ್ ಕಣಗಾಲ್, ಅಜಯ್ ಶಾಸ್ತ್ರಿ, ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಕೆ ಅಶೋಕ್, ಸಿ.ಎಸ್.ರಘು, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ವೀಣಾ, ವೆಂಕಟೇಶ್, ರಾಕೇಶ್ ಕುಂಚಿಟಿಗ, ಮೈಕ್ ಚಂದ್ರು, ಬಾಲಕೃಷ್ಣ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು