News Karnataka Kannada
Thursday, April 18 2024
Cricket
ಮೈಸೂರು

ಮೈಸೂರಿನಲ್ಲಿ ಪ್ರಾರಂಭವಾಯಿತು ಆಕ್ಸಿಜನ್ ಅಳವಡಿತ ಬಸ್ಸುಗಳ ಕಾರ್ಯ

Photo Credit :

ಮೈಸೂರಿನಲ್ಲಿ ಪ್ರಾರಂಭವಾಯಿತು ಆಕ್ಸಿಜನ್ ಅಳವಡಿತ ಬಸ್ಸುಗಳ ಕಾರ್ಯ

ಮೈಸೂರು: ಕೊರೋನದಿಂದಾಗಿ ಉಂಟಾಗುತ್ತಿರುವ ಆಕ್ಸಿಜನ್ ಅಭಾವವನ್ನು ನೀಗಿಸುವ ನಿಟ್ಟಿನಿಂದ ರಾಜ್ಯದ ರಾಜಧಾನಿಯಲ್ಲಿ ಆಕ್ಸಿಜನ್ ಅಳವಡಿತ ಬಸ್ಸುಗಳನ್ನು ಪ್ರಾರಂಭಿಸಲಾಗಿತ್ತು. ಅಂತೆಯೆ ಇಂದಿನಿಂದ ಎರಡು ಆಕ್ಸಿಜನ್ ಬಸ್​​​ಗಳು ಮೈಸೂರಿನಲ್ಲಿ ಸಂಚಾರ ಆರಂಭಿಸಿವೆ. ಜಿಲ್ಲಾ ಅಗರ್​​ವಾಲ್ ಸಮಾಜದಿಂದ ಎರಡು ಬಸ್​​​ಗಳ‌ನ್ನ ಕೊಡುಗೆಯಾಗಿ ನೀಡಲಾಗಿದೆ.

 

ಗ್ರೀನ್ ವುಡ್ಸ್ ಇಂಟರ್​ನ್ಯಾಷನಲ್ ಸ್ಕೂಲ್ ಸಹಯೋಗದೊಂದಿಗೆ ಜಿಲ್ಲಾಡಳಿತಕ್ಕೆ ಮೊದಲ ಹಂತದಲ್ಲಿ ಎರಡು ಮಿನಿ ಬಸ್​ಗಳನ್ನ ಹಸ್ತಾಂತರ ಮಾಡಲಾಗಿದೆ. ಈ ಬಸ್​​ಗಳಲ್ಲಿ ಏಕಕಾಲದಲ್ಲಿ 14 ಜನರಿಗೆ ಆಕ್ಸಿಜನ್ ನೀಡುವ ವ್ಯವಸ್ಥೆ ಇದೆ ಎಂದು ಹೇಳಲಾಗಿದೆ. 

 

ಸಂಸದ ಪ್ರತಾಪ್ ಸಿಂಹ ಇಂದು ಆಕ್ಸಿಜನ್ ಬಸ್ಸುಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, JLB ಅಧ್ಯಕ್ಷ ಅಪ್ಪಣ್ಣ, ಮೇಯರ್ ರುಕ್ಮಿಣಿ ಮಾದೇಗೌಡ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಉಪಸ್ಥಿತರಿದ್ದರು. 

 

 

 

 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು