News Karnataka Kannada
Thursday, April 25 2024
Cricket
ಮೈಸೂರು

ಮೈಸೂರಲ್ಲಿ ಕೋವಿಡ್-19 ಸೋಂಕಿತರು ಹೆಚ್ಚಳ: ಪರಿಶೀಲನೆಗೆ ತಜ್ಞರ ತಂಡ

Photo Credit :

ಮೈಸೂರಲ್ಲಿ ಕೋವಿಡ್-19 ಸೋಂಕಿತರು ಹೆಚ್ಚಳ: ಪರಿಶೀಲನೆಗೆ ತಜ್ಞರ ತಂಡ

ಮೈಸೂರು: ಮೈಸೂರಿನಲ್ಲಿ ಕೋವಿಡ್-19 ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಆರೋಗ್ಯ ಇಲಾಖೆಯ ತಾಂತ್ರಿಕ ತಜ್ಞರ ತಂಡ ಇಂದು ನಗರಕ್ಕೆ ಆಗಮಿಸಿದೆ.

ಮೊದಲು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ತಂಡ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿದೆ. ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿದ್ದರು. ದಸರಾವನ್ನು ಸರಳ ಹಾಗೂ ಸುರಕ್ಷಿತವಾಗಿ ಆಚರಿಸಲು ಸೂಚನೆ ನೀಡಿದ್ದರು. ತಜ್ಞರ ತಂಡ ವರದಿ ನೀಡಿದ ನಂತರ ವರದಿಯ ಆಧಾರದ ಮೇಲೆ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.

 ಸಿಎಂ ಬಿಎಸ್ ವೈ ಸೂಚನೆ ಹಿನ್ನೆಲೆಯಲ್ಲಿ ಇಂದು ಮೈಸೂರಿಗೆ ತಜ್ಞರ ತಂಡ ಆಗಮಿಸಿದೆ. ಇಂದೇ ಸರ್ಕಾರಕ್ಕೆ ತಂಡ ವರದಿ ನೀಡಲಿದೆ. ಸರಳ ದಸರಾಗೆ 15 ಕೋಟಿ ಖರ್ಚು ಮಾಡುತ್ತಿರುವುದಕ್ಕೆ ಜನತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಾ.ಸುದರ್ಶನ್ ನೇತೃತ್ವದಲ್ಲಿ ತಂಡ ಮೈಸೂರಿಗೆ ಭೇಟಿ ನೀಡಿದೆ. ಮೊದಲಿಗೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದು, ಬಳಿಕ ಚಾಮುಂಡಿಬೆಟ್ಟಕ್ಕೆ ತೆರಳಲಿದೆ. ಬಳಿಕ ಅಂಬಾವಿಲಾಸ ಅರಮನೆಗೆ ಭೇಟಿ ನೀಡಲಿದೆ.

ತಂಡದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್, ಸದಸ್ಯ ಡಾ.ಲೋಕೇಶ್, ಸದಸ್ಯ ಕಾರ್ಯದರ್ಶಿ ಡಾ.ಮಹಮ್ಮದ್ ಷರೀಫ್ , ಬೆಂಗಳೂರು ವಿಭಾಗೀಯ ಸದಸ್ಯರುಗಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು