News Karnataka Kannada
Wednesday, April 17 2024
Cricket
ಮೈಸೂರು

ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1190ಕ್ಕೆ ಏರಿಕೆ

Photo Credit :

ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1190ಕ್ಕೆ ಏರಿಕೆ

ಮೈಸೂರು: ಜಿಲ್ಲೆಯಲ್ಲಿ ನಿನ್ನೆ 99ಕೊರೋನಾ ವೈರಸ್ ನ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1190ಕ್ಕೇರಿದ್ದು, ಮೃತರ ಸಂಖ್ಯೆ 47ಕ್ಕೇರಿದೆ.

ಜಿಲ್ಲೆಯಲ್ಲಿ ಒಟ್ಟು 640ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 503ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ 14ವರ್ಷದ ಬಾಲಕ, ವೃದ್ಧ ವೈದ್ಯ , 73ವರ್ಷದ ವೃದ್ಧ 38ವರ್ಷದ ಮಹಿಳೆ, 49ವರ್ಷದ ಪುರುಷ, 53ವರ್ಷದ ಪುರುಷ ಮೃತಪಟ್ಟಿದ್ದು ಒಟ್ಟು 6ಮಂದಿ ಸಾವನ್ನಪ್ಪಿದ್ದಾರೆ.

ನಿನ್ನೆ 5ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ 254, ಕೋವಿಡ್ ಇತರ ಆಸ್ಪತ್ರೆಗಳಲ್ಲಿ 65, ಕೋವಿಡ್ ಕೇರ್ ಕೇಂದ್ರಗಳಲ್ಲಿ 49ಹಾಗೂ 219ಮಂದಿಗೆ ಮನೆಯಲ್ಲೇ ಐಸೋಲೇಷನ್ ಮಾಡಲಾಗಿದೆ.

53ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12ಮಂದಿ ಐಸಿಯುನಲ್ಲಿದ್ದಾರೆ. ಶೀತ ಜ್ವರ ಮಾದರಿಯ ರೋಗದಿಂದ ಬಳಲುತ್ತಿದ್ದ 29ಮಂದಿ, ಇತರ ರಾಜ್ಯ ಜಿಲ್ಲೆಗಳಿಂದ ಬಂದ 36ಮಂದಿಯಲ್ಲಿ ಹಾಗೂ ಪ್ರಾಥಮಿಕ ಸಂಪರ್ಕದ 26ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ. ಜಿಲ್ಲೆಯಲ್ಲಿ 2100ಮಂದಿಯನ್ನು 14ದಿನಗಳ ಹೋಂ ಕ್ವಾರೆಂಟೈನ್ ಮಾಡಲಾಗಿದೆ. ಇದುವರೆಗೆ ಒಟ್ಟು 29,420ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು