News Karnataka Kannada
Monday, April 15 2024
Cricket
ಮೈಸೂರು

ಮೂಡಾದಿಂದ ಒತ್ತುವರಿ ತೆರವು: 6 ಕೋಟಿ ರೂ  ಆಸ್ತಿ ವಶ

Photo Credit :

ಮೂಡಾದಿಂದ ಒತ್ತುವರಿ ತೆರವು: 6 ಕೋಟಿ ರೂ  ಆಸ್ತಿ ವಶ

ಮೈಸೂರು: ಆಶಾ ಮಂದಿರ ಯೋಜನೆಯಡಿ ನಗರದ ದೇವನೂರು 1ನೇ ಹಂತ ಬಡಾವಣೆಯ ಮೂಲೆ ನಿವೇಶನಗಳಲ್ಲಿ ಮೂಡ ಜಮೀನನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದ ಹತ್ತಾರು ಶೆಡ್ಡುಗಳನ್ನು ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ತೆರವುಗೊಳಿಸಿದರು.

ದೇವನೂರು ಬಡಾವಣೆಯ ಮೂಲೆ ನಿವೇಶನಗಳಾದ ಸಂಖ್ಯೆ 1142, 1162, 1698, 1699, 1728, 1727  ರಲ್ಲಿ  40×40 ಅಡಿ ಅಳತೆಯ 4 ನಿವೇಶನ ಹಾಗೂ 30×40 ಅಡಿ ಅಳತೆಯ 2 ನಿವೇಶನಗಳಲ್ಲಿ ಒಟ್ಟು 8800 ಚದರ ಅಡಿಗಳಷ್ಟನ್ನು  ಒತ್ತುವರಿ ಮಾಡಿಕೊಂಡು ಶೆಡ್‌ ನಿರ್ಮಿಸಲಾಗಿತ್ತು. ಶೆಡ್‌ ತೆರವುಗೊಳಿಸಲಾದ ಈ  ನಿವೇಶನಗಳ ಒಟ್ಟು ಮೌಲ್ಯ 6 ಕೋಟಿ ರೂಪಾಯಿ  ಮೂಡ ಆಯುಕ್ತ ನಟೇಶ್‌ ತಿಳಿಸಿದರು.

ಆಯುಕ್ತ ನಟೇಶ್‌ ನೇತೃತ್ವದಲ್ಲಿ  ನಡೆದ ಒತ್ತುವರಿ ತೆರುವು ಕಾರ್ಯಾಚರಣೆಯಲ್ಲಿ ಅಧೀಕ್ಷಕ ಅಭಿಯಂತರ ಶಂಕರ್, ಕಾರ್ಯಪಾಲಕ ಅಭಿಯಂತರರಾದ ಎಂ.ಆರ್.ಪಾಂಡುರಂಗ, ಜಿ.ಸುವರ್ಣ, ವಲಯ ಅಧಿಕಾರಿಗಳಾದ ಜಿ.ಮೋಹನ್, ಎಸ್.ಕೆ.ಭಾಸ್ಕರ್, ಸಿ.ಕಿರಣ್, ಕೆ.ಆರ್.ಮಹೇಶ್, ಎಚ್.ಪಿ.ಶಿವಣ್ಣ, ನಾಗೇಶ್, ಎಚ್.ಎನ್.ರವೀಂದ್ರ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ಇತರರು  ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು