News Karnataka Kannada
Monday, April 22 2024
Cricket
ಮೈಸೂರು

ಮಳೆಯಿಂದ ಮುಸುಕಿನ ಜೋಳ ಬೆಳೆದ ರೈತರ ಪರದಾಟ

Photo Credit :

ಮಳೆಯಿಂದ ಮುಸುಕಿನ ಜೋಳ ಬೆಳೆದ ರೈತರ ಪರದಾಟ

ಮೈಸೂರು: ಕೊಡಗಿನಲ್ಲಿ ಮಳೆ ಸುರಿಯುತ್ತಿರುವ ಕಾರಣ ಗಡಿಭಾಗದ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದ ರೈತರು ಸೇರಿದಂತೆ ಕೃಷಿ ಕಾರ್ಮಿಕರು ಪರದಾಡುವಂತಾಗಿದೆ.

ದಿನವಿಡೀ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಅದರಲ್ಲೂ ಕೊಡಗು ಜಿಲ್ಲೆಗೆ ಹೊಂದಿಕೊಂಡಂತಿರುವ ಹನಗೋಡು ಹೋಬಳಿಯ ಸುತ್ತಮುತ್ತ ರೈತರು ಮುಸುಕಿನ ಜೋಳ ಕಟಾವು ಮಾಡುವ ಸಮಯವಾಗಿದ್ದು ಮಳೆಯಾಗುತ್ತಿರುವುದರಿಂದ ಜಮೀನಿನ ಹತ್ತಿರ ತೆರಳದೆ ಆತಂಕದಲ್ಲಿ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಇದಲ್ಲದೆ ತಂಬಾಕು ಬೆಳೆಯನ್ನು ತೆಗೆದು ಅಲ್ಲಿ ರಾಗಿ ಬಿತ್ತನೆ ಕಾರ್ಯ ನಡೆಯುತ್ತಿದ್ದು ಅತಿಯಾದ ಮಳೆಯಾದ್ದರಿಂದ ವ್ಯವಸಾಯಕ್ಕೆ ಅಡ್ಡಿಯುಂಟಾಗಿದೆ ಹಾಗೂ ಕೊಡಗು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಯಿಂದ ರೆಡ್ ಅಲರ್ಟ್ ಘೋಷಿಸಿರುವ ಕಾರಣ ಇತ್ತ ಕೊಡಗಿಗೆ ತೆರಳುವ ಕೂಲಿಕಾರ್ಮಿಕರು ಸಹ ಮನೆಯಿಂದ ಹೊರಬಾರದೆ ಕೂಲಿ ಕೆಲಸವೂ ಇಲ್ಲದೆ ಮನೆಯಲ್ಲೇ ಇರುವಂತಾಗಿದೆ.

ನಾಗರಹೊಳೆ ಉದ್ಯಾನದ 8 ವಲಯಗಳಲ್ಲೂ ಉತ್ತಮ ಮಳೆಯಾಗಿದ್ದು ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಆದರೆ ಮಳೆಯ ಮುನ್ಸೂಚನೆ ಇಲ್ಲದೆ ಈ ಮೊದಲೇ ಜೋಳ ಕಟಾವು ಮಾಡಿದ  ರೈತರು ಈಗ ಮಳೆ ಸುರಿಯುತ್ತಿರುವುದರಿಂದ ಪರದಾಡುವಂತಾಗಿದೆ. ಕಳೆದ ಮೂರು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವುದರಿಂದಾಗಿ ಕೆರೆಕಟ್ಟೆಗಳು ತುಂಬಿದ್ದು, ಅಂತರ್ಜಲವೂ ವೃದ್ಧಿಯಾಗುತ್ತಿದ್ದು ರೈತರಲ್ಲಿ ನೆಮ್ಮದಿ ತರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು