News Karnataka Kannada
Saturday, April 20 2024
Cricket
ಮೈಸೂರು

ಮನೆಯವರ ವರದಕ್ಷಿಣೆ ಕಾಟಕ್ಕೆ ಪತ್ನಿ ಬಲಿ ; ಗಂಡನೂ ನೇಣಿಗೆ ಶರಣು

Photo Credit :

ಮನೆಯವರ ವರದಕ್ಷಿಣೆ ಕಾಟಕ್ಕೆ ಪತ್ನಿ ಬಲಿ ; ಗಂಡನೂ ನೇಣಿಗೆ ಶರಣು

ಮೈಸೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಆರೋಪಿ ಪತಿ ಸಾಫ್ಟ್‌ವೇರ್‌ ಇಂಜಿನಿಯರ್‌ ಪ್ರದೀಪ್‌ ಕೈಲಾಸ್‌ಪುರಂನ ಕೈದಿಗಳ ತಾತ್ಕಾಲಿಕ ಕೇಂದ್ರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಪ್ರದೀಪ್‌ ಕ್ವಾರಂಟೈನ್‌ ಕೇಂದ್ರದಲ್ಲಿ ಬೆಡ್‌ಶೀಟ್‌ನಿಂದಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರದೀಪ್‌ ಬಂಧನಕ್ಕೆ ಒಳಗಾಗಿದ್ದ. ಕೋವಿಡ್‌ ಕಾರಣದಿಂದ ಆತನನ್ನು ಕೈದಿಗಳ ತಾತ್ಕಾಲಿಕ ಕೇಂದ್ರದಲ್ಲೇ ಇರಿಸಲಾಗಿತ್ತು.
ನಂಜನಗೂಡು ತಾಲ್ಲೂಕು ಸರಗೂರು ನಿವಾಸಿ ಆಶಾರಾಣಿ ಏ.4 ರಂದು ನಗರದ ಶ್ರೀರಾಂಪುರ ಎಸ್‌ಬಿಎಂ ಕಾಲೋನಿ ನಿವಾಸಿ ಸಾಫ್ಟ್‌ವೇರ್ ಇಂಜಿನಿಯರ್‌ ಆದ ಎಂ.ಸಿ.ಪ್ರದೀಪ್ ಎಂಬಾತನೊಡನೆ ವಿವಾಹವಾಗಿದ್ದರು.
ಇಂಜಿನಿಯರ್‌ ಎಂಬ ಕಾರಣಕ್ಕಾಗಿ ನಗರದ ಸರಸ್ವತಿಪುರಂನಲ್ಲಿರುವ ಬಂದಂತಮ್ಮ ಕಲ್ಯಾಣಮಂಟಪದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆಗಾಗಿ 120 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದನ್ನು ನಿಡಲಾಗಿತ್ತು.ತಾಳಿ ಜೊತೆ ಚಿನ್ನದ ಕಾಸನ್ನು ಪೋಣಿಸಿಕೊಂಡು ಬಂದಿಲ್ಲ ಎಂದು ಅತ್ತೆ ಮನೆಯವರು ನಿಂದಿಸುತ್ತಿದ್ದರಿಂದ ಬೇಸತ್ತ ಆಶಾ ತವರಿಗೆ ಹೋಗಿದ್ದಳು. ಆದರೆ, ಮೇ 3ರಂದು ಸಹೋದರನೊಂದಿಗೆ ವಾಪಸ್‌ ಅತ್ತೆ ಮನೆಗೆ ಕಳಿಸಲಾಗಿತ್ತು. ಯಥಾ ಪ್ರಕಾರ ಕಿರುಕುಳ ಆರಂಭವಾಗಿದ್ದು ಯುವತಿಯು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು