News Karnataka Kannada
Tuesday, April 16 2024
Cricket
ಮೈಸೂರು

ಮಗಳಿಗೆ ಮಕ್ಕಳಾಗದ್ದಕ್ಕೆ ತಂದೆ ಮಾಡಿದ್ದೇನು?

Photo Credit :

ಮಗಳಿಗೆ ಮಕ್ಕಳಾಗದ್ದಕ್ಕೆ ತಂದೆ ಮಾಡಿದ್ದೇನು?

ಮೈಸೂರು: ಮಗಳಿಗೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಿ ಕಳ್ಳನಾದ ಘಟನೆ ಇಲ್ಲಿಗೆ ಸಮೀಪದ ನಂಜನಗೂಡಿನಲ್ಲಿ ನಡೆದಿದೆ.

ಕಳೆದ 5 ದಿನಗಳ ಹಿಂದೆ ನಂಜನಗೂಡಿನ ದೇವಾಲಯದ ಮುಂದೆ ಬಿಕ್ಷೆ ಬೇಡುತಿದ್ದ ಭಿಕ್ಷುಕಿಯೊಬ್ಬಳ ಮಗುವೊಂದು ಅಪಹರಣಕ್ಕೀಡಾಗಿತ್ತು. ಆರೋಪಿಯು ಭಿಕ್ಷುಕಿಯ ಕೈಗೆ ಹತ್ತು ರೂಪಾಯಿ ನೀಡಿ ನಂತರ ಉಪಾಯವಾಗಿ ಮಗುವನ್ನು ಅಪಹರಿಸಿದ್ದ. ತನಿಖೆ ಕೈಗೊಂಡ ಪೋಲೀಸರು ಕೊನೆಗೂ ಸೋಮವಾರ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. 

ಆರೋಪಿ ಗಂಗರಾಜು (47) ಎಂದು ಗುರುತಿಸಲಾಗಿದ್ದು ನಂಜನಗೂಡು ತಾಲೂಕು ಹುಣಸೆಕೊಪ್ಪ ಗ್ರಾಮದವನಾಗಿದ್ದಾನೆ. ಈತನ ಮಗಳಿಗೆ ಮದ್ವೆಯಾಗಿ ನಾಲ್ಕು ವರ್ಷವಾದ್ರೂ ಮಕ್ಕಳಾಗಿರಲಿಲ್ಲ. ಮಗುವೊಂದನ್ನು ತಂದು ಪೋಷಿಸಿದ್ರೆ ಮಗಳಿಗೆ ಮಕ್ಕಳಾಗುತ್ತದೆ ಎಂದು ಜ್ಯೋತಿಷಿ ಹೇಳಿದ ಮಾತನ್ನು ನಂಬಿದ್ದ ಗಂಗರಾಜು ಅಪಹರಣಕ್ಕೆ ಮುಂದಾಗಿದ್ದನು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು