News Karnataka Kannada
Thursday, April 18 2024
Cricket
ಮೈಸೂರು

ಮಗನ ಔಷಧ ತರಲು 300 ಕಿ.ಮೀ. ಸೈಕಲ್‌ ತುಳಿದ ಬಡ ತಂದೆ

Photo Credit :

ಮಗನ ಔಷಧ ತರಲು 300 ಕಿ.ಮೀ. ಸೈಕಲ್‌ ತುಳಿದ ಬಡ ತಂದೆ

ಪುತ್ರನಿಗೆ ಔಷಧ ತರಲು ಕಾರ್ಮಿಕನೊಬ್ಬ 300 ಕಿ.ಮೀ. ಸೈಕಲ್‌ ತುಳಿದಿರುವ ಘಟನೆ ತಿ. ನರಸೀಪುರದಲ್ಲಿ ನಡೆದಿದೆ. ಆನಂದ್‌ (45) ಎನ್ನುವವರು ಹತ್ತು ವರ್ಷದ ತಮ್ಮ ವಿಕಲಾಂಗ ಪುತ್ರನಿಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಸೈಕಲ್‌ನಲ್ಲಿ ಹೋಗಿ ಬಂದಿದ್ದಾರೆ. ಪುತ್ರನಿಗೆ ಅಗತ್ಯವಿರುವ ಔಷಧವು ಸ್ಥಳೀಯವಾಗಿ ಎಲ್ಲಿಯೂ ಸಿಗಲಿಲ್ಲ. ಬೆಂಗಳೂರಿಗೆ ಹೋದಾಗಲೆಲ್ಲಾ ಎರಡು ತಿಂಗಳಿಗಾಗುವಷ್ಟು ಔಷಧ ತರುತ್ತಿದ್ದರು.
ಲಾಕ್‌ಡೌನ್‌ ಇರುವ ಕಾರಣ ಈಚೆಗೆ ಬಂಗಳೂರಿಗೆ ಹೋಗಲಾಗಲಿಲ್ಲ. ಇತ್ತ ಪುತ್ರನ ಔಷಧವೂ ಕಡಿಮೆಯಾಗುತ್ತಾ ಬಂತು. ಔಷಧಿ ತರುವಂತೆ ಪರಿಚಯಸ್ಥರನ್ನು ಕೇಳಿದಾಗಲೂ ನೆರವಿಗೆ ಬರಲಿಲ್ಲ. ಆಗ ಆನಂದ್‌ ಅವರು ಮೇ 23ರಂದು ಬನ್ನೂರು, ಮಳವಳ್ಳಿ, ಕನಕಪುರ ಮಾರ್ಗವಾಗಿ ಬೆಂಗಳೂರು ತಲುಪಿದ್ದಾರೆ. ನಡುವೆ ಹಸಿದ ಹೊಟ್ಟೆಯಲ್ಲಿ ಕಂಗೆಟ್ಟಿದ್ದ ಆನಂದ್‌ ಅವರು ಕನಕಪುರದ ದೇವಾಲಯವೊಂದರಲ್ಲಿ ತಂಗಿ ರಾತ್ರಿ 10 ಗಂಟೆಗೆ ಬನಶಂಕರಿಗೆ ತಲುಪಿ ಅಪರಿಚಿತರ ಬಳಿ ತಮ್ಮ ಕಷ್ಟ ಹೇಳಿಕೊಂಡರು. ಇದರಿಂದ ಮರುಗಿದ ಅವರು ಉಳಿಯಲು ಸ್ಥಳ ಹಾಗೂ ಊಟ ನೀಡಿದ್ದಾರೆ. ಬೆಳಗ್ಗೆ ಎದ್ದು ನಿಮ್ದಾನ್ಸ್‌ಗೆ ತೆರಳಿ ಔಷಧ ತೆಗೆದುಕೊಂಡಾಗ ಆನಂದ್‌ ಅವರು ತಾವು ಸೈಕಲ್‌ನಲ್ಲಿ ಆಸ್ಪತ್ರೆಗೆ ಬಂದಿದ್ದಾಗಿ ವೈದ್ಯರ ಬಳಿ ಹೇಳಿಕೊಂಡರು. ಆಗ ವೈದ್ಯರೇ ಆನಂದ್‌ಗೆ ಸಾವಿರ ರೂಪಾಯಿ ಕೊಟ್ಟು ಕಳಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರು ಬಿಟ್ಟ ಆನಂದ್‌ ಮತ್ತೆ ಸಂಜೆ 4ಗಂಟೆಗೆ ಊರು ತಲುಪಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು