News Karnataka Kannada
Thursday, April 25 2024
ಮೈಸೂರು

ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲು ಮುಂದಾದ ಮೈಸೂರಿನ ಸುತ್ತೂರು ಮಠ

Photo Credit :

ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲು ಮುಂದಾದ ಮೈಸೂರಿನ  ಸುತ್ತೂರು ಮಠ

ಮೈಸೂರು : ಕೊರೋನಾ ಸಂಕಷ್ಟಕ್ಕೆ ಸಿಲುಕಿದವರನ್ನು ಕಾಪಾಡಲು ಹಾಗೂ ಅವರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚಿಂತಿಸಿ ಸಹಾಯಹಸ್ತ ನೀಡಲು ಅನೇಕರು ಈಗಾಗಲೇ ಮುಂದೆ ಬಂದಿದ್ದಾರೆ. ಅಂತೆಯೇ ಇದೀಗ ಮೈಸೂರಿನ ಸುತ್ತೂರು ಮಠ ಕೂಡ ತನ್ನ ಕಡೆಯಿಂದ ಸಹಾಯ ನೀಡಲು ಮುಂದಾಗಿದ್ದು, ಕೊರೋನದಲ್ಲಿ ಸಿಲುಕಿದ ರಾಜ್ಯದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಮುಂದಾಗಿದೆ . 

 

ಈ ಸಂಬಂಧ ಮೈಸೂರಿನಲ್ಲಿ ಹೇಳಿಕೆ ನೀಡಿರುವ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು , ಒಂದರಿಂದ ಹತ್ತನೇ ತರಗತಿವರೆಗಿನ ಬಾಲಕ ಬಾಲಕಿಯರಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡುವುದಾಗಿ ತಿಳಿಸಿದ್ದಾರೆ . 

 

ಕಷ್ಟದಲ್ಲಿರುವ ರಾಜ್ಯದ ವಿವಿಧೆಡೆಯ ಮಕ್ಕಳನ್ನು ಮೈಸೂರು ಜಿಲ್ಲೆಯ ಟಿ . ನರಸೀಪುರ ತಾಲೂಕಿನಲ್ಲಿರುವ ಸುತ್ತೂರಿನ ವಸತಿ ಶಾಲೆಗೆ ಸೇರಿಸಲು ಪಾಲಕರು ಅಥವಾ ಕುಟುಂಬ ಸದಸ್ಯರು ಅಥವಾ ಪೋಷಕರು 7411486938 ಸಂಪರ್ಕಿಸಬಹುದು. ಈ ಮೂಲಕ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ಮಠದ ಗೌರವ ಕಾರ್ಯದರ್ಶಿ ಎಸ್ . ಶಿವಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು