News Karnataka Kannada
Wednesday, April 24 2024
Cricket
ಮೈಸೂರು

ಭಗವತ್ ಸಿಂಗ್ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ

Photo Credit :

ಭಗವತ್ ಸಿಂಗ್ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ

ಮೈಸೂರು: ಭಗವತ್ ಸಿಂಗ್ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು.

ಬೇರು ಫೌಂಡೇಷನ್ ವತಿಯಿಂದ ಕ್ರಾಂತಿಕಾರಿ ಮಹಾನ್ ದೇಶಭಕ್ತ ಭಗತ್ ಸಿಂಗ್  ಅವರ 113ನೇ ಜಯಂತ್ಯೋತ್ಸವ ಅಂಗವಾಗಿ ಮೆಟ್ರೋ ಪಾಲ್ ಬಳಿಯಿರುವ  ಫೀಲ್ಡ್ ಮಾರ್ಷಲ್  ವೃತ್ತದಲ್ಲಿ ಹಮ್ಮಿಕೊಂಡಿದ್ದ ಜೈ ಹಿಂದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದು ಭಗತ್ ಸಿಂಗ್ ಯುವ ಜನತೆಗೆ ಪ್ರೇರಣೆಯಾಗಿದ್ದರು ಎಂದರು.

ತನ್ನ 23ನೇ ಪ್ರಾಯದಲ್ಲಿಯೇ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಮಹಾನ್ ದೇಶಭಕ್ತರು ಮದುವೆ ಆಗಲು ನಿರಾಕರಿಸಿ ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರಕ್ತಸಿಕ್ತ ಭೂಮಿಯನ್ನು ಕಂಡು ಆಗಲೇ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಕಾಲಿಟ್ಟ ಅವರು ಬ್ರಿಟಿಷರ ಗಮನ ಸೆಳೆಯಲು  ಹಾಗೂ ಅವರಿಗೆ ಘೋರ ಎಚ್ಚರಿಕೆ ನೀಡಲು 1929 ರಲ್ಲಿ  ದೆಹಲಿಯ  ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆಯುವ ಮೂಲಕ ತಮ್ಮ ಎದೆಗಾರಿಕೆಯನ್ನು ಪ್ರದರ್ಶಿಸಿದ್ದರು ಎಂದು ಹೇಳಿದರು.

ಈ ವೇಳೆ ಮಾತನಾಡಿದ ಸಮಾಜಸೇವಕ ರಘುರಾಮ್ ವಾಜಪೇಯಿಯವರು  ತನ್ನ ಸಾವಿನಿಂದ ದೇಶದ ಯುವಜನತೆ ರೋಷಾವೇಷದಿಂದ ಬ್ರಿಟಿಷರ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತೇನೆಂದು ಅರಿತಿದ್ದ ಭಗತ್ ಸಿಂಗ್ ತಮ್ಮ ಮಿತ್ರರಾದ ರಾಜಗುರು ಹಾಗೂ ಸುಖದೇವ ಅವರೊಂದಿಗೆ ಸಂತೋಷದಿಂದ ಬ್ರಿಟಿಷರ ನೇಣಿಗೆ ಕೊರಳೊಡಿದ್ದರು. ಇವತ್ತಿನ ಯುವಕರು ಭಗತ್ ಸಿಂಗ್ ಅವರ ಜೀವನ ಚರಿತ್ರೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಭಗತ್ ಸಿಂಗ್ ಅವರ ಬಲಿದಾನ ತ್ಯಾಗ ಇವೆಲ್ಲದಕ್ಕೂ ಒಂದು ಅರ್ಥ ಸಿಗಬೇಕಾದರೆ ಇವತ್ತಿನ ಯುವಕರು ಅವರ ಜೀವನದ ಚರಿತ್ರೆಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಬೇರು ಫೌಂಡೇಷನ್ ಅಧ್ಯಕ್ಷ ಮಧು ಎನ್, ಮಹಾನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತೇಶ್, ಮಾಜಿ ನಗರ ಪಾಲಿಕಾ ಸದಸ್ಯರಾದ ಎಂಡಿ ಪಾರ್ಥಸಾರಥಿ, ಪ್ರಧಾನ ಕಾರ್ಯದರ್ಶಿ ಜೈ ಅರ್ಜುನ್, ವಿಕ್ರಂ ಅಯ್ಯಂಗಾರ್, ಬಿಜೆಪಿ ಮುಖಂಡರಾದ ಜೋಗಿ ಮಂಜು,  ಬಿಜೆಪಿ ಮಾಧ್ಯಮ ಸಂಚಾಲಕರಾದ  ಪ್ರದೀಪ್ ಕುಮಾರ್, ರಾಕೇಶ್ ಭಟ್, ಅಜಯ್ ಶಾಸ್ತ್ರಿ, ಆನಂದ್, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್, ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್, ನವೀನ್ ಶೆಟ್ಟಿ, ಚಕ್ರಪಾಣಿ ಇನ್ನಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು