News Karnataka Kannada
Monday, April 15 2024
Cricket
ಮೈಸೂರು

ಬಕ್ರೀದ್ ಹಬ್ಬ: ಮೌಲಾನಾ ಅಹ್ಮದ್ ರಷಾದಿಯ ಮಹತ್ವದ ನಿರ್ದೇಶನ

Photo Credit :

ಬಕ್ರೀದ್ ಹಬ್ಬ: ಮೌಲಾನಾ ಅಹ್ಮದ್ ರಷಾದಿಯ ಮಹತ್ವದ ನಿರ್ದೇಶನ

ಮೈಸೂರು: ಈದುಲ್ ಅಲ್ ಹಜ್ ಹಾ(ಬಕ್ರೀದ್ ಹಬ್ಬ)ಮತ್ತು ಖುರ್ಬಾನಿಯ ಕುರಿತು ಅಮೀರೆ ಕರೀಅತ್ ಕರ್ನಾಟಕ ಮೌಲಾನಾ ಸಗೀರ್ ಅಹ್ಮದ್ ರಷಾದಿ ಕೆಲವು ಮಹತ್ವದ ನಿರ್ದೇಶನಗಳನ್ನು ಮುಸ್ಲಿಂ ಬಾಂಧವರಿಗೆ ನೀಡಿದ್ದಾರೆ.

ಈದುಲ್ ಅಜ್ ಹಾ (ಬಕ್ರೀದ್) ಹಬ್ಬದ ನಮಾಜ್ ನ್ನು ಮಸೀದಿಯಲ್ಲಿ , ಈದ್ ಗಾಹ್ ನಲ್ಲಿ ಅಥವಾ ನಿಮ್ಮ ಹತ್ತಿರದ ಯಾವುದಾದರೂ ದೊಡ್ಡ ಹಾಲ್ ನಲ್ಲಿ ಸಲ್ಲಿಸಬೇಕು. ಈದ್ ನಮಾಜ್ ನ್ನು ಮುಂಜಾನೆ 6.30ಕ್ಕೆ ಸಲ್ಲಿಸಬೇಕು. ನಮಾಜ್ ಗಾಗಿ ಸಾಲುಗಟ್ಟಿ ನಿಲ್ಲುವಾಗ ಸುರಕ್ಷಿತ ಅಂತರವನ್ನು ಪಾಲಿಸಬೇಕು. ನಮಾಜ್ ನ ಏರ್ಪಾಡು ಮಾಡುವವರು ಸಮಯಕ್ಕೆ ಮುನ್ನವೇ ಎಲ್ಲ ಪೂರ್ವಭಾವಿ ಸಿದ್ಧತೆಗಳನ್ನು ಪೂರ್ಣಗೊಳಿಸಿ ಸಮಯಕ್ಕೆ ಸರಿಯಾಗಿ ಈದ್ ನಮಾಜ್ ನ್ನು ಆರಂಭಿಸಬೇಕು. ನಮಾಜ್ ಮತ್ತು ಅರಬಿ ಖುತ್ಸಾ ಮಾತ್ರ ಇರಬೇಕು. ಇಮಾಮ್ ಮತ್ತು ಖತೀಬ್ ಗಳು ಈ ಕುರಿತು ವಿಶೇಷ ಗಮನ ಹರಿಸಬೇಕು. ನಮಾಜ್ ಗೆ ಹೋಗುವಾಗ ಮಕ್ಕಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಬಾರದು. ಹಿರಿಯ ವಯಸ್ಸಿನವರು ವಿಶೇಷ ಎಚ್ಚರವಹಿಸಬೇಕು. ಮುಸಾಫಹ(ಹಸ್ತಲಾಘವ ಅಥವಾ ಕೈಮಿಲಾಯಿಸುವುದು) ಮತ್ತು ಆಲಿಂಗನ ಸಲ್ಲದು, ಖುರ್ಬಾನಿ ಮತ್ತು ಪ್ರಾಣಿಬಲಿಯು ಬಹಳ ಮಹತ್ವದ ಆರಾಧನಾ ಕ್ರಮವಾಗಿದೆ ಮತ್ತು ಇಸ್ಲಾಮ್ ಧರ್ಮದ ಸಂಕೇತವಾಗಿದೆ.

 

ಖುರ್ಬಾನಿಗಾಗಿರುವ ಮೂರು ನಿರ್ದಿಷ್ಟ ದಿನಗಳಲ್ಲಿ (ಝಲ್ ಹಜ್ ತಿಂಗಳ 10,11 ಮತ್ತು 12) ಖುರ್ಬಾನಿಗಿಂತ ದೊಡ್ಡ ಸತ್ಕರ್ಮ ಬೇರಿಲ್ಲ. ಪ್ರಾಣಿಬಲಿ ನೀಡದೆ ಕೇವಲ ಅದರ ಮೊತ್ತವನ್ನು ದಾನ ಮಾಡುವುದು ಸರಿಯಲ್ಲ. ಹಣವು ಬಲಿದಾನಕ್ಕೆ ಪರ್ಯಾಯವಲ್ಲ. ಎಲ್ಲ ರೀತಿಯಲ್ಲಿ ಪ್ರಯತ್ನಿಸಿದ ಬಳಿಕವೂ ಪ್ರಾಣಿಬಲಿ ನೀಡಲು ಸಾಧ್ಯವಾಗದೆ ಇದ್ದರೆ ಮೂರು ನಿರ್ದಿಷ್ಟ ದಿನಗಳ ಬಳಿಕ ಪ್ರಾಣಿಯ ಬೆಲೆಯನ್ನು ಅಥವಾ ಪ್ರಾಣಿಯನ್ನು ದಾನ ಮಾಡಬಹುದು.

 

ಕರ್ನಾಟಕ ರಾಜ್ಯ ಸರ್ಕಾರವು ನಿಷೇಧಿಸಿರುವಂತಹ ಪ್ರಾಣಿಗಳನ್ನು(ಹಸು, ಒಂಟೆ ಇತ್ಯಾದಿ) ಬಲಿದಾನಕ್ಕೆ ಖಂಡಿತ ಬಳಸಬಾರದು. ಪ್ರಾಣಿಗಳನ್ನು ಬಲಿ ನೀಡುವ ವೇಳೆ ಗರಿಷ್ಠ ಶುಚಿತ್ವ ಪಾಲಿಸಬೇಕು. ಹಾಗೆಯೇ ಎಲ್ಲ ಬಗೆಯ ಮುಂಜಾಗೃತಾ ಕ್ರಮಗಳನ್ನು ಪಾಲಿಸಬೇಕು. ಬಲಿಪ್ರಾಣಿಯ ರಕ್ತ ಮತ್ತಿತರ ವ್ಯರ್ಥ ಭಾಗಗಳನ್ನು ಅಲ್ಲಲ್ಲಿ ಚೆಲ್ಲಿ ಮಾಲಿನ್ಯಕ್ಕೆ ಕಾರಣರಾಗಬಾರದು. ಎಲ್ಲ ಬಗೆಯ ತ್ಯಾಜ್ಯಗಳನ್ನು ಜವಾಬ್ದಾರಿಯುತವಾಗಿ ನಿಯಮಾನುಸಾರ ಸರ್ಕಾರವು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಹಾಕಬೇಕು. ಜನರು ನಡೆದಾಡುವ ಸ್ಥಳಗಳಲ್ಲಿ ಅಥವಾ ತೆರೆದ ಸ್ಥಳಗಳಲ್ಲಿ ಖುರ್ಬಾನಿ ಮಾಡಬಾರದು. ಬಲಿಪ್ರಾಣಿಯನ್ನು ಪ್ರದರ್ಶನಕ್ಕೆ ಇಡಬಾರದು. ಅವುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಬಾರದು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು