News Karnataka Kannada
Thursday, April 18 2024
Cricket
ಮೈಸೂರು

ನೀರಿನ ಯೋಜನೆ ಕಾಮಗಾರಿ ಸ್ಥಗಿತಕ್ಕಾಗಿ ಪ್ರತಿಭಟನೆ

Photo Credit :

ನೀರಿನ ಯೋಜನೆ ಕಾಮಗಾರಿ ಸ್ಥಗಿತಕ್ಕಾಗಿ ಪ್ರತಿಭಟನೆ

ಮದ್ದೂರು: ತಾಲೂಕಿನ ಕೊಪ್ಪ ಕೆರೆಯಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು  ಒತ್ತಾಯಿಸಿ ರೈತರು ಕೆರೆ ಬಳಿ ಬುಧವಾರ ಪ್ರತಿಭಟನೆ ಮಾಡಿದರು.

ಕೆರೆಯ ಸಮೀಪ ಆಗಮಿಸಿದ ರೈತ ಸಂಘದ ಮುಖಂಡರು ಕೆರೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ತೆಗೆದುಕೊಂಡು ಹೋದರೆ ಕೊಪ್ಪ ಅಚ್ಚುಕಟ್ಟು ಪ್ರದೇಶದ ರೈತರಿಗೆ ವ್ಯವಸಾಯ ಮಾಡಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಯೋಜನೆ ಕೈ ಬಿಡಬೇಕೆಂದು ಆಗ್ರಹ ಮಾಡಿದರು.

ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಕೆರೆಯಲ್ಲಿ ಕುಡಿಯುವ ನೀರಿನ ಯೋಜನೆ ಕೈಬಿಡಬೇಕು ಎಂಬ ವಿಚಾರವಾಗಿ ಕೊಪ್ಪದ ಸಂತೆ ಮೈದಾನದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಶಿಂಷಾ ಎಡ, ಬಲ ದಂಡೆಯ ರೈತರು ಹಾಗೂ ಕೊಪ್ಪ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಕರೆದು ಸಭೆಯಲ್ಲಿ ಹೋರಾಟ ಮಾಡುವ ಸಂಬಂಧ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ದೇಶಹಳ್ಳಿ ಮೋಹನ್‍ಕುಮಾರ್, ಹುರಗಲವಾಡಿ ಉಮೇಶ್, ರಾಮಯ್ಯ, ಮ.ನ.ಪ್ರಸನ್ನಕುಮಾರ್, ಚನ್ನಸಂದ್ರ ಲಕ್ಷ್ಮಣ್, ಗಿರೀಶ್, ಜಗದೀಶ್, ರಾಮಣ್ಣ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು