News Karnataka Kannada
Friday, April 19 2024
Cricket
ಮೈಸೂರು

ನಕಲಿ ಡಾಕ್ಟರೇಟ್‌ ಪದವಿ ಪ್ರಧಾನ ಸಮಾರಂಭಕ್ಕೆ ಪೊಲೀಸ್‌ ದಾಳಿ

Photo Credit :

ನಕಲಿ ಡಾಕ್ಟರೇಟ್‌ ಪದವಿ ಪ್ರಧಾನ ಸಮಾರಂಭಕ್ಕೆ ಪೊಲೀಸ್‌ ದಾಳಿ

ಮೈಸೂರು: ನಗರದಲ್ಲಿ ನಕಲಿ ವಿಶ್ವವಿದ್ಯಾಲಯ ಹೆಸರಿನಲ್ಲಿ ಡಾಕ್ಟರೇಟ್‌ ಪದವಿ ಪ್ರದಾನ ದಂಧೆ ನಡೆಯುತ್ತಿದೆ ಎಂಬ ಆರೋಪದ ಮೇರೆಗೆ ಇಂದು ಹುಣಸೂರು ರಸ್ತೆಯ ರುಚಿ ದಿ ಪ್ರಿನ್ಸ್‌ ಹೋಟೆಲ್‌ ನಲ್ಲಿ ನಡೆಯುತಿದ್ದ ಪದವಿ ಪ್ರದಾನ ಕಾರ್ಯಕ್ರಮದ ವೇಳೆ ಡಿಸಿಪಿ ಪ್ರಕಾಶ್‌ ಗೌಡ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಪೊಲೀಸರ ದಾಳಿ ವೇಳೆ ಕಾರ್ಯಕ್ರಮ ಆಯೋಜಕರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮೂರಕ್ಕೂ ಹೆಚ್ಚು ಆಯೋಜಕರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಮುಖ್ಯ ಅತಿಥಿಯಾಗಿ ನಕಲಿ ಕಾರ್ಯಕ್ರಮದಲ್ಲಿ ಹರಿಹರ ಶಾಸಕ ರಾಮಪ್ಪ ಭಾಗಿಯಾಗಿದ್ದರು.

ಇಂಟರ್‌ನ್ಯಾಷನಲ್‌ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹೆಸರಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಡಾಕ್ಟರೇಟ್ ಪದವಿ ನೀಡಲು ಕಾರ್ಯಕ್ರಮ ಆಯೋಜಕರು ಮುಂದಾಗಿದ್ದರು ಎನ್ನಲಾಗಿದೆ. ನಕಲಿ ಗೌರವ ಡಾಕ್ಟರೇಟ್‌ ಪದವಿ ನೀಡುತ್ತಿರುವ ಕುರಿತು ಹಲವಾರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತ್ತಾಯಿಸಿದ್ದರು. 

ಇಷ್ಟೇ ಅಲ್ಲದೆ ಹಣ ಪಡೆದು ಗೌವರ .ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಆರೋಪಿಸಿ ಮದ್ದೂರಿನ ಸಿ.ಎಸ್.ಸುರೇಶ್ ಎಂಬವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾವೆ ದಾಖಲಿಸಿದ್ದರು. ಈ ಕುರಿತು ಕೇಂದ್ರಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ವಿವಿ ಅನುದಾನ ಆಯೋಗಕ್ಕೆ ನೋಟೀಸ್ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಕಳೆದ ವಾರ ಮದರ್‌ ಥೆರೇಸ ಹೆಸರಿನ ಯೂನಿವರ್ಸಿಟಿಯೊಂದೂ ಕೂಡ ಬೆಂಗಳೂರಿನಲ್ಲಿ ಇದೇ ರೀತಿಯ ಕಾರ್ಯಕ್ರಮ ಅಯೋಜಿಸಿ ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿತ್ತು.

ಇಂದು ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯ ಗಳಿಂದ ಗೌ.ಡಾ. ಪದವಿ ಆಕಾಂಕ್ಷಿಗಳು ಬಂದಿದ್ದು, ಪ್ರತಿಯೊಬ್ಬರಿಂದ 50 ಸಾವಿರದಿಂದ 1ಲಕ್ಷ ರೂ.ಪಡೆದು ಪದವಿ ನೀಡಲಾಗುತ್ತಿತ್ತು. ಆಕಾಂಕ್ಷಿಗಳಲ್ಲಿ ರಾಜಕಾರಣಿಗಳು , ಪತ್ರಕರ್ತರು, ಸಮಾಜ ಸೇವಕರು, ಮಠಾಧೀಶರುಗಳೂ ಇದ್ದರು. ಹಣ ಪಡೆದು ಗೌರವ ಡಾಕ್ಟರೇಟ್ ನೀಡುವ ಪದವಿ ಪ್ರದಾನ ಕಾರ್ಯಕ್ರಮ ರದ್ದಾಗಿದ್ದು, ಹಣ ನೀಡಿ ಪದವಿ ಪಡೆಯಲು ಬಂದಿದ್ದ 120 ಕ್ಕೂ ಹೆಚ್ಚು ಮಂದಿಗೆ ನಿರಾಸೆಯಾಗಿದೆ.

ಕಾರ್ಯಕ್ರಮದ ಪ್ರಶಸ್ತಿ ಪತ್ರ, ಫಲಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು