News Karnataka Kannada
Saturday, April 20 2024
Cricket
ಮೈಸೂರು

ದಸರಾ ಗಜಪಡೆ ಜತೆ ಈ ಬಾರಿ ಮಾವುತರ ಕುಟುಂಬ ಬರುವಂತಿಲ್ಲ

Photo Credit :

ದಸರಾ ಗಜಪಡೆ ಜತೆ ಈ ಬಾರಿ ಮಾವುತರ ಕುಟುಂಬ ಬರುವಂತಿಲ್ಲ

ಮೈಸೂರು: ಕೊರೋನಾ ಸೋಂಕು ಈ ವರ್ಷ ಎಲ್ಲರ ಸಂತೋಷ ಸಂಭ್ರಮವನ್ನು ಕಸಿದುಕೊಂಡಿದೆ. ಪ್ರತೀ ವರ್ಷವೂ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಮಹೋತ್ಸವವನ್ನು ಕೂಡ ಸರ್ಕಾರ ಈ ಬಾರಿ ಸರಳವಾಗಿ ನಡೆಸಲು ನಿರ್ಧರಿಸಿದ್ದು, ಅದರಂತೆ ಸೂಚನೆಗಳನ್ನು ನೀಡಿದೆ.

ಪ್ರತೀ ಬಾರಿಯೂ ಮೈಸೂರಿಗೆ ಬಂದು ಸಂಭ್ರಮಿಸುತ್ತಿದ್ದ 15 ಆನೆಗಳ ಮಾವುತ ಪತ್ನಿಯರ ಮತ್ತು ಮಕ್ಕಳ ಕನಸನ್ನೂ ಚೂರು ಮಾಡಿದೆ. ಕಾರಣವಿಷ್ಟೇ ಈ ಬಾರಿ ಸರ್ಕಾರ ಉತ್ಸವಕ್ಕೆ ಕೇವಲ 5 ಆನೆಗಳನ್ನು ಮಾತ್ರ ನಿಗದಿಪಡಿಸಿದೆ. ಮಾವುತ ಮತ್ತು ಕಾವಾಡಿಗಳಿಗೆ ಮಾತ್ರ ಆಹ್ವಾನ ನೀಡಿದ್ದು ಅವರ ಕುಟುಂಬದವರಿಗೆ ನಿರ್ಬಂಧ ವಿಧಿಸಿದೆ.

ದಸರಾ ಬಂತೆಂದರೆ ಮಾವುತರು ಮತ್ತು ಕಾವಾಡಿಗಳ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡುತ್ತಿತ್ತು. ಅವರಿಗಾಗಿಯೇ ಅರಮನೆಯ ಬಳಿ ಟೆಂಟ್ ಶಾಲೆ, ಟೆಂಟ್ ಗ್ರಂಥಾಲಯಗಳೆಲ್ಲ ರೂಪುಗೊಳ್ಳುತ್ತಿತ್ತು. ಮಕ್ಕಳು ಸಂತಸದಿಂದ ಅಕ್ಷರವನ್ನು ಕಲಿತು ಜ್ಞಾನ ಬೆಳೆಸಿಕೊಳ್ಳಲು ಮುಂದಾಗುತ್ತಿದ್ದರು. ಬಣ್ಣದ ಬಟ್ಟೆಗಳನ್ನು ತೊಟ್ಟು ನಲಿದಾಡುತ್ತಿದ್ದರು. ದಸರಾ ಪ್ರಯುಕ್ತ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಈ ಕುಟುಂಬಗಳಿಗೆ ಮೂರು ಹೊತ್ತೂ ಉತ್ತಮ ಊಟ ನೀಡಲಾಗುತಿತ್ತು.

ದಸರಾ ಆಚರಣೆಗೆ ಎರಡು ತಿಂಗಳು ಮೊದಲೇ ಬಂದು ಅರಮನೆಯ ಅಂಗಳದಲ್ಲಿ ಬೀಡುಬಿಡುತ್ತಿದ್ದರು. ಅವರನ್ನು ಪ್ರತ್ಯೇಕ ವಾಹನದಲ್ಲಿ ಕರೆತಂದು ಅವರಿಗಾಗಿಯೇ ಟೆಂಟ್ ನಿರ್ಮಿಸಿ ದಸರಾ ಮುಗಿಯುವವರೆಗೂ ಮಾವುತರು ಮತ್ತು ಕಾವಾಡಿಗಳ ಕುಟುಂಬವನ್ನು ದಸರಾ ಮಹೋತ್ಸವ ಸಮಿತಿ , ಅರಣ್ಯ ಇಲಾಖೆ ಚೆನ್ನಾಗಿಯೇ ನೋಡಿಕೊಳ್ಳುತ್ತಿತ್ತು. ಎರಡು ತಿಂಗಳ ಕಾಲ ಅರಮನೆ ನಗರಿಯಲ್ಲಿದ್ದು ದಸರಾ ಸಂಭ್ರಮವನ್ನು ಕಣ್ತುಂಬಿಕೊಂಡು ಮತ್ತೆ ಭಾರವಾದ ಮನಸ್ಸುಗಳನ್ನು ಹೊತ್ತು ಕಾಡಿನ ಕಡೆ ಹೆಜ್ಜೆ ಹಾಕುತ್ತಿದ್ದರು. ಆದರೆ ಈ ಬಾರಿ ಸಂಭ್ರಮವನ್ನು ಅವರು ಕಣ್ತುಂಬಿಕೊಳ್ಳಲಾರರು. ಕೊರೋನಾ ಕಾರಣದಿಂದಾಗಿ ಸರ್ಕಾರ ಸರಳ ದಸರಾ ಆಚರಿಸುತ್ತಿದೆ. ಕೇವಲ ಐದು ಆನೆಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಅರಮನೆ ಆವರಣದಲ್ಲಿ ಮಾತ್ರವೇ ತಾಲೀಮು, ಜಂಬೂ ಸವಾರಿ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಡಿಸಿಎಫ್ ಅಲೆಕ್ಸಾಂಡರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಆನೆಗಳೊಂದಿಗೆ ಹೆಚ್ಚು ಸಂಪರ್ಕ ಇಲ್ಲದಂತೆ ಮಾಡಲು ಮಾವುತರು, ಕಾವಾಡಿಗಳ ಕುಟುಂಬದವರು ಬಾರದಂತೆ ಸೂಚನೆ ನೀಡಲಾಗಿದೆ.

ಮಾವುತರು, ಕಾವಾಡಿಗಳು ಸಾರ್ವಜನಿಕರ ಸಂಪರ್ಕದಲ್ಲಿರದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ. ಕೊರೋನಾ ಕಾರಣದಿಂದಾಗಿ ದಸರಾ ಮಹೋತ್ಸವದ ರೂಪುರೇಷೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದ್ದು, ಅವರು ಇಲ್ಲಿಂದ ಕಾಡಿನಲ್ಲಿರುವ ತಮ್ಮ ಕುಟುಂಬಕ್ಕೆ ಸೋಂಕನ್ನು ಕೊಂಡೊಯ್ಯಬಾರದೆಂಬ ಕಾರಣಕ್ಕಾಗಿ ಮಾವುತರು, ಕಾವಾಡಿಗಳ ಕುಟುಂಬದವರಿಗೆ ನಿರ್ಬಂಧ ವಿಧಿಸಲಾಗಿದೆ ಎಂದಿದ್ದಾರೆ. ಕೊರೋನವು ಮಾವುತ ಕುಟುಂಬಗಳನ್ನು ನಿರಾಶೆಯ ಮಡಿಲಿಗೆ ನೂಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು