News Karnataka Kannada
Thursday, April 25 2024
Cricket
ಮೈಸೂರು

ದಸರಾಗೆ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭ

Photo Credit :

ದಸರಾಗೆ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2020ರ ಹಿನ್ನೆಲೆಯಲ್ಲಿ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭವಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ಆವರಣದಲ್ಲೇ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಇಂದಿನಿಂದ ಭಾರ ಹೊರುವ ತಾಲೀಮು ಆರಂಭವಾಗಿದ್ದು, ಅರಣ್ಯ ಇಲಾಖೆ ಕ್ಯಾಪ್ಟನ್ ಅಭಿಮನ್ಯುವಿಗೆ ಭಾರ ಹೊರಿಸಿದೆ. ಸುಮಾರು 350ಕೆ.ಜಿ. ತೂಕದ ಮರಳು ಮೂಟೆ ಹೊತ್ತು ಅಭಿಮನ್ಯು ಮುಂದೆ ಸಾಗಿದ್ದು, ಹಿಂದಿನಿಂದ ಉಳಿದ ಆನೆಗಳು ಸಾಗಿ ಸಾಥ್ ನೀಡಿವೆ. ದಿನೇ ದಿನೇ ಭಾರದ ಪ್ರಮಾಣ ಹೆಚ್ಚಾಗಲಿದ್ದು, ಅಂಬಾರಿ ಹೊರುವ ಆನೆಗೆ ತಾಲೀಮು ನೀಡುವುದು ಅಗತ್ಯವಾಗಿದೆ. ಈ ಕಾರಣಕ್ಕಾಗಿ ಇಂದಿನಿಂದ ಭಾರ ಹೊರುವ ತಾಲೀಮು ಪ್ರಾರಂಭವಾಗಿದೆ.

ಅಂಬಾರಿ ಅಂದಾಜು 750 ಕೆ.ಜಿ. ತೂಕ ಇದೆ. ಅಷ್ಟು ಭಾರವನ್ನು ಹೊರುವುದಕ್ಕೆ ಆನೆಯನ್ನು ಸಿದ್ಧಗೊಳಿಸಬೇಕಿದೆ. ಆ ಕಾರಣಕ್ಕಾಗಿ 350ರಿಂದ ಹಂತ ಹಂತವಾಗಿ ಭಾರ ಹೆಚ್ಚಿಸಿಕೊಂಡು 800ಕೆ.ಜಿ. ತೂಕದ ವರೆಗೂ ಸಾಮರ್ಥ್ಯ ವೃದ್ಧಿಸಲಾಗುತ್ತದೆ. ಈ ಬಾರಿ ಜಂಬೂ ಸವಾರಿ ಅರಮನೆಯ ಆವರಣದೊಳಗಡೆಯೇ ಸೀಮಿತವಾದರೂ ಕೂಡ ಅಂಬಾರಿ ಹೊರಲು ಅಭಿಮನ್ಯುವಿಗೆ ಎಲ್ಲ ರೀತಿಯಿಂದಲೂ ಸಿದ್ಧಗೊಳಿಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು