News Karnataka Kannada
Tuesday, April 16 2024
Cricket
ಮೈಸೂರು

ಗ್ರಾಮಕ್ಕೆ ಹೊರಗಿನವರಿಗೆ ನೋ ಎಂಟ್ರಿ – ಸೆಲ್ಫ್ ಲಾಕ್ ಮಾಡಿಕೊಂಡ ಗ್ರಾಮಸ್ಥರು

Photo Credit :

 ಗ್ರಾಮಕ್ಕೆ ಹೊರಗಿನವರಿಗೆ ನೋ ಎಂಟ್ರಿ – ಸೆಲ್ಫ್ ಲಾಕ್ ಮಾಡಿಕೊಂಡ ಗ್ರಾಮಸ್ಥರು

ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ಕೊಳ್ಳೇಗಾಲ ತಾಲೂಕು ಸತ್ತೆಗಾಲ ಗ್ರಾಮಸ್ಥರು ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಕಟ್ಟಿ ಹಾಕಲು ಸಭೆ ನಡೆಸಿದ ಡಾ.ಬಿ.ಆರ್ ಅಂಬೇಡ್ಕರ್ ಬಡಾವಣೆಯ ನಿವಾಸಿಗಳು ತುರ್ತು ಸಂದರ್ಭ ಹೊರತಾಗಿ ಗ್ರಾಮದಿಂದ ಯಾರೂ ಹೊರ ಹೋಗುವಂತಿಲ್ಲ ಹಾಗೆಯೇ ಹೊರಗಿನಿಂದಲು ಗ್ರಾಮಕ್ಕೆ ಯಾರು ಬರುವಂತಿಲ್ಲ ಎಂದು ಸ್ವಯಂ ನಿರ್ಬಂದ ವಿಧಿಸಿಕೊಂಡಿದ್ದಾರೆ.
ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ಬೇರೆ ಕಡೆ ಇರುವರು ಸದ್ಯಕ್ಕೆ ಗ್ರಾಮಕ್ಕೆ ಬರಬಾರದು ಎಂದು ಸೂಚನೆ ನೀಡಿದ್ದು, ಸಾಲ ವಸೂಲಾತಿಗೆ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಕೊರೊನಾ ಕಡಿಮೆ ಆಗುವವರೆಗು ಬರಬಾರದು. ಬಡಾವಣೆಯ ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು, ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡರೆ ತಕ್ಷಣ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಎಲ್ಲಿಯು ಗುಂಪು ಸೇರದೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂದು ನ್ಯಾಯಪಂಚಾಯ್ತಿ ಸಭೆ ನಡೆಸಿ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದು ಈ ಬಗ್ಗೆ ಗ್ರಾಮದಲ್ಲಿ ಡಂಗುರ ಸಾರಿ, ಧ್ವನಿವರ್ಧಕ ಮೂಲಕವೂ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು