News Karnataka Kannada
Friday, April 19 2024
Cricket
ಮೈಸೂರು

ಗಿಡ ನೆಟ್ಟು ಡಾ.ಸುಧಾಮೂರ್ತಿರವರ ಹುಟ್ಟುಹಬ್ಬ ಆಚರಣೆ

Photo Credit :

ಗಿಡ ನೆಟ್ಟು ಡಾ.ಸುಧಾಮೂರ್ತಿರವರ ಹುಟ್ಟುಹಬ್ಬ ಆಚರಣೆ

ಮೈಸೂರು: ಬೇರು ಫೌಂಡೇಷನ್ ವತಿಯಿಂದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ.ಸುಧಾಮೂರ್ತಿ ಅವರ ಜನ್ಮದಿನವನ್ನು ಚಾಮುಂಡಿಪುರಂ ವೃತ್ತದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಆಯುರ್ವೇದಿಕ್ ವೈದ್ಯರಾದ ಡಾ.ಚಂದ್ರಶೇಖರ್ ಅವರು, ಎಷ್ಟೇ ಶ್ರೀಮಂತಿಕೆಯಿದ್ದರೂ ಸರಳವಾಗಿ ಜೀವನವನ್ನು ಹೇಗೆ ನಡೆಸಬೇಕೆಂದು ತೋರಿಸಿಕೊಟ್ಟಂತಹ ಡಾ.ಸುಧಾ  ಮೂರ್ತಿ ಅವರು ಕೊರೋನಾ ಮಹಾಮಾರಿ ಕಾಲಿಟ್ಟಂತೆ ಸಂದರ್ಭದಲ್ಲಿ  ಸಾವಿರಾರು ಜನರಿಗೆ ಆಶ್ರಯ ನೀಡಿದಂತಹ ಮಹಾತಾಯಿ. ಕೊಡಗಿನಲ್ಲಿ ಮಹಾ ಮಳೆಯಿಂದ ತತ್ತರಿಸಿದ ಕೊಡಗಿನ ಜನರಿಗೆ ಆಸರೆಯಾಗಿ  ನಿಂತಿದ್ದರು ಎಂದು ಹೇಳಿದರು.

ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಪಾರ್ಥಸಾರಥಿ ಅವರು ಮಾತನಾಡಿ, ಉದ್ಯಮದಲ್ಲೂ ಮತ್ತು ಸಾರ್ವಜನಿಕ ಸೇವಾ ಜೀವನದಲ್ಲೂ ಸಹ ತಮ್ಮದೇ ಆದಂಥ ಛಾಪನ್ನು ಮೂಡಿಸಿ ಭಾರತೀಯತೆಗೆ ನಿರಂತರವಾಗಿ ಸೇವೆ ಮಾಡುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಸ್ವಚ್ಛಭಾರತ, ವಿಕಲಚೇತನ ಮಕ್ಕಳ ಕಲ್ಯಾಣ, ಅನಾಥಾಶ್ರಮಗಳಿಗೆ ದೇಣಿಗೆ, ಮಹಿಳಾ ಅಬಲೆಯರಿಗೆ ವೃತ್ತಿಪರ ಕೌಶಲ್ಯ ತರಬೇತಿ, ಯೋಧರ ನಿಧಿಗೆ ಸಹಾಯ, ಕೆರೆಗಳ ಅಭಿವೃದ್ಧಿ, ಸರ್ಕಾರಿ ಪರಿಹಾರ ನಿಧಿಗೆ ದೇಣಿಗೆ, ನೆರೆ ಸಂತ್ರಸ್ತರಿಗೆ ಅಪಾರವಾದ ಸಹಾಯ ಹಸ್ತ ಹೀಗೆ ಅವರು ಮಾಡುತ್ತಿರುವ ಕಾರ್ಯಗಳು ಪ್ರಾತಃ ಸ್ಮರಣೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಬೇರು ಫೌಂಡೇಶನ್ ಅಧ್ಯಕ್ಷಮಧು ಎನ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಉದ್ಯಮಿ ಅಪೂರ್ವ ಸುರೇಶ್,  ಪ್ರಧಾನ ಕಾರ್ಯದರ್ಶಿ  ಜೈ ಅರ್ಜುನ್, ಜಯಸಿಂಹ  ಶ್ರೀಧರ್, ವಿನಯ್ ಕಣಗಾಲ್,  ಶ್ರೀನಿವಾಸ್ ಅರಸ್, ಸುಚೀಂದ್ರ, ಚಕ್ರಪಾಣಿ ಮೊದಲಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು