News Karnataka Kannada
Monday, April 22 2024
Cricket
ಮೈಸೂರು

‘ಕೋವಿಡ್ ಮಹಿಳಾ ಸ್ನೇಹಿತೆ’ ಮೂಲಕ ಸ್ತ್ರೀಯರಿಗೆ ನೆರವು

Photo Credit :

'ಕೋವಿಡ್ ಮಹಿಳಾ ಸ್ನೇಹಿತೆ' ಮೂಲಕ ಸ್ತ್ರೀಯರಿಗೆ ನೆರವು

ಮೈಸೂರು: ಕೋವಿಡ್‌ ಮಹಿಳಾ ಸ್ನೇಹಿತೆ ಎಂಬ ಹೆಸರಿನಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕವು ಆರಂಭಿಸಿರುವು ಕೋವಿಡ್‌ ಸಹಾಯವಾಣಿ ಕೇಂದ್ರವನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಅವರು ಕಾಂಗ್ರೆಸ್‌ ಭವನದಲ್ಲಿ ಚಾಲನೆ ನೀಡಿದರು.

ಈ ವೇಳೆ ಡಾ. ಪುಷ್ಪಾ ಅಮರನಾಥ್‌ ಮಾತನಾಡಿ, ಮಹಿಳೆಯರು ಕೆಲ ಸಮಸ್ಯೆಗಳನ್ನ ಹೇಳಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಮಹಿಳೆಯರಿಗಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕದಿಂದ ಸಹಾಯವಾಣಿ ಕೇಂದ್ರ ಪ್ರಾರಂಭಿಸಿದ್ದು, ಈ ಕಾಂಗ್ರೆಸ್‌ ಮಹಿಳಾ ಪಡೆ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡಲಿದೆ ಎಂದರು.

ಸಂಕಷ್ಟದಲ್ಲಿರುವ ಮಹಿಳೆಯರು ನಮ್ಮ ಸಹಾಯವಾಣಿಗೆ ಕರೆ ಮಾಡಿದರೆ, ಮಹಿಳಾ ಐಸೋಲೇಷನ್‌ ಕಿಟ್‌ಗಳನ್ನು ನಮ್ಮ ಕಾರ್ಯಕರ್ತರಿಂದ ಮನೆಗಳಿಗೆ ನೀಡಲಾಗುತ್ತದೆ.

ವೈದ್ಯರು ಸೂಚಿಸಿರುವ 5 ರೀತಿಯ ಔಷಧಿ, ಮಾಸ್ಕ್‌, ಸೋಪ್‌ ಹಾಗೂ 3 ಸ್ಯಾನಿಟರಿ ಪ್ಯಾಡ್‌ಗಳು ಸೇರಿದಂತೆ ಹಲವು ವಸ್ತುಗಳು ಇರಲಿದೆ. ಸದ್ಯ ಮೈಸೂರಿನಲ್ಲಿ ಸಹಾಯವಾಣಿ ಕೇಂದ್ರ ಪ್ರಾರಂಭಿಸಿದ್ದು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೀಡಲು ಒಂದು ಸಾವಿರ ಕಿಟ್‌ ತಯಾರಿಸಿದ್ದೇವೆ. ಮುಂದಿನ ದಿನಗಳಲ್ಲಿ ಮೂರನೇ ಅಲೆ ಬರುವುದರಿಂದ ಮಕ್ಕಳ ಆರೋಗ್ಯಕ್ಕೆ ಅಗತ್ಯವಿರುವ ವಸ್ತುಗಳನ್ನ ಸಿದ್ಧಪಡಿಸಲಾಗುವುದು ಎಂದು ಅವರು ವಿವರಿಸಿದರು.

ಗ್ರಾಮೀಣ ಭಾಗದ ಮಹಿಳೆಯರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವುದು ತಿಳಿದಿರುವುದಿಲ್ಲ, ಅಂತಹ ಮಹಿಳೆಯರು ಕೋವಿಡ್‌ ಮಹಿಳಾ ಸ್ನೇಹಿತೆ ದೂರವಾಣಿಗೆ ಕರೆ ಮಾಡಿದರೆ, ನಮ್ಮ ಸ್ವಯಂ ಸೇವಕರು ಆ ಮಹಿಳೆಗೆ ಲಸಿಕೆ ನೋಂದಣಿ ಮಾಡಿಸಲಿದ್ದಾರೆ ಎಂದರು.

ಕೋವಿಡ್‌ ಮಹಿಳಾ ಸ್ನೇಹಿತೆ- ಕೋವಿಡ್‌ ಸಹಾಯವಾಣಿ ಕೇಂದ್ರದ ಸಹಾಯ ಪಡೆಯಲಿಚ್ಚಿಸುವ ಮಹಿಳೆಯರು ಮೊ. 94498 41024, 93433 05375, 97402 95648 ಸಂಪರ್ಕಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು