News Karnataka Kannada
Tuesday, April 16 2024
Cricket
ಮೈಸೂರು

ಕೋವಿಡ್ ನಡುವೆ ನಿಲ್ಲದ ರಂಗಾಯಣದ ಚಟುವಟಿಕೆ

Photo Credit :

ಕೋವಿಡ್ ನಡುವೆ ನಿಲ್ಲದ ರಂಗಾಯಣದ ಚಟುವಟಿಕೆ

ಮೈಸೂರು: ಕೊರೊನಾ ಕಾರಣದಿಂದ ರಂಗಭೂಮಿ ದೊಡ್ಡ ಸಂಕಷ್ಟವನ್ನು ಅನುಭವಿಸಿದ್ದರೂ ಕೂಡ  ಮೈಸೂರು ರಂಗಾಯಣ ಕೊರೊನಾದ ವಿರುದ್ಧ ಸೆಣಸುತ್ತಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವುದಾಗಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

ಈ ಕುರಿತಂತೆ ರಂಗಾಯಣ ನಡೆಸಿದ ಕಾರ್ಯಕ್ರಮಗಳ ದೊಡ್ಡಪಟ್ಟಿಯನ್ನು ಅವರು ತೆರದಿಟ್ಟಿದ್ದಾರೆ. ಕೋವಿಡ್ ಆರಂಭದಿಂದ ಇಲ್ಲಿವರೆಗೂ ಹಲವು ಸಂಕಷ್ಟಗಳು ಎದುರಾಗಿದ್ದು ಅದರ ನಡುವೆ ಏನೆಲ್ಲ ಕಾರ್ಯಕ್ರಮಗಳನ್ನು ನಡೆಸಿದ್ದೇವೆ ಎಂಬುದನ್ನು ಅವರು ತಿಳಿಸಿದ್ದು ಅದರಂತೆ ದೇಶದಲ್ಲಿ ಆಗ ತಾನೇ ಕೋವಿಡ್-19 ಪ್ರವೇಶ ಪಡೆದಿದ್ದರೂ, ಗಾಂಧಿಪಥ ಶೀರ್ಷಿಕೆಯಲ್ಲಿ `ಬಹುರೂಪಿ-2020′ ರಾಷ್ಟ್ರೀಯ ನಾಟಕೋತ್ಸವವು 2020 ಫೆಬ್ರವರಿ 14 ರಿಂದ 19ರವರೆಗೆ ಅತ್ಯಂತ ಯಶಸ್ವಿಯಾಗಿ ನಡೆದಿದೆ.    ಬಹುರೂಪಿಯ ನಂತರ ಮಣಿಪುರ ಮತ್ತು ಸುಳ್ಯದಲ್ಲಿ `ಶೂದ್ರ ತಪಸ್ವಿ’ ನಾಟಕದ ಪ್ರದರ್ಶನ ಅಲ್ಲದೆ, ಸಂಚಾರಿ ರಂಗಘಟಕದ ನಾಟಕಗಳು ಮಾರ್ಚ್ 15ರವರೆಗೆ ನಡೆದಿರುವುದಾಗಿ ಹೇಳಿದ್ದಾರೆ.

ಮಾರ್ಚ್ 15 ರಿಂದ ಮೇ 17 ರವರೆಗೆ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಮೇ. 18 ರಿಂದ ರಂಗಾಯಣದಲ್ಲಿ ದಾಸ್ತಾನು ಇರುವ ರಂಗ ಪರಿಕರಗಳು, ಸಲಕರಣೆಗಳು, ರಂಗಸಜ್ಜಿಕೆ, ವಿದ್ಯುತ್ ಮತ್ತು ಧ್ವನಿ ಉಪಕರಣಗಳು, ಗ್ರಂಥಾಲಯ, ವಸ್ತ್ರಗಳು ಇತ್ಯಾದಿಗಳನ್ನು ರಂಗಾಯಣದ ಹಿರಿಯ ಕಲಾವಿದರೇ ಜವಾಬ್ದಾರಿ ಹೊತ್ತು ಸಮಿತಿಗಳನ್ನು ರಚಿಸಿ, ಜೂನ್ 4 ರವರೆಗೆ ಕ್ರಮಬದ್ದವಾಗಿ ಜೋಡಿಸುವ ಕಾರ್ಯವನ್ನು ಮಾಡಲಾಗಿದೆ. ರಂಗಾಯಣ ಮತ್ತು ಕಲಾಮಂದಿರದಲ್ಲಿ ಬಿದ್ದಿದ್ದ ಅನುಪಯುಕ್ತ ವಸ್ತುಗಳಿಂದಲೇ ಸುಮಾರು ರೂ.4. ಲಕ್ಷ ವೆಚ್ಚ ತಗಲುವ ರಂಗಗೋದಾಮು ಒಂದನ್ನು ಕೇವಲ ರೂ.1.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಸರ್ಕಾರ ಲಾಕ್‍ಡೌನ್ ತೆರವುಗೊಳಿಸುತ್ತಿದ್ದಂತೆ ಜೂ.5ರಂದು ವಿಶ್ವ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಿ, ಪರಿಸರ ಗೀತೆ ಜೊತೆಗೆ ರಂಗಾಯಣದ ಆವರಣದಲ್ಲಿ ಸುಮಾರು 500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಇದೀಗ ಈ ಗಿಡಗಳು ಚಿಗುರತೊಡಗಿ `ರಂಗಹೊನ್ನಾರಿ’ಗೆ ಒಂದು ಹೊಸ ಅರ್ಥವನ್ನು ಕೊಟ್ಟಿದೆ.

ಇನ್ನು ಕೋವಿಡ್-19 ರ ವಿರುದ್ಧ ಜಾಗೃತಿ ಮೂಡಿಸಲು ವಿನ್ಯಾಸಕಾರ  ಹೆಚ್.ಕೆ. ದ್ವಾರಕಾನಾಥ್ ಅವರು ರೂಪಿಸಿದ 50 ಅಡಿ ಉದ್ದದ ಭಿತ್ತಿಚಿತ್ರ ಕಾರ್ಯಕ್ರಮ `ಸಂಭವಾಮಿ ಯುಗೇ ಯುಗೇ’ ಹೆಸರಿನಲ್ಲಿ ನಡೆಸಿದ್ದರಲ್ಲದೆ, ಕೊರೊನಾ ವಾರಿಯರ್ಸ್ ರನ್ನು ಸನ್ಮಾನಿಸಲಾಗಿದೆ.

ಪ್ರಯೋಗಶೀಲ ನಾಟಕ `ಪರ್ವ’ ಪ್ರದರ್ಶನಕ್ಕೆ ಸಿದ್ದವಾಗಬೇಕಿದ್ದು, ಇದಕ್ಕೆ ಸಿದ್ಧತೆಗಳು 2020 ಜೂನ್ 20 ರಿಂದ ಆರಂಭಗೊಂಡಿದೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ನಂತರ ‘ಬಹುರೂಪಕಗಳ ಬಹುರೂಪಿ’ ಎಂಬ 30 ನಿಮಿಷದ ಸಾಕ್ಷ್ಯಚಿತ್ರವನ್ನು ರೂ.1. ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ. 26 ವರ್ಷಗಳ ಹಿಂದೆ ರಂಗರೂಪಕ್ಕಳವಡಿಸಿ, ರಾಜ್ಯದಾದ್ಯಂತ ಮನೆಮಾತಾಗಿದ್ದ ದೇವನೂರು ಮಹದೇವರ `ಕುಸುಮಬಾಲೆ’ ಕಾದಂಬರಿಯ ರಂಗರೂಪವನ್ನು ಇದೀಗ ಕೋವಿಡ್ ನಿಯಮಗಳಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂಪೂರ್ಣವಾಗಿ ವಾಚಿಕ ಅಭಿನಯದಲ್ಲಿ ಚಿತ್ರೀಕರಿಸಿಕೊಂಡು ಹಾಗೂ ರಂಗಾಯಣದ ಆರಂಭದ ದಿನಗಳಲ್ಲಿ ಪ್ರದರ್ಶನಗೊಂಡ ಕಿಂದರಿಜೋಗಿ ನಾಟಕದ ವಾಚಿಕಾಭಿನಯ ಮತ್ತು ಹಾಡುಗಳನ್ನು ಚಿತ್ರೀಕರಿಸಿ ಯೂಟ್ಯೂಬ್ ಮತ್ತು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗಿದೆ.

ಇದಲ್ಲದೆ ರಂಗಭೀಷ್ಮ ಬಿ.ವಿ. ಕಾರಂತರ ಜನ್ಮದಿನದಂದು ಅವರು ರಂಗಾಯಣದ ನಾಟಕಗಳಿಗೆ ಅಳವಡಿಸಿರುವ ಹಾಡುಗಳನ್ನು ದಾಖಲೀಕರಣದ ಕಾರಣಕ್ಕಾಗಿ ಚಿತ್ರೀಕರಿಸಲಾಗಿದೆ ಮತ್ತು ಇದನ್ನು ಯೂಟ್ಯೂಬ್ ಮತ್ತು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗಿದೆ.

ಬಿ.ವಿ. ಕಾರಂತರ ಹೆಸರಿನಲ್ಲಿ ರಂಗಾಯಣದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹೆಸರಿನಲ್ಲಿರುವ ಜಾಗದಲ್ಲಿ `ಬಿ.ವಿ. ಕಾರಂತ ರಂಗಸಮುಚ್ಛಯ’  ಎಂಬ ಕಟ್ಟಡವನ್ನು ಸುಮಾರು ಅಂದಾಜು ರೂ.5.00 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ.

ಹವ್ಯಾಸಿ ಕಲಾವಿದರನ್ನು ಪ್ರೋತ್ಸಾಹಿಸÀುವ ಮತ್ತು ರಂಗಶಿಕ್ಷಣ ಕೊಡುವ ದೃಷ್ಟಿಯಿಂದ 2020-21ನೇ ಸಾಲಿಗೆ ನಾಡಿನ ವಿಶೇಷವಾಗಿ ಮೈಸೂರಿನ ಖ್ಯಾತ ವೃತ್ತಿರಂಗಭೂಮಿಯ ನಟ ಸುಬ್ಬಯ್ಯನಾಯ್ಡು ಅವರ ಹೆಸರಿನಲ್ಲಿ ಅಲ್ಪಾವಧಿಯ ಅಭಿನಯ ಕೇಂದ್ರೀಕೃತ ರಂಗ ತರಬೇತಿಯನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು