News Karnataka Kannada
Saturday, April 13 2024
Cricket
ಮೈಸೂರು

ಕೊರೋನಾ ನಡುವೆ ದಸರಾ ಆಚರಣೆಗೆ ಭಾರೀ ವಿರೋಧ

Photo Credit :

ಕೊರೋನಾ ನಡುವೆ ದಸರಾ ಆಚರಣೆಗೆ ಭಾರೀ ವಿರೋಧ

ಮೈಸೂರು: ಮೈಸೂರಿನಲ್ಲಿ ದಿನದಿಂದ ದಿನಕ್ಕೆ  ಕೊರೋನಾ ಸೋಂಕು ಹೆಚ್ಚುತ್ತಿದ್ದು, ಇದರ ನಡುವೆ ದಸರಾ ಆಚರಣೆ ಮಾಡುತ್ತಿರುವುದಕ್ಕೆ ವಿರೋಧಗಳು ಕೇಳಿ ಬರುತ್ತಿವೆ. ದಸರಾ ಜಂಬೂಸವಾರಿಯನ್ನು ಅರಮನೆ ಆವರಣದಲ್ಲಿ ನಡೆಸಲಾಗುತ್ತಿದ್ದು ಸುಮಾರು ಎರಡು ಸಾವಿರ ಜನರಿಗೆ ಅವಕಾಶ ನೀಡುವುದಾಗಿ ಸರ್ಕಾರ ಹೇಳಿದ್ದು ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ದಸರಾ ಆಚರಣೆ  ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಯಾವುದೇ ಕ್ಲಿಯರೆನ್ಸ್ ತೆಗೆದುಕೊಳ್ಳದೇ ದಸರಾ ಸ್ಟಾರ್ಟ್ ಆಗಿಬಿಟ್ಟಿದೆ. ಜನಧ್ವನಿಯನ್ನು ಧಿಕ್ಕರಿಸಿ ಮಾಡಿದರೆ ಅಪಾಯವಾಗಲಿದೆ. ವಿಶ್ವವಿಖ್ಯಾತ ದಸರಾಕ್ಕೆ ಕಳಂಕ ಜೊತೆಗೆ ಮೈಸೂರಿಗೆ ಕಳಂಕ ಬರುತ್ತೆ, ದಸರಾ ಮಾಡಲೇಬೇಕು ತಾಯಿ ಚಾಮುಂಡೇಶ್ವರಿಗೆ ಪೂಜೆ ಆಗತ್ತೆ. ಆದರೆ ದೀಪ ಹಾಕಿದರೆ  ಕಷ್ಟ ಆಗುತ್ತೆ ಎಲ್ಲರೂ ಆಚೆ ಬರುತ್ತಾರೆ ಇದರಿಂದ ಅಪಾಯವೇ ಹೆಚ್ಚು ಎಂದು ಹೇಳಿದ್ದಾರೆ.

ಶಾಸಕ ತನ್ವೀರ್ ಸೇಠ್ ಮಾತನಾಡಿ ಚಾಮುಂಡಿ ಬೆಟ್ಟ, ಅರಮನೆಯಲ್ಲಿ ಮಾತ್ರ ಕಾರ್ಯಕ್ರಮ ಮಾಡಿ ಅಂತ ಸಲಹೆ ಕೊಟ್ಟಿದ್ದೆ. ಹೈಪವರ್ ಕಮಿಟಿ ನನ್ನ ಸಲಹೆ ಒಪ್ಪಿದೆ. ಆದರೆ ಊರು ತುಂಬೆಲ್ಲ ದೀಪಾಲಂಕಾರ ಮಾಡಿಕೊಂಡಿದ್ದಾರೆ. ಅದೆಲ್ಲವೂ ಬೇಕಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು ಮಾಡಬೇಕಾದ ಕೆಲಸಗಳನ್ನು ಆರೋಗ್ಯ ಸಚಿವರು ಮಾಡುತ್ತಿದ್ದಾರೆ. ದಸರಾ ತಾಯಿ ಚಾಮುಂಡೇಶ್ವರಿಯ ಹಬ್ಬ. ದಸರಾ ಅದ್ಧೂರಿಯಾಗಿ ಆಗಬೇಕೆಂಬುದು ಸರಿ. ಆದರೆ ಈ ವರ್ಷ ಜನ ಸೇರಿಸಿದರೆ ಸಮಸ್ಯೆ ಆಗುತ್ತೆ. ಆದ್ದರಿಂದ ಅತ್ಯಂತ ಸರಳವಾಗಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರು ಕನ್ನಡ ವೇದಿಕೆಯು  ಕೊರೋನಾ ಸೋಂಕು ಹೆಚ್ಚುತ್ತಿರುವ ಸಂದರ್ಭ ದಸರಾ ಆಚರಣೆ ಮಾಡುವುದನ್ನು ವಿರೋಧಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೊರೋನಾ ಹೆಮ್ಮಾರಿ ತಾರಕಕ್ಕೇರಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ರಾಜ್ಯದ ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರು ಕೊರೋನಾದ ಕೇಂದ್ರಬಿಂದುವಾಗಿರುವುದು ಆತಂಕದ ಸಂಗತಿ. ಈ ನಡುವೆ ದಸರಾ ಅನುದಾನ 15ಕೋಟಿ ದುರ್ಬಳಕೆ ಮಾಡಿಕೊಂಡು ದಸರಾ ಸಮಿತಿ ರಚಿಸಿಕೊಂಡು ದೀಪಾಲಂಕಾರಕ್ಕೆ ಮುಂದಾಗಿರುವುದು ಸರ್ಕಾರದ ಮೂರ್ಖತನದ ಪರಮಾವಧಿ. 15ಕೋಟಿ ದಸರಾಗೆ ವಿನಿಯೋಗಿಸುವ ಬದಲು ನಗರದಲ್ಲಿ ಹೆಚ್ಚಿನ ಕ್ಯಾಂಪ್ ತೆರೆದು ಕೊರೋನಾ ರೋಗಿಗಳಿಗೆ ಸ್ಪಂದಿಸಲಿ. ಅದರ ಬದಲು ಎಲ್ಲವಕ್ಕೂ ಅಂತರ ಕಾಪಾಡಿ ಎಂದು ಹೇಳುವ ಸರ್ಕಾರ ತಾನೇ ಎಡವಟ್ಟು ಮಾಡಿಕೊಂಡು ದಸರಾದಲ್ಲಿ ಪಾಲ್ಗೊಳ್ಳುವ ನಾಗರಿಕರು, ಆರಕ್ಷಕರು, ಗೃಹರಕ್ಷಕರಿಗೆ ಕೊರೋನಾ ವಕ್ಕರಿಸಿದರೆ ಇದರ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆಯೇ ಎಂದು ಪ್ರಶ್ನಿಸಿದ್ದಾರೆ.

ಇನ್ನು ದಸರಾ ಆಚರಣೆಯಿಂದ ಅನಾಹುತ ಉಂಟಾದರೆ ಸರ್ಕಾರದ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಿ ಮೈಸೂರು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು