News Karnataka Kannada
Friday, April 19 2024
Cricket
ಮೈಸೂರು

ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲ: ಶಾಸಕ ರಿಜ್ವಾನ್ ಅರ್ಷದ್ ಆರೋಪ

Photo Credit :

ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲ: ಶಾಸಕ ರಿಜ್ವಾನ್ ಅರ್ಷದ್ ಆರೋಪ

ಮೈಸೂರು: ಕೊರೋನಾ ನಿಯಂತ್ರಣ ವಿಚಾರದಲ್ಲಿ ಮೈಸೂರು ಅನಾಥವಾಗಿದೆ. ಕೊರೋನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಗಂಭೀರವಾಗಿ ಆರೋಪಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾನ್ಯ ಕಾಯಿಲೆ ರೋಗಿಗಳು ಬೆಡ್ಗಳಿಗಾಗಿ ಪರದಾಡುತ್ತಿದ್ದಾರೆ. ಮೈಸೂರಿನಲ್ಲಿ ಈವರೆಗೆ ಖಾಸಗಿ ಆಸ್ಪತ್ರೆಗಳ ಜೊತೆ ಮೀಟಿಂಗ್ ಮಾಡಿಲ್ಲ. ಕೊರೋನಾ ನಡುವೆಯೂ ಸರ್ಕಾರ ವರ್ಗಾವಣೆ ದಂಧೆಗಿಳಿದಿದೆ ಎಂದು ಆರೋಪಿಸಿದರು.

ಕೊರೋನಾ ಹೆಚ್ಚುತ್ತಿರುವ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸರ್ಕಾರ ಕೇವಲ ಪ್ರಚಾರಕ್ಕಾಗಿ ಮುಖಪುಟದ ಜಾಹಿರಾತುಗಳನ್ನು ನೀಡುತ್ತಿದೆ. ಆದರೆ ಜಾಹೀರಾತಿನ ಉದ್ದೇಶ ಈವರೆಗೆ ಈಡೇರಿಲ್ಲ. ಹಾಸಿಗೆ ದಿಂಬು, ಗ್ಲೌಸ್, ಉಪಕರಣ ಖರೀದಿಯಲ್ಲೂ ಕೋಟ್ಯಾಂತರ ಭ್ರಷ್ಟಾಚಾರ ನಡೆದಿದೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಅಧರ್ಮದ ಕೆಲಸ ಮಾಡುತ್ತಿದೆ. ಮೈಸೂರನ್ನು ಅನಾಥವಾಗಿ ಬಿಡದೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ದಸರಾವನ್ನು ಸರಳವಾಗಿ ಆಚರಿಸಬೇಕು. ಸಂಪೂರ್ಣವಾಗಿ ದಸರಾ ಆಚರಿಸದೆ ಇರಬಾರದು. ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ, ದಸರಾ ನಾಡ ಹಬ್ಬ ಎಂದರು.

ರಾಜಧಾನಿಯಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಪ್ರತಿಕ್ರಿಯಿಸಿ ಡ್ರಗ್ಸ್ ಮಾಫಿಯಾ ಒಂದು ದೊಡ್ಡ ಇಂಡಸ್ಟ್ರಿ ರೀತಿ ಬೃಹದಾಕಾರವಾಗಿ ಬೆಳೆದಿದೆ. ಈ ಸಂಬಂಧ ನಾನು ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದೆ. ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಿ ಅಂತ ವೈಯುಕ್ತಿಕವಾಗಿ ಮನವಿ ಮಾಡಿದ್ದೇನೆ ಎಂದರು.

ಸಿನಿಮಾ ಇಂಡಸ್ಟ್ರಿಗೂ ಡ್ರಗ್ಸ್ ಮಾಫಿಯಾ ನಂಟು ವಿಚಾರಕ್ಕೆ ಪ್ರತಿಕ್ರಿಯಿಸಿ ನನಗೆ ಸಿನಿಮಾ ರಂಗದ ನಂಟು ಕಡಿಮೆ. ಆದರೆ ಸಿನಿಮಾ ರಂಗ ಇರಲಿ, ವಿದ್ಯಾರ್ಥಿಗಳಾಗಿರಲಿ ಇದು ಮನುಷ್ಯತ್ವಕ್ಕೆ ಧಕ್ಕೆ ತರುವ ಕೆಲಸ ಎಂದರು. ಕೆಜೆ ಹಳ್ಳಿ ಗಲಭೆಕೋರರು ಗಾಂಜಾ ಸೇವನೆ ಆರೋಪಕ್ಕೆ ಪ್ರತಿಕ್ರಿಯಿಸಿ ನಿಶ್ಚಿತವಾಗಿ ಕೆಲ ಯುವಕರು ಗಾಂಜಾ ಅಫೀಮಿಗೆ ಬಲಿಯಾಗಿದ್ದಾರೆ. ಡಿಜೆ ಹಳ್ಳಿ ವಿಚಾರದಲ್ಲಿ ಗಾಂಜಾ ಸೇವಿಸಿರಲಿ, ಬಿಡಲಿ ಆರೋಪಿಗಳಿಗೆ ಶಿಕ್ಷೆ ಯಾಗಬೇಕು. ಶಾಲಾ ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳನ್ನು ಡ್ರಗ್ಸ್ಗೆ ಅಡಿಕ್ಟ್ ಮಾಡಿಸುವ ದೊಡ್ಡ ಮಾಫಿಯಾ ಇದೆ. ಪೊಲೀಸರು ಸೀರಿಯಸ್ ಆದರೆ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಬಹುದು. ಪೊಲೀಸರು ಪ್ರಮಾಣ ಮಾಡಿ ಹೊರಟರೆ ನೂರಕ್ಕೆ ನೂರರಷ್ಟು ಕಡಿವಾಣ ಹಾಕಬಹುದು. ಪೊಲೀಸರಿಗೆ ಗೊತ್ತಿಲ್ಲದೆ ಯಾವ ದಂಧೆಯೂ ನಡೆಯಲ್ಲ ಎನ್ನುವ ಮೂಲಕ ಡ್ರಗ್ಸ್ ಮಾಫಿಯಾಗೆ ಪೊಲೀಸರೆ ಕಾರಣ ಎಂದು ಪರೋಕ್ಷವಾಗಿ ಆರೋಪಿಸಿದರು.

ಕಾಂಗ್ರೆಸ್ ಸತ್ಯಶೋಧನಾ ಸಮಿತಿಯಿಂದ ವರದಿ ಸಲ್ಲಿಕೆಗೆ ಪ್ರತಿಕ್ರಿಯಿಸಿ ವರದಿ ಸಲ್ಲಿಸಲು ಯಾವುದೇ ವಿಳಂಬ ಮಾಡಿಲ್ಲ. ನಾವು ಒಂದು ತಿಂಗಳೊಳಗೆ ವರದಿ ಪಡೆಯುತ್ತೇವೆ ಎಂದು ಹೇಳಿದ್ದೆವು. ಶೀಘ್ರದಲ್ಲೇ ಕೆಪಿಸಿಸಿಗೆ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಲಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು