News Karnataka Kannada
Saturday, April 13 2024
Cricket
ಮೈಸೂರು

ಕೆಲಸವಿಲ್ಲದೆ ಕಂಗಾಲಾದ ಆದಿವಾಸಿಗಳಿಗೆ ಆಹಾರ ವಿತರಣೆ

Photo Credit :

ಕೆಲಸವಿಲ್ಲದೆ ಕಂಗಾಲಾದ ಆದಿವಾಸಿಗಳಿಗೆ ಆಹಾರ ವಿತರಣೆ

ಮೈಸೂರು: ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿದ್ದು ಕಾಡಂಚಿನ ಆದಿವಾಸಿಗಳ ಬದುಕು ಮೂರಾಬಟ್ಟೆಯಾಗಿದೆ.

ಮಳೆಗಾಲದ ಈ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಕೈ ತುಂಬಾ ಕೆಲಸವಿರಬೇಕಿತ್ತು. ಆದರೆ ಈ ಬಾರಿ ಆ ರೀತಿಯಾಗಿಲ್ಲ. ಬೆಳೆ ಬೆಳೆಯಲು ರೈತರು ಮುಂದಾಗಿಲ್ಲ. ಕಾರಣ ಬಂಡವಾಳ ಹಾಕಿ ಕೃಷಿ ಮಾಡುವ ಸ್ಥಿತಿಯಲ್ಲಿ ರೈತರು ಇಲ್ಲವಾಗಿದ್ದಾರೆ. ಹೀಗಾಗಿ ಕೃಷಿ ಕೆಲಸ ಕಾರ್ಯಗಳ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಆದಿವಾಸಿ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತು ಕೊಳ್ಳುವಂತಾಗಿದೆ.

ಹೆಚ್ಚಿನವರು ತಂಬಾಕು ಬೆಳೆಯುತ್ತಿದ್ದರಲ್ಲದೆ, ಕೊಡಗಿನಲ್ಲಿ ಗದ್ದೆ ಮತ್ತು ಕಾಫಿ ತೋಟದ ಕೆಲಸಗಳಿಗೆ ಹೋಗುತ್ತಿದ್ದರಾದರೂ ಈಗ ಕೊರೋನಾ ಕಾರಣದಿಂದ ಹೋಗುವಂತಿಲ್ಲ. ಇದರಿಂದ ಹಲವು ಸಮಯಗಳಿಂದ ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ.

ಇವರ ಕಷ್ಟವನ್ನರಿತ ಐಟಿ ಫಾರ್ ಚೇಂಜ್ (ಪ್ರಕ್ರಿಯೆ)  ಹಾಗೂ ಕಾಸ್ಮಿಜೆಂಟ್ ಸ್ವಯಂ ಸೇವಾ ಸಂಸ್ಥೆಗಳು ಸಹಾಯಕ್ಕೆ ಮುಂದಾಗಿದ್ದು, ಹನಗೋಡು ಹೋಬಳಿಯ ನೇರಳಕುಪ್ಪೆ ಎ ಮತ್ತು ಬಿ ಗಿರಿಜನ ಹಾಡಿ ಹಾಗೂ ನೇರಳಕುಪ್ಪೆ ಗ್ರಾಮದ ಸಂಕಷ್ಟದಲ್ಲಿರುವ ಆದಿವಾಸಿ ಹಾಗೂ ಕೂಲಿ ಕಾರ್ಮಿಕ ಕುಟುಂಬಕ್ಕೆ ಆಹಾರ ಕಿಟ್‍ಗಳನ್ನು ವಿತರಿಸುವ ಮೂಲಕ ನೆರವಾಗಿದ್ದಾರೆ.

ಸಂಸ್ಥೆಗಳ ವತಿಯಿಂದ 150 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗಿದ್ದು ಅಕ್ಕಿ, ಬೇಳೆ, ಅಡುಗೆಎಣ್ಣೆ, ಉಪ್ಪು, ಗೋದಿಹಿಟ್ಟು, ಸಾಂಬಾರ್ ಪುಡಿ, ಸೋಪು, ಸ್ಯಾನಿಟೈಜರ್, ಮಾಸ್ಕ್,  ಸೇರಿದಂತೆ ಇತರೆ ಪದಾರ್ಥಗಳನ್ನು ನೀಡಲಾಗಿದೆ.

ಈ ಬಗ್ಗೆ ಮಾತನಾಡಿದ ಸಂಸ್ಥೆಯ ಶ್ರೀಜಾ ಅವರು  ನಮ್ಮ ಸಂಸ್ಥೆಯ ಮುಖ್ಯಸ್ಥರಾದ ಅನುಪಮ ಸುರೇಶ್ ಅವರ ಮಾರ್ಗದರ್ಶನದಲ್ಲಿ ಕೊರೋನಾ ಹಾಗೂ  ಕಳೆದ ವರ್ಷದ ಪಕೃತಿ ವಿಕೋಪದ ಸಮಯದಲ್ಲಿ ಸಾವಿರಾರು ಬಡ ಗಿರಿಜನ ಕುಟುಂಬಗಳಿಗೆ ಪಡಿತರ ಕಿಟ್‍ಗಳನ್ನು ವಿತರಿಸುತ್ತಿದ್ದು, ತಾವುಗಳು ಈ ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರ್ಕಾರದ ನಿಯಮಗಳನ್ನು ತಪ್ಪದೆ ಪಾಲಿಸಿ ಎಂದರಲ್ಲದೆ, ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಿ ಒಬ್ಬರಿಗೊಬ್ಬರು  ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಅನಾವಶ್ಯಕವಾಗಿ ಬೇರೆ ಗ್ರಾಮಗಳಿಗೆ ಪ್ರಯಾಣಿಸದೆ ತಮ್ಮ ಹೊಲ-ಮನೆಗಳಲ್ಲೇ ಉಳಿದು ತಮ್ಮ  ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ದೊಡ್ಡಹೆಜ್ಜೂರು ಗ್ರಾ.ಪಂ.ಮಾಜಿ ಅಧ್ಯಕ್ಷ ದಾ.ರಾ.ಮಹೇಶ್ ಮಾತನಾಡಿ ಈ ಭಾಗದ ಕೂಲಿ ಕಾರ್ಮಿಕರು ಕಳೆದ ಎರಡು, ಮೂರು  ವಾರಗಳಿಂದ ಕೊಡಗು ಜಿಲ್ಲೆಯಲ್ಲಿ  ಕೂಲಿ ಕೆಲಸವಿಲ್ಲದ ಕಾರಣ ಕಾರ್ಮಿಕರಿಗೆ ಆಹಾರದ ಸಮಸ್ಯೆ ಉಂಟಾಗಬಾರದೆಂದು ಐಟಿ ಫಾರ್ ಚೇಂಜ್ (ಪ್ರಕ್ರಿಯೆ) ಹಾಗೂ ಕಾಸ್ಮಿಜೆಂಟ್ ಸ್ವಯಂ ಸೇವಾ ಸಂಘದವರ ನೆರವಿನಿಂದ ಕಿಟ್  ನೀಡುತ್ತಿದ್ದು ಇದನ್ನು ತಾವುಗಳು ಸದ್ಭಳಕೆ ಮಾಡಿಕೊಂಡು ಕೊರೋನಾ ಸಾಂಕ್ರಾಮಿಕ ರೋಗದಿಂದ ದೂರವಿರಬೇಕೆಂದು ಹೇಳಿದರು.

ಆಹಾರಕಿಟ್ ವಿತರಣೆ ವೇಳೆ ನೇರಳಕುಪ್ಪೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮುತ್ತಮ್ಮ,  ಮಾಜಿ ಉಪಾಧ್ಯಕ್ಷೆ ಸುಂದರಮ್ಮ ಮಹದೇವ್, ಮಾಜಿ ಸದಸ್ಯರಾದ ಮಧುರ, ಬಾಬು ಸೇರಿದಂತೆ  ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು