News Karnataka Kannada
Wednesday, April 17 2024
Cricket
ಮೈಸೂರು

ಕೃಷಿ ಮಸೂದೆ ವಿರುದ್ಧ ಮೈಸೂರಿನಲ್ಲಿ ಕೃಷಿ ಸಂಘಟನೆಗಳ ಪ್ರತಿಭಟನೆ

Photo Credit :

ಕೃಷಿ ಮಸೂದೆ ವಿರುದ್ಧ ಮೈಸೂರಿನಲ್ಲಿ ಕೃಷಿ ಸಂಘಟನೆಗಳ ಪ್ರತಿಭಟನೆ

ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಹಾಗೂ ಕೃಷಿ ಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಮಸೂದೆ ಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ ಸೇರಿದಂತೆ ಸಂಘಟನೆಗಳು ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ಚಳವಳಿ ನಡೆಸಿವೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಈ ಕರಾಳ ಕಾಯ್ದೆಯಿಂದ ಬಾಧಿತರಾಗಿರುವ ಎಲ್ಲ ಜನರು ಸಮುದಾಯಗಳು ಸ್ವಯಂ ಪ್ರೇರಣೆಯಿಂದ ತಮ್ಮ ಎಲ್ಲಾ ಕೆಲಸ ಕಾರ್ಯ ಮತ್ತು ವಹಿವಾಟು ಸ್ಥಗಿತಗೊಳಿಸಿ ವಿರೋಧ ವ್ಯಕ್ತಪಡಿಸಿದ್ದಾರೆಂದರು.

ಕೇಂದ್ರ ಸರ್ಕಾರ ಜೆಪಿಸಿಗಳಿಗೆ ಒಪ್ಪಿಸಿ ಹಾಗೂ ಸಾರ್ವಜನಿಕವಾಗಿ ಚರ್ಚಿಸಿ ನಂತರ ಪಾರ್ಲಿಮೆಂಟಿನಲ್ಲಿ ವಿವರವಾಗಿ ಪರಿಶೀಲಿಸಿ ಸಾವಧಾನವಾಗಿ ಈ ಮಸೂದೆಗಳ ಕುರಿತು ನಿರ್ಧರಿಸಬಹುದಾಗಿತ್ತು. ಇಷ್ಟೊಂದು ಅವಸರದಿಂದ ಅದು ಕೂಡ ಕೋವಿಡ್-19 ನಿಂದ ತೀವ್ರವಾಗಿ ಬಾಧಿತರಾಗಿರುವಾಗ ಇದರ ಕುರಿತು ಗಮನ ಹರಿಸಿ ಜನತೆಯನ್ನು ರಕ್ಷಿಸುವ ಬದಲು ಇಷ್ಟೊಂದು ಅವಸರವಾಗಿ ಮತ್ತು ಬಲವಂತವಾಗಿ ಪಾರ್ಲಿಮೆಂಟ್ ನೀತಿಗಳನ್ನು ಉಲ್ಲಂಘಿಸಿ ಈ ಬಿಲ್ ಗಳನ್ನು ದೇಶದ ಮೇಲೆ ಹೇರುವ ಅವಶ್ಯಕತೆಯಾದರೂ ಏನಿತ್ತು? ಯಾರ ಒತ್ತಡವಿತ್ತು? ಯಾರನ್ನು ತೃಪ್ತಿಪಡಿಸಬೇಕಿತ್ತು ಎಂದು ಪ್ರಶ್ನಿಸಿದರು.

 ಒಂದು ವೇಳೆ ಸರ್ಕಾರ ತನ್ನ ಹಠವನ್ನು ಮುಂದುವರಿಸಿ ಸುಗ್ರೀವಾಜ್ಞೆ ಗಳನ್ನು ಕಾಯ್ದೆಯನ್ನಾಗಿಸಲು ರಾಜ್ಯದಲ್ಲಿ ಕ್ರಮ ವಹಿಸಿದಲ್ಲಿ ಈ ಸ್ವಯಂ ಪ್ರೇರಿತ ಬಂದ್ ಮಾತ್ರವಲ್ಲ ಮತ್ತಷ್ಟು ತೀವ್ರವಾಗಿ ಚಳವಳಿಯನ್ನು ಸಂಘಟಿಸುವುದಾಗಿ ಎಚ್ಚರಿಕೆ ನೀಡಿದರು. ಭೂಸುಧಾರಣಾ ಕಾಯಿದೆ ತಿದ್ದುಪಡಿ ಹಿಂಪಡೆಯಬೇಕೆಂದು ರಾಜ್ಯ ಸರ್ಕಾರಕ್ಕೆ ಈ ಸಂಜೆಯವರೆಗೆ ಗಡುವನ್ನು ನೀಡಿದ್ದೇವೆ . ಇಲ್ಲದಿದ್ದರೆ ಮುಂದೆ ರಾಜ್ಯ ವ್ಯಾಪ್ತಿಯಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು