News Karnataka Kannada
Saturday, April 20 2024
Cricket
ಮೈಸೂರು

ಕೂಲಿ ಕಾರ್ಮಿಕನ ಮಕ್ಕಳಿಬ್ಬರು ಈಗ ಸಬ್ ಇನ್ಸ್‌ಪೆಕ್ಟರ್

Photo Credit :

ಕೂಲಿ ಕಾರ್ಮಿಕನ ಮಕ್ಕಳಿಬ್ಬರು ಈಗ ಸಬ್ ಇನ್ಸ್‌ಪೆಕ್ಟರ್

ಮೈಸೂರು: ನಾಗರಹೊಳೆ ರಾಷ್ಟ್ರಿಯ ಉದ್ಯಾನವನದ ಕಾಡಂಚಿನ ಗ್ರಾಮ ಬೂದಿತಿಟ್ಟಲ್ಲಿ ವಾಸವಿರುವ ಬಡ ಕೂಲಿ ಕಾರ್ಮಿಕನ ಮಕ್ಕಳಿಬ್ಬರು ರಾಜ್ಯದ ಕಾನೂನು ಸುವ್ಯವಸ್ಥೆ ಪರಿಪಾಲನೆಗೆ ಆಯ್ಕೆಯಾಗುವ ಮೂಲಕ ಗ್ರಾಮ ಹಾಗೂ ಓದಿದ ಶಾಲೆಗೆ ಕೀರ್ತಿ ತಂದಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಕಟ್ಟಕಡೆಯ ಮೂಲಭೂತ ಸೌಕರ್ಯ ವಂಚಿತ ಬೂದಿತಿಟ್ಟು ಗ್ರಾಮದ ಕೂಲಿಕಾರ್ಮಿಕ ಕರಿನಾಯಕ ಹಾಗೂ ಶಾರದಮ್ಮ ದಂಪತಿ ಪುತ್ರರಾದ ಮನು ಮತ್ತು ವಿನು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಪೆ‌ಕ್ಟರ್ ಆಗಿ ಆಯ್ಕೆಯಾದವರು. ಇವರು ಬೂದಿತಿಟ್ಟಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮತ್ತು ಪಿಯುಸಿಯನ್ನು ಪಿರಿಯಾಪಟ್ಟಣ ಸರ್ಕಾರಿ ಕಾಲೇಜು, ಪದವಿ ಶಿಕ್ಷಣವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆದಿದ್ದಾರೆ. ಮನು ಅವರು 2014 ರ ಬ್ಯಾಚ್‍ನಲ್ಲಿ ನಡೆದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇರ ನೇಮಕಾತಿಯಲ್ಲಿ ರಾಜ್ಯಕ್ಕೆ 30ನೇ ರ್ಯಾಂಕ್ ಗಳಿಸಿ ಮೈಸೂರು ಪೊಲೀಸ್ ಆಕಾಡೆಮಿಯಲ್ಲಿ ತರಬೇತಿ ಪಡೆದು ಬೆಂಗಳೂರಿನ ಕೊತ್ನಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಸಹೋದರ ವಿನು 2019ನೇ ಸಾಲಿನಲ್ಲಿ ಹೊರಡಿಸಿದ ಸಬ್ ಇನ್ಸ್‌ಪೆಕ್ಟರ್ ನೇರ ನೇಮಕಾತಿಯಲ್ಲಿ 200 ಹುದ್ದೆಗಳಲ್ಲಿ 111 ರ್ಯಾಂಕ್ ಹಾಗೂ 300 ಹುದ್ದೆಗಳ ನೇರ ನೇಮಕಾತಿ ಯಲ್ಲಿ 89 ನೇ ರ್ಯಾಂಕ್ ಪಡೆದಿದ್ದು ಈಗ 89 ನೇ ರ್ಯಾಂಕ್‍ನಡಿಯಲ್ಲಿ ತರಬೇತಿ ಪಡೆಯಲು ಅಣಿಯಾಗಿದ್ದಾರೆ.

ಎರಡು ಪರಿಕ್ಷೆಯಲ್ಲೂ ಸಹೋದರರಿಬ್ಬರು ಎಸ್.ಟಿ. ಮೀಸಲಾತಿ ಇದ್ದರೂ ಮೀಸಲಾತಿ ಪಡೆಯದೇ ಸಾಮಾನ್ಯ ಕೋಟದಡಿಯಲ್ಲಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಒಬ್ಬ ಬಡ ಕೂಲಿಕಾರ್ಮಿಕ ಹಾಗೂ ರಸ್ತೆ ಬದಿಯಲ್ಲಿ ಬಟ್ಟೆ ಮಾರಾಟ ಮಾಡಿ ತನ್ನ ಜೀವನ ಬಂಡಿ ಸಾಗಿಸುವುದರೊಂದಿಗೆ ತನ್ನ ಮಕ್ಕಳಿಬ್ಬರನ್ನೂ ಸರ್ಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡಿಸಿ ಸಹೋದರರಿಬ್ಬರನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಾಡಿದ್ದಾರೆ. ಈಗಲೂ ರಸ್ತೆ ಬದಿಯ ವ್ಯಾಪಾರವನ್ನು ಬಿಡದೇ ತನ್ನ ಜೀವನ ಬಂಡಿ ಸಾಗಿಸುತ್ತಿರುವುದು ಹೆಮ್ಮೆಯ ವಿಷಯ. ಸಹೋದರರ ಈ ಸಾಧನೆ ನಿಜಕ್ಕೂ ಶ್ಲಾಘನೀಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು