News Karnataka Kannada
Monday, April 22 2024
Cricket
ಮೈಸೂರು

ಕಾರಾಫುರದ ಬಾವಿಯಲ್ಲಿ ಪತ್ತೆಯಾದ ಚಿರತೆ ಸೆರೆಗೆ ಅರಣ್ಯ ಇಲಾಖೆ  ಹರಸಾಹಸ 

Photo Credit :

ಕಾರಾಫುರದ ಬಾವಿಯಲ್ಲಿ ಪತ್ತೆಯಾದ ಚಿರತೆ ಸೆರೆಗೆ ಅರಣ್ಯ ಇಲಾಖೆ  ಹರಸಾಹಸ 

ಮೈಸೂರು  ;  ಎಚ್.ಡಿ.ಕೋಟೆ ತಾಲ್ಲೂಕಿನ ಕಾರಾಪುರ ಗ್ರಾಮದಲ್ಲಿ ಬಳಿ ನೀರಿಲ್ಲದ ಬಾವಿಯೊಂದಕ್ಕೆ ಚಿರತೆ ಬಿದ್ದು ಅದನ್ನು ಮೇಲೆತ್ತಲು ಅರಣ್ಯ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಈ ಬಾವಿಗೆ ಚಿರತೆ ಬಿದ್ದಿರುವುದನ್ನು  ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಅಂತರ ಸಂತೆ ವಲಯ ಅರಣ್ಯಾಧಿಕಾರಿ ಸಿದ್ದರಾಜು ಅವರೇ ಸ್ವತಃ ಪಂಜರದೊಳಗೆ ಕುಳಿತು  ಬಾವಿಯೊಳಗೆ ಇಳಿದು ಪರಿಶೀಲಿಸಿದರೂ ಚಿರತೆ ಪತ್ತೆ ಆಗಿರಲಿಲ್ಲ. 

ನಂತರ ಪುನಃ ಅರಣ್ಯ ಇಲಾಖೆ ಕ್ಯಾಮೆರಾ ಬಾವಿಯೊಳಗೆ ಬಿಟ್ಟು ಪರಿಶೀಲಿಸಿದಾಗ ಚಿರತೆ ಪತ್ತೆಯಾಗಿದೆ.  . ಚಿರತೆ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಸತತ ಮೂರು ದಿನಗಳಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಚಿರತೆಯನ್ನು ಮೇಲೆತ್ತುವವರೆಗೂ ಅದಕ್ಕೆ ಆಹಾರವಾಗಿ ಕೋಳಿ ಮಾಂಸವನ್ನು ಬಾವಿಗೆ ಹಾಕಲಾಗುತ್ತಿತ್ತು. ಮಾಂಸ ಮತ್ತು ನೀರನ್ನು ಚಿರತೆಗೆ ಕೊಡಲಾಗುತ್ತಿದೆ. ಸ್ಥಳದಲ್ಲಿ ಜನಜಂಗುಳಿ ನಿಯಂತ್ರಿಸಲು ಪೋಲೀಸರು  ಸಾಹಸ ಪಡುತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು