News Karnataka Kannada
Thursday, April 25 2024
ಮೈಸೂರು

ಐಸ್‌ಕ್ರೀಂ ಬಾಕ್ಸ್‌ನಲ್ಲಿ ಸಿಲುಕಿ ಬಾಲಕಿಯರ ಸಾವು

Untitled 134
Photo Credit :

ನಂಜನಗೂಡು:  ಬೇಸಿಗೆಯ ರಜೆಯ ಹಿನ್ನೆಲೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು  ಐಸ್‌ಕ್ರೀಂ  ಪೆಟ್ಟಿಗೆಯೊಳಗೆ ಅಡಗಿ ಕುಳಿತು ಕೊಳ್ಳಲು ಮುಂದಾಗಿ ಉಸಿರುಗಟ್ಟಿ  ಸಾವನ್ನಪ್ಪಿರುವ ಘಟನೆ ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ.

ನಾಗರಾಜು ಮತ್ತು ಚಿಕ್ಕದೇವಮ್ಮ  ಎಂಬುವರ ಪುತ್ರಿ ಭಾಗ್ಯ (12),   ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತ ಬಾಲಕಿಯರು.

ಮೃತ ಬಾಲಕಿಯರಾದ ಭಾಗ್ಯ ಹಾಗೂ ಕಾವ್ಯ ಬುಧವಾರ ಬೆಳಿಗ್ಗೆ ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಆಟವಾಡುತ್ತಿದ್ದರು. ಈ ವೇಳೆ  ಕಣ್ಣಾಮುಚ್ಚಾಲೆ ಆಟವಾಡುವ ಸಂದರ್ಭ ತಗಡೂರು ಗ್ರಾಮದ ಹನುಮಂತನಾಯಕ ಎಂಬುವರಿಗೆ ಸೇರಿರುವ   ಐಸ್ ಕ್ರೀಮ್ ಬಾಕ್ಸ್ ಒಳಗೆ ಅವಿತಿದ್ದಾರೆ.

ಈವೇಳೆ ಬಾಕ್ಸ್  ಲಾಕ್ ಆಗಿದ್ದು,  ಬಾಕ್ಸ್ ಒಳಗೆ ಸೇರಿದ ಬಾಲೆಯರು ಹೊರಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಇವರೊಡನೆ ಆಟವಾಡುತ್ತಿದ್ದ ಇತರ ಮಕ್ಕಳು ಅಡಗಿರುವ ಬಾಲಕಿಯರಿಬ್ಬರು ಅರ್ಧ ಗಂಟೆಯಾದರೂ ಹೊರಬಾರದ ಕಾರಣ ಮೇಲಿನಿಂದ ಲಾಕ್ ತೆಗೆದಿದ್ದಾರೆ.  ಆದರೆ ಆ ವೇಳೆಗಾಗಲೇ  ಬಾಲಕಿಯರು  ಉಸಿರು ಗಟ್ಟಿ ಸಾವನ್ನಪ್ಪಿದ್ದಾರೆ.   ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು