News Karnataka Kannada
Monday, April 22 2024
Cricket
ಮೈಸೂರು

ಏಬಿಎಂ ಕಂಪೆನಿಯಿಂದ ೫೦ ಕೋಟಿ ರೂಪಾಯಿ ವಂಚನೆ

Photo Credit :

ಏಬಿಎಂ ಕಂಪೆನಿಯಿಂದ ೫೦ ಕೋಟಿ ರೂಪಾಯಿ ವಂಚನೆ

ಮೈಸೂರು: ಕೋಟ್ಯಂತರ ರೂ ಹಣವನ್ನು ಬೋಗಸ್ ಷೇರು ಮಾರುಕಟ್ಟೆಯ ಹೆಸರಿನಲ್ಲಿ ವಂಚಿಸಿದ ಪ್ರಕರಣ ಮೈಸೂರಿನ ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೆ ಈ ಹಿಂದೆ ಕೋಟ್ಯಂತರ ರೂಪಾಯಿ .ಹಣವನ್ನು ಹೂಡಿಕೆದಾರರಿಂದ ವಸೂಲಿ ಮಾಡಿಕೊಂಡು ಸ್ಟಾಕ್ ಬ್ರೋಕರ್ ಗಳು ಪರಾರಿಯಾಗಿರುವ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಸಾರ್ವಜನಿಕರಿಂದ ಸಂಗ್ರಹಿಸಿದ 50 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಪಡೆದು ವ್ಯಕ್ತಿಯೋರ್ವ ಪರಾರಿಯಾಗಿರುವ ಘಟನೆ ಗೋಕುಲಂ ಮೂರನೇ ಹಂತದಲ್ಲಿ ನಡೆದಿದೆ. ಈ ಬಗ್ಗೆ ಹಾಸನದ ವಿದ್ಯಾನಗರ ಕುವೆಂಪು ರಸ್ತೆಯ ಕ್ರೈ ಸ್ಟ್ ಸ್ಕೂಲ್ ಬಳಿಯ ನಿವಾಸಿ ಸಿ.ಹೆಚ್.ನಾಗೇಶ್(47)ಎಂಬವರು ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನನ್ನ ಕಾಲೇಜು ಸ್ನೇಹಿತ ಕಾಂತರಾಜು ಎಂಬವರು 2019ರಲ್ಲಿ ತನ್ನ ಕಾರು ಚಾಲಕ ಮಧು ಎಂಬಾತನೊಂದಿಗೆ ಹಾಸನದ ನನ್ನ ಮನೆಗೆ ಬಂದಿದ್ದ. ಮೈಸೂರಿನ ಗೋಕುಲಂ ಮೂರನೆ ಹಂತದ ಕಾಂಟೂರು ರಸ್ತೆಯಲ್ಲಿ ಎಬಿಎಂ ಕಂಪನಿ ನಡೆಸುತ್ತಿರುವುದಾಗಿ ತಿಳಿಸಿ ಈ ಕಂಪನಿಯಲ್ಲಿ ಹಲವರು ಷೇರುಗಳ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ನೀವೂ ಸಹ ತೊಡಗಿಸಿದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದು, ಅವರ ಮಾತನ್ನು ನಂಬಿ 2019ರ ಸೆ.ತಿಂಗಳಲ್ಲಿ 2ಕೋಟಿ ರೂ.ಮತ್ತು 2020ರ ಮೇ ಮಾಹೆಯಲ್ಲಿ 2ಕೋಟಿ ರೂ.ಗಳನ್ನು (1.55ಕೋ.ರೂ ಬ್ಯಾಂಕ್ ಖಾತೆಗೆ ಆರ್ ಟಿಜಿಎಸ್ ಮೂಲಕ ಮತ್ತು 2.45ಕೋ.ರೂಗಳನ್ನು ನಗದಾಗಿ ) ನೀಡಿದ್ದೆ. ನಂತರದಲ್ಲಿ ನಾನು ಹೂಡಿಕೆ ಮಾಡಿರುವ 4ಕೋಟಿ ಹಣಕ್ಕೆ ಡಿವಿಡೆಂಡ್ ನ್ನು ಕೇಳಿದೆನಾದರೂ ಕಾಂತರಾಜು ಸಬೂಬು ಹೇಳುತ್ತಾ ಬಂದ. ನಂತರ ಕಂಪನಿ ನಷ್ಟದಲ್ಲಿದ್ದು ಮುಂದಿನ ದಿನಗಳಲ್ಲಿ ಕೊಡುವುದಾಗಿ ತಿಳಿಸಿದ್ದ. ಇದುವರೆಗೂ ಒಂದು ನಯಾಫೈಸೆ ಡಿವಿಡೆಂಡ್ ನೀಡಿಲ್ಲ. ಫೋನ್ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ. ನಂತರ ನಾನು ಮೈಸೂರು ಗೋಕುಲಂ ಮೂರನೆ ಹಂತದ ಕಾಂಟೂರು ರಸ್ತೆಯಲ್ಲಿ ಆತನ ಕಛೇರಿ ಬಳಿ ಬಂದಾಗ ಬಾಗಿಲು ಮುಚ್ಚಿರುವುದು ಕಂಡು ಬಂತು.

ನನ್ನಿಂದ ಅಸಲು ಹಣ ಹಾಗೂ ಬರಬೇಕಾಗಿದ್ದ ಡಿವಿಡೆಂಡ್ ಹಣ ನೀಡದೆ ನನಗೆ ವಂಚನೆ ಮತ್ತು ನಂಬಿಕೆ ದ್ರೋಹ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನನ್ನ ಹಣವನ್ನು ನನಗೆ ಸಿಗುವಂತೆ ಮಾಡಿ ಎಂದು ಕೋರಿಕೊಂಡಿದ್ದಾರೆ. ವಿವಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುವ ವೇಳೆ ಹಲವು ಪ್ರತಿಷ್ಠಿತ ವ್ಯಕ್ತಿಗಳೂ ಕೂಡ ಈತನ ಬಲೆಗೆ ಬಿದ್ದಿದ್ದು ಲಕ್ಷಾಂತರರೂ. ಹೂಡಿಕೆ ಮಾಡಿದ್ದು ಮೋಸ ಹೋಗಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಲ್ಲರೂ ಉನ್ನತ ಶಿಕ್ಷಣ ಪಡೆದವರೇ ಇರುವುದಾಗಿ ತಿಳಿದು ಬಂದಿದ್ದು ಹೆಚ್ಚಿನ ಹಣ ಮಾಡುವ ಲಾಭದಾಸೆಗೆ ಬಿದ್ದು ಮೋಸ ಹೋಗಿರುವುದು ಮಾತ್ರ ವಿಪರ್ಯಾಸವೇ ಸರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು